Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಸ್ತೆಯ ಮಧ್ಯದಲ್ಲಿ ಕೈ ಕೊಟ್ಟ ಕಾರ್‌ ತಳ್ಳಿದ ಕ್ರಿಕೆಟ್‌ ಆಟಗಾರರು

ಆಸ್ಟ್ರೇಲಿಯಾದಲ್ಲಿ ಸದ್ಯ ಬಿಗ್‌ ಬ್ಯಾಷ್‌ ಲೀಗ್‌ ನಡೆಯುತ್ತಿದೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಇದೇ ವೇಳೆ ಡಿಸೆಂಬರ್ 30 ರಂದು ನಡೆದ ಒಂದು ಘಟನೆ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಾರಿ ವೈರಲ್ ಆಗಿದ್ದು ಆಟಗಾರರ ಆಟವಲ್ಲ. ಆಟಕ್ಕಿಂತಲೂ ಮೊದಲ ನಡೆದ ಆ ಒಂದು ದೃಶ್ಯ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬಿಗ್‌ ಬ್ಯಾಷ್‌ ಲೀಗ್‌ನ 16ನೇ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಹಾಗೂ ಸಿಡ್ನಿ ಥಂಡರ್‌ ತಂಡಗಳ ನಡುವೆ ಕಾದಾಟ ನಡೆಯಿತು. ಈ ಪಂದ್ಯಕ್ಕೂ ಒಂದು ಗಂಟೆ ಮುನ್ನ ನಡೆದ ಘಟನೆ ಸಖತ್ ವೈರಲ್ ಆಗುತ್ತಿದೆ. ಲೌರಿ ಇವಾನ್ಸ್, ಆಷ್ಟನ್ ಅಗರ್, ಆರನ್ ಹಾರ್ಡಿ ಮತ್ತು ಯುವ ವೇಗಿ ಮಹ್ಲಿ ಬಿಯರ್ಡ್‌ಮನ್ ಕಾರನ್ನು ನೂಕುತ್ತಿರುವ ದೃಶ್ಯ ಸದ್ದು ಮಾಡುತ್ತಿದೆ. ಈ ಆಟಗಾರರು ತಾವು ಅಂದುಕೊಳ್ಳದಂತಹ ಸನ್ನಿವೇಶಕ್ಕೆ ಸಾಕ್ಷಿಯಾದರು.

BBL Stars Push Broken Uber to Reach Stadium Perth Scorchers Secure Dominant Win

ಈ ಆಟಗಾರರು ಮೈದಾನವನ್ನು ತಲುಪಲು ಉಬರ್‌ ವಾಹನವನ್ನು ಬಳಸಿಕೊಂಡು ಬರುತ್ತಿದ್ದರು. ಮಾರ್ಗ ಮಧ್ಯದಲ್ಲಿ ಕಾರ್‌ ಕೆಟ್ಟಿತು. ತಕ್ಷಣಕ್ಕೆ ಇವರಿಗೆ ಬೇರೆ ಯಾವುದೇ ಬದಲಿ ವ್ಯವಸ್ಥೆಗಳ ಇರದೆ ಇದ್ದಿದ್ದರಿಂದ ರಸ್ತೆಯ ನಿಂತರು. ಬಳಿಕ ಏನು ತೋಚದೆ ಅವರು ಪ್ರಯಾಣಿಸುತ್ತಿದ್ದ ಕಾರ್‌ನ್ನು ಆಟಗಾರರು ತಳ್ಳಲು ಆರಂಭಿಸಿದರು. ಈ ಆಟಗಾರರು ಕಾರ್‌ ತಳ್ಳುತ್ತಿರುವುದನ್ನು ಕಂಡು ಅಭಿಮಾನಿಗಳು ಇವರ ವಿಡಿಯೋಗಳನ್ನು ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.

ಕಾರ್‌ ತಳ್ಳಿದ ಬಳಿಕ, ಚಲಿಸಲು ಆರಂಭಿಸಿದೆ. ಆಟಗಾರರು ತಳ್ಳುವುದನ್ನು ಬಿಟ್ಟು ಕಾರ್‌ನಲ್ಲಿ ಕುಳಿತುಕೊಂಡು ಮೈದಾನದತ್ತ ಪ್ರಯಾಣವನ್ನು ನಡೆಸಿದರು. ಈ ಸನ್ನಿವೇಶ ಇವರು ಮೈದಾನಕ್ಕೆ ಇಳಿಯುವ ಮುನ್ನ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡಿತು. ಈ ಬಗ್ಗೆಯೂ ವೀಕ್ಷಕ ವಿವರಣೆಗಾರರು ಸಹ ಮಾತನಾಡಿದರು.

ಪಂದ್ಯ ಫಲಿತಾಂಶ

ಪರ್ತ್ ಸ್ಕಾರ್ಚರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 202 ರನ್‌ ಸೇರಿಸಿತು. ಈ ವೇಳೆ ನಾಯಕ ಆಷ್ಟನ್ ಟರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇವರು 8 ಬೌಂಡರಿ, 8 ಸಿಕ್ಸರ್ ಸಹಾಯದಿಂದ 241 ಸ್ಟ್ರೈಕ್‌ ರೇಟ್‌ನಲ್ಲಿ ಅಜೇಯ 99 ರನ್‌ ಬಾರಿಸಿ ಅಬ್ಬರಿಸಿದರು. ಗುರಿಯನ್ನು ಹಿಂಬಾಲಿಸಿದ ಸಿಡ್ನಿ ಥಂಡರ್ಸ್‌ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಪರಿಣಾಮ ಸಿಡ್ನಿ ತಂಡ 17.3 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನ ಪ್ರಮುಖ ಪಾತ್ರವನ್ನು ವಹಿಸಿದ ಆಷ್ಟನ್ ಟರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಕಾರ್‌ ತಳ್ಳುತ್ತಾ ಬಂದಿದ್ದ ಆರನ್ ಹಾರ್ಡಿ ಈ ಪಂದ್ಯದಲ್ಲಿ ಭರ್ಜರಿ ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದರು. ಇವರು ಬ್ಯಾಟಿಂಗ್‌ನಲ್ಲಿ 27 ರನ್‌ ಸಿಡಿಸಿದರೆ, ಬೌಲಿಂಗ್‌ನಲ್ಲಿ 7 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

Story first published: Wednesday, December 31, 2025, 15:09 [IST]
Other articles published on Dec 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+