Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶಕ್ಕೆ ಫಿಕ್ಸಿಂಗ್ ಚುಕ್ಕೆ: 7 ಆಟಗಾರರ ಮೇಲೆ ನಿಷೇಧ, ತಮೀಮ್‌ ಹೊಸ ಬಾಸ್‌

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಇತ್ತೀಚಿನ ದಿನಗಳಲ್ಲಿ ತನ್ನ ಆಟಕ್ಕಿಂತ ಹೆಚ್ಚಾಗಿ ಮೈದಾನದ ಹೊರಗಿನ ಘಟನೆಗಳಿಂದಲೇ ಸುದ್ದಿಯಲ್ಲಿದೆ. ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದ ಬಾಂಗ್ಲಾದೇಶ, ಈಗ ಮತ್ತೊಮ್ಮೆ ದೊಡ್ಡ ವಿವಾದಿತ ಸುದ್ದಿಗೆ ಆಹಾರವಾಗಿದೆ. ಮೈದಾನದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದರೆ, ಮತ್ತೊಂದೆಡೆ, ಪ್ರಮುಖ ಆಡಳಿತಾತ್ಮಕ ಬದಲಾವಣೆಗಳಿಂದ ಸುದ್ದಿಯಲ್ಲಿದೆ. ಸಿಜೆಕೆಎಸ್‌ ಟ್ಯಾಲೆಂಟ್ ಕಪ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.

ಸಿಜೆಕೆಎಸ್‌ ಟ್ಯಾಲೆಂಟ್ ಕಪ್‌ನಲ್ಲಿ ಆಟಗಾರರು ಅನುಮಾನಾಸ್ಪದ ರೀತಿಯಲ್ಲಿ ಔಟ್ ಆಗಿದ್ದು ಕಂಡು ಬಂದಿದೆ. ಪುರಾವೆಗಳ ಆಧಾರದ ಮೇಲೆ, ಮಂಡಳಿಯು ಏಳು ಆಟಗಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇದು ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಬಿಸಿಬಿ ತಕ್ಷಣ ಕ್ರಮ ಕೈಗೊಂಡಿದೆ.

BCB Corruption Scandal

ಸಕೀಬ್ ಹೊಸೇನ್, ಒಬೈದುಲ್ ಅಲಮ್, ಒಮರ್ ಫಾರೂಕ್, ಟಿನ್ ಧಾರ್, ಮಹಿರ್ ಅನ್ವರ್, ಮೊಹಮ್ಮದ್ ಇಕ್ಬಾಲ್ ಮತ್ತು ನಜ್ಮುಲ್ ಇಸ್ಲಾಂ ಅವರಂತಹ ಆಟಗಾರರನ್ನು ನಿಷೇಧಿಸಲಾಗಿದೆ. ಅಚ್ಚರಿಯೆಂದರೆ, ತಂಡದ ಕೋಚ್ ಅಮೀನುಲ್ ಹಕ್ ಅವರನ್ನು ಸಹ ಅಮಾನತುಗೊಳಿಸಲಾಗಿದೆ.

ತಮೀಮ್‌ ಹೊಸ ಬಾಸ್‌

ಈಗ ಬಿಸಿಬಿ ಅಧ್ಯಕ್ಷ ಸ್ಥಾನವನ್ನು ಬಾಂಗ್ಲಾದೇಶದ ಮಾಹಿ ನಾಯಕ ತಮೀಮ್‌ ಇಕ್ಬಾಲ್‌ ಅವರಿಗೆ ನೀಡಲಾಗಿದೆ. ಇವರನ್ನು ಭಾರತದ ಬೆಂಬಲಿಗ ಹಾಗೂ ಅನುಭವಿ ರಣನೀತಿಯ ಹರಿಕಾರ ಎಂದು ಗುರುತಿಸಲಾಗುತ್ತದೆ. ಇವರ ಅನುಭವ ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಪಾರದರ್ಶಕೆ ತರಲು ಅನುಕೂಲವಾಗುತ್ತದೆ. ಇನ್ನು ತಜ್ಞರ ಪ್ರಕಾರ ತಮೀಮ್‌ ಅವರನ್ನು ಬಿಸಿಬಿ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ನೆರವು ನೀಡಲಿದೆ. ಅಮೀನುಲ್ ಇಸ್ಲಾಂ ಅವರ ಭಾರತ ವಿರೋಧಿ ನಿಲುವಿನಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಸಾಕಷ್ಟು ನಷ್ಟ ಅನುಭವಿಸಿತ್ತು.

ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರವಾಸದಿಂದ ಬಾಂಗ್ಲಾದೇಶ ಹಿಂದೇಟು ಹಾಕಿತ್ತು. ಆಗ ಬಿಸಿಬಿ ಮಂಡಳಿ ಉನ್ನತ ಸ್ಥಾನದಲ್ಲಿದ್ದ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಇನ್ನು ಅನುಭವಿ ತಮೀಮ್‌ ಇಕ್ಬಾಲ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು ಸರಿಯಾದ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ. ತಮೀಮ್‌ ಬಹುವರ್ಷಗಳ ಕಾಲ ಬಾಂಗ್ಲಾದೇಶದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

Story first published: Friday, April 10, 2026, 8:30 [IST]
Other articles published on Apr 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+