For Quick Alerts
ALLOW NOTIFICATIONS  
For Daily Alerts
 

ಬಿಬಿಎಲ್ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ನಲ್ಲಿ 'ಹಾಲಿವುಡ್ ಶೈಲಿ' ಎಂಟ್ರಿ ಕೊಟ್ಟ ಡೇವಿಡ್ ವಾರ್ನರ್

ಶುಕ್ರವಾರ, ಜನವರಿ 12ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ)ನಲ್ಲಿ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಹೆಲಿಕಾಪ್ಟರ್‌ನಲ್ಲಿ ಹಾಲಿವುಡ್ ಮಾದರಿಯಲ್ಲಿ ಪ್ರವೇಶ ಮಾಡಿದರು.

ಸಿಡ್ನಿ ಥಂಡರ್ಸ್ ತಂಡದ ಪರ ಆಡುತ್ತಿರುವ ಡೇವಿಡ್ ವಾರ್ನರ್ ಅವರು ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧದ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಮೈದಾನಕ್ಕೆ ಗ್ರ್ಯಾಂಡ್ ಎಂಟ್ರಿ ನೀಡುವ ಮೂಲಕ ಗಮನಸೆಳೆದರು.

BBL 2024: David Warner Makes A Hollywood-style Helicopter Entry for the BBL Match


ಹಂಟರ್ ವ್ಯಾಲಿಯಲ್ಲಿ ನಡೆದ ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಂಡು ನೇರವಾಗಿ ಬಿಬಿಎಲ್ ಪಂದ್ಯಕ್ಕೆ ಹಾರಿದ್ದು, ಆಸ್ಟ್ರೇಲಿಯಾ ಬ್ಯಾಟರ್‌ನ ವಿಶಿಷ್ಟ ಪ್ರವೇಶಕ್ಕೆ ಕಾರಣವಾಗಿದೆ. ಡೇವಿಡ್ ವಾರ್ನರ್ ಇತ್ತೀಚೆಗೆ ತಮ್ಮ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

37 ವರ್ಷದ ಬ್ಯಾಟರ್ ಡೇವಿಡ್ ವಾರ್ನರ್ ಪಾಕಿಸ್ತಾನ ತಂಡದ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಅಂತಿಮ ಪಂದ್ಯದಲ್ಲಿ 57 ರನ್ ಗಳಿಸಿದರು ಮತ್ತು ಆಸ್ಟ್ರೇಲಿಯಾ ತಂಡವನ್ನು 3-0 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಲು ಸಹಾಯ ಮಾಡಿದರು.

ಡೇವಿಡ್ ವಾರ್ನರ್ ಅವರ ಅದ್ಭುತ 13 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 112 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾತ್ರವಲ್ಲದೆ, ತಮ್ಮ ಸಹ ಆಟಗಾರರ ಜೊತೆಗೆ, ಮೈದಾನದಲ್ಲಿ ಮನರಂಜನೆಗಾಗಿ ಡೇವಿಡ್ ವಾರ್ನರ್ ವ್ಯಾಪಕವಾಗಿ ಜನಪ್ರಿಯರಾಗಿದ್ದಾರೆ.

ಕ್ರಿಕೆಟ್‌ನಲ್ಲಿ ಡೇವಿಡ್ ವಾರ್ನರ್ ಅವರ ದೃಢಸಂಕಲ್ಪವನ್ನು ಶ್ಲಾಘಿಸಿದ ಅವರ ಸಹ ಆಟಗಾರ ಗುರಿಂದರ್ ಸಂಧು, ಇಡೀ ತಂಡವು ಡೇವಿಡ್ ವಾರ್ನರ್ ಅವರೊಂದಿಗೆ ಕ್ರಿಕೆಟ್ ಆಡಲು ಇಷ್ಟಪಡುತ್ತದೆ ಎಂದು ತಿಳಿಸಿದ್ದಾರೆ.

"ಡೇವಿಡ್ ವಾರ್ನರ್ ಅವರು ನಮಗಾಗಿ ಬಂದು ಆಡಲು ಬಹಳಷ್ಟು ಪ್ರಯತ್ನ ಮಾಡಲಿದ್ದಾರೆ. ನಾವು ಅವರನ್ನು ಇಲ್ಲಿ ನೋಡಲು ಇಷ್ಟಪಡುತ್ತೇವೆ. ಕಳೆದ ವರ್ಷ ವಾರ್ನರ್ ನಮಗೆ ಅದ್ಭುತ ಪ್ರದರ್ಶನ ನೀಡಿದ್ದರು. ಬಹುಶಃ ಅವರು ಇಷ್ಟಪಡುವಷ್ಟು ಹೆಚ್ಚು ರನ್ ಗಳಿಸಲಿಲ್ಲ. ಆದರೆ ತಂಡಕ್ಕೆ ತಮ್ಮ ಜ್ಞಾನವನ್ನು ರವಾನಿಸಿದರು. ಅವರೊಂದಿಗೆ ಆಡುವುದು ಅದ್ಭುತವಾಗಿತ್ತು".

"ಡೇವಿಡ್ ವಾರ್ನರ್ ಉತ್ತಮ ತಂಡದ ಆಟಗಾರರಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರು ಕ್ರಿಕೆಟ್ ಆಡುವುದನ್ನು ಆನಂದಿಸುತ್ತಾರೆ," ಎಂದು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋದಲ್ಲಿ ಗುರಿಂದರ್ ಸಂಧು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಸಿಡ್ನಿ ಸಿಕ್ಸರ್ಸ್ ತಂಡದ ವೇಗಿ ಸೀನ್ ಅಬಾಟ್ ಅವರು ಡೇವಿಡ್ ವಾರ್ನರ್‌ನ ಹೆಲಿಕಾಪ್ಟರ್ ಪ್ರವೇಶವನ್ನು 'ಹಾಲಿವುಡ್ ಶೈಲಿ' ಎಂದು ಕರೆದರು ಮತ್ತು ವಾರ್ನರ್ ವಿರುದ್ಧ ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

"ಅವನು ಸ್ವಲ್ಪ ಹಾಲಿವುಡ್ ಶೈಲಿ ಅಲ್ಲವೇ, ಅದು ಡೇವಿಡ್ ವಾರ್ನರ್ ಅಂದ್ರೆ. ನಾನು ಇಂದು ಲೈಮ್ ಬೈಕ್ ಅನ್ನು ಪಡೆದುಕೊಂಡಿದ್ದೇನೆ ಮತ್ತು ನಾಳೆ ರಾತ್ರಿ ನಾನು ಅದೇ ರೀತಿ ಮಾಡುತ್ತೇನೆ ಮತ್ತು ವಾರ್ನರ್ ಇಳಿಯುತ್ತಿದ್ದಂತೆ ಗೇಟ್‌ನಿಂದ ಹೊರಗೆ ಹೋಗುತ್ತೇನೆ".

"ಡೇವಿಡ್ ವಾರ್ನರ್ ಈ ರೀತಿ ಪ್ರವೇಶಿಸುತ್ತಿರುವುದು ನನಗೆ ಖುಷಿ ತಂದಿದೆ. ಏಕೆಂದರೆ ಕ್ರಿಕೆಟ್‌ನ ಅಭಿಮಾನಿಯಾಗಿರುವ ದೇಶದ ಪ್ರತಿಯೊಬ್ಬರೂ ಬಿಬಿಎಲ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು ನೋಡಲು ಬಯಸುತ್ತಾರೆ ಮತ್ತು ನಾನು ಅವರ ವಿರುದ್ಧ ಆಡಲು ಎದುರು ನೋಡುತ್ತಿದ್ದೇನೆ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು," ಎಂದು ಸೀನ್ ಅಬಾಟ್ ಹೇಳಿದರು.

ಡೇವಿಡ್ ವಾರ್ನರ್ 70.20ರ ಸ್ಟ್ರೈಕ್ ರೇಟ್‌ನಲ್ಲಿ 26 ಶತಕಗಳು ಮತ್ತು 37 ಅರ್ಧ ಶತಕಗಳನ್ನು ಸಿಡಿಸುವ ಮೂಲಕ 44.60ರ ಸರಾಸರಿಯಲ್ಲಿ 8,786 ರನ್‌ಗಳನ್ನು ಕಲೆಹಾಕಿದ ನಂತರ ಟೆಸ್ಟ್ ಕ್ರಿಕೆಟ್‌ನಿಂದ ನಿರ್ಗಮಿಸಿದರು. ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಸ್ಲಿಪ್ ಫೀಲ್ಡರ್‌ಗಳಲ್ಲಿ ಒಬ್ಬರಾಗಿದ್ದು, 91 ಕ್ಯಾಚ್‌ಗಳನ್ನು ಪಡೆದಿದ್ದಾರೆ.

Story first published: Friday, January 12, 2024, 13:44 [IST]
Other articles published on Jan 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+