ಬಿಬಿಎಲ್: ಮೆಕಲಮ್, ಕ್ರಿಸ್‌ಲಿನ್ ಅರ್ಧಶತಕ, ಸಿಡ್ನಿ ಸೋಲಿಸಿದ ಬ್ರಿಸ್ಬೇನ್


ಸಿಡ್ನಿ, ಜನವರಿ 8: ಸಿಡ್ನಿ ಶೋಡೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 8) ನಡೆದ ಬಿಗ್ ಬ್ಯಾಷ್ ಲೀಗ್ 2018-19ರ 24ನೇ ಪಂದ್ಯದಲ್ಲಿ ಸಿಡ್ನಿ ಥಂಡರ್ಸ್ ವಿರುದ್ಧ ಬ್ರಿಸ್ಬೇನ್ ಹೀಟ್ 15 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಸಾಧಿಸಿದೆ. ಬ್ರೆಂಡನ್ ಮೆಕಲಮ್, ಕ್ರಿಸ್‌ಲಿನ್ ಆಕರ್ಷಕ ಅರ್ಧ ಶತಕ ತಂಡದ ಗೆಲುವಿಗೆ ನೆರವಾಯಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕ್ರಿಸ್‌ಲಿನ್ ನಾಯಕತ್ವದ ಬ್ರಿಸ್ಬೇನ್ ಹೀಟ್, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 186 ರನ್ ಬಾರಿಸಿತು. ಮೆಕಲಮ್ 56, ಕ್ರಿಸ್‌ಲಿನ್ 54, ಮ್ಯಾಕ್ಸ್ ಬ್ರ್ಯಾಂಟ್ 36 ರನ್ ಸೇರಿಸಿ ತಂಡವನ್ನು ಬೆಂಬಲಿಸಿದರು. ಇಲ್ಲಿಗೆ ಮೆಕಲಮ್ 365 ಟಿ20 ಪಂದ್ಯಗಳಲ್ಲಿ 52ನೇ ಅರ್ಧಶತಕ ಬಾರಿಸಿದಂತಾಗಿದೆ.
ಸಿಡ್ನಿ ಥಂಡರ್ಸ್ ಇನ್ನಿಂಗ್ಸ್ ವೇಳೆ ಮಳೆ ಅಡ್ಡಿಯಾಗಿದ್ದರಿಂದ ತಂಡಕ್ಕೆ 5.3 ಓವರ್‌ನಲ್ಲಿ 49 ರನ್ ಗುರಿ ನೀಡಲಾಗಿತ್ತು. ಆದರೆ ಸಿಡ್ನಿ ತಂಡ 5.3 ಓವರ್‌ನಲ್ಲಿ ಕೇವಲ 34 ರನ್ ಪೇರಿಸಲಷ್ಟೇ ಶಕ್ತವಾಯಿತು. ಬ್ರಿಸ್ಬೇನ್ ಇನ್ನಿಂಗ್ಸ್ ವೇಳೆ ಜೋನಾಥನ್ ಕುಕ್ 3, ಫವಾದ್ ಅಹ್ಮದ್ 2 ವಿಕೆಟ್ ಕೆಡವಿ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications