ಸ್ಫೋಟಕ ಅರ್ಧ ಶತಕ ಚಚ್ಚಿದ ಫ್ಲೆಚರ್ ಬಿಗಿದಪ್ಪಿದ ಮ್ಯಾಕ್ಸ್‌ವೆಲ್: ವಿಡಿಯೋ

ಮೆಲ್ಬರ್ನ್: ಅದ್ಭುತ ಪ್ರದರ್ಶನ ನೀಡಿದ ಆಟಗಾರನನ್ನು ತಂಡದ ನಾಯಕ ಆತ್ಮೀಯವಾಗಿ ಅಭಿನಂದಿಸೋ ದೃಶ್ಯ ಕ್ರಿಕೆಟ್‌ನಲ್ಲಿ ಆಗೀಗ ನೋಡಿರುತ್ತೇವೆ. ಆದರೆ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಶುಕ್ರವಾರ (ಜನವರಿ 15) ಪಂದ್ಯದಲ್ಲಿ ಇಂಥದ್ದೇ ದೃಶ್ಯ ಕೊಂಚ ವಿಶೇಷ ಅನ್ನುವಂತೆ ಗಮನ ಸೆಳೆದಿದೆ.
ಸ್ಫೋಟಕ ಅರ್ಧ ಶತಕ ಚಚ್ಚಿ ಮೆಲ್ಬರ್ನ್ ಸ್ಟಾರ್ಸ್ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಆ್ಯಂಡ್ರೆ ಫ್ಲೆಚರ್‌ನನ್ನು ತಂಡದ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಬಿಗಿದಪ್ಪಿ ಭಾವನಾತ್ಮಕವಾಗಿ ಅಭಿನಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಮೆಲ್ಬರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ ಬಿಬಿಎಲ್ 40ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೆಲ್ಬರ್ನ್ ಸ್ಟಾರ್ಸ್‌ನಿಂದ ಮಾರ್ಕಸ್ ಸ್ಟೋಯ್ನಿಸ್ 13, ಗ್ಲೆನ್ ಮ್ಯಾಕ್ಸ್‌ವೆಲ್ 37, ಹಿಲ್ಟನ್ ಕಾರ್ಟ್‌ರೈಟ್ ಅಜೇಯ 30 ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆ್ಯಂಡ್ರೆ ಫ್ಲೆಚರ್ 49 ಎಸೆತಗಳಿಗೆ 89 ರನ್ ಸೇರಿಸಿದರು. ಸ್ಟಾರ್ಸ್ 20 ಓವರ್‌ಗೆ 2 ವಿಕೆಟ್ ಕಳೆದು 179 ರನ್ ಪೇರಿಸಿತ್ತು.
ಗುರಿ ಬೆನ್ನಟ್ಟಿದ ಅಡಿಲೇಡ್ ಸ್ಟ್ರೈಕರ್ಸ್‌ನಿಂದ ಮ್ಯಾಟ್ ರೆನ್ಶಾ 20, ಜೋನಾಥನ್ ವೆಲ್ಸ್ 18, ಜೇಕ್ ವೀಥರಾಲ್ಡ್ 10 ರನ್ ಬಾರಿಸಿದರು. ಸ್ಟ್ರೈಕರ್ಸ್ 14.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 68 ರನ್ ಬಾರಿಸಿ ಬರೋಬ್ಬರಿ 111 ರನ್‌ನಿಂದ ಶರಣಾಯಿತು. ಮೆಲ್ಬರ್ನ್ ಸ್ಟಾರ್ಸ್‌ನ ಆ್ಯಾಡಂ ಜಂಪಾ 17 ರನ್‌ಗೆ 5 ವಿಕೆಟ್ ಪಡೆದು ಗಮನ ಸೆಳೆದರು. ಫ್ಲೆಚರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications