Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮೀಮ್ ಇಕ್ಬಾಲ್ ನಿವೃತ್ತಿ ನಿರ್ಧಾರಕ್ಕೆ ಕಂಗಾಲಾದ ಬಾಂಗ್ಲಾ ಮಂಡಳಿ: ರಾತ್ರಿ ತುರ್ತು ಸಭೆ, ನಿರ್ಧಾರ ಹಿಂತೆಗೆಯಲು ಮನವಿ

ಏಕದಿನ ವಿಶ್ವಕಪ್‌ನ ಆರಂಭಕ್ಕೆ ಕೇವಲ ಮೂರು ತಿಂಗಳುಗಳ ಅಂತರ ಇರುವಾಗ ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮಿಮ್ ಇಕ್ಬಾಲ್ ಇದ್ದಕ್ಕಿದ್ದಂತೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ತಮಿಮ್ ಇಕ್ಬಾಲ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದು ಈ ಸಂದರ್ಭದಲ್ಲಿ ಭಾವುಕರೂ ಆದರು. ಬಾಂಗ್ಲಾ ಹಿರಿಯ ಕ್ರಿಕೆಟಿಗನ ಈ ನಿರ್ಧಾರ ತಂಡದ ಅಭಿಮಾನಿಗಳಿಗೆ ಮಾತ್ರವಲ್ಲದೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೂ ಆಘಾತವುಂಟು ಮಾಡಿದೆ.

ಇದರ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜ್ಮುಲ್ ಹಸನ್ ತಮಿಮ್ ಇಕ್ಬಾಲ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಮತ್ತೊಮ್ಮೆ ಪರಿಗಣಿಸಿ ತಂಡದಲ್ಲಿ ಆಡುವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಜ್ಮುಲ್ ಹಸನ್ ಬಾಂಗ್ಲಾದೇಶದ ನಾಯಕನಿಂದ ನಿವೃತ್ತಿಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹೀಗಾಗಿ ತಮಗೆ ಹಾಗೂ ಮಂಡಳಿಗೆ ಈ ನಿರ್ಧಾರ ಅಚ್ಚರಿಯುಂಟು ಮಾಡಿದೆ ಎಂದು ರಾತ್ರಿ ನಡೆದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸದಸ್ಯರ ಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

BCB Presidents Plea to Tamim Iqbal: Reconsider Retirement Decision Ahead of ICC World Cup 2023

ಗುರುವಾರ ತಮೀಮ್ ಇಕ್ಬಾಲ್ ಪತ್ರಿಕಾಗೋಷ್ಠಿ ನಡೆಸುವುದಕ್ಕೂ ಮುನ್ನ ಅವರ ಬಳಿ ಚರ್ಚಿಸಿದ್ದೆ ಎಂದಿರುವ ನಜ್ಮುಲ್ ಮತ್ತು ಅನುಭವಿ ಆರಂಭಿಕ ಆಟಗಾರನೊಂದಿಗೆ ಸತತವಾಗಿ ಸಂವಹನ ನಡೆಸಲಾಗುತ್ತಿತ್ತು ಎಂದು ಬಹಿರಂಗಪಡಿಸಿದ್ದಾರೆ. ಗುರುವಾರ ರಾತ್ರಿ ಬಿಸಿಬಿ ಈ ವಿಚಾರವಾಗಿ ತುರ್ತು ಸಭೆ ನಡೆಸಿದ್ದು ತಮಿಮ್ ಇಕ್ಬಾಲ್ ತಮ್ಮ ನಿರ್ಧಾರವನ್ನು ಮರುಪರಿಗಣಿಸಬೇಕಾಗಿ ಮನವಿ ಮಾಡುಕೊಳ್ಳಲು ನಿರ್ಧರಿಸಲಾಗಿದೆ.

"ಇಂದು ನಾವು ಸಭೆ ನಡೆಸಲು ಕಾರಣ ತಮಿಮ್ ಇಕ್ಬಾಲ್ ಇದ್ದಕ್ಕಿದ್ದಂತೆ ಮಾಧ್ಯಮಗಳ ಮುಂದೆ ನಿವೃತ್ತಿ ಘೋಷಣೆ ಮಾಡಿರುವುದು. ಇದು ನಮಗೆ ಸಂಪೂರ್ಣ ಅನಿರೀಕ್ಷಿಯ ಯಾಕೆಂದರೆ ನಾವು ಆತನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದೆವು. ಆತ ಏಕದಿನ ತಂಡದ ನಾಯಕನಾಗಿರುವ ಕಾರಣ ಮೂರು ದಿನದ ಹಿಂದೆ ತಂಡದ ಬಗ್ಗೆ ಮಾತನಾಡಿದ್ದೆ, ಇಂದು ಕೂಡ ಅವರೊಂದಿಗೆ ಚರ್ಚೆ ನಡೆಸಿದ್ದೆ" ಎಂದಿದ್ದಾರೆ ನಜ್ಮುಲ್.

"ಈ ರೀತಿಯ ನಿರ್ಧಾರ ಬರಬಹುದು ಎಂಬುದರ ಯಾವುದೇ ಸುಳಿವು ನನಗೆ ಇರಲಿಲ್ಲ. ನಾನು ಆತನ ಬಳಿಕ ವೈಯಕ್ತಿಕವಾಗಿ ಭವಿಷ್ಯದ ಬಗ್ಗೆ ಚರ್ಚಿಸಿದ್ದು ಮುಂದಿನ ಚಾಂಪಿಯನ್ಸ್ ಟ್ರೋಫಿವರೆಗೆ ಆಡುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ವಿಶ್ವಕಪ್‌ಗೂ ಆತನೇ ನಾಯಕ ಎಂದು ನಾನು ಹೇಳಿದ್ದೆ" ಎಂದಿದ್ದಾರೆ ಬಿಸಿಬಿ ಮುಖ್ಯಸ್ಥ ನಜ್ಮುಲ್ ಹಸನ್.

ನಿವೃತ್ತಿಯನ್ನು ಘೋಷಿಸಿದ ಬಳಿಕ ತಮಿಮ್ ಇಕ್ಬಾಲ್ ಕರೆಗಳಿಗೆ ಪ್ರತಿಕ್ರಿಯೆ ನಿಡುತ್ತಿಲ್ಲ ಎಂದು ಬಿಸಿಬಿ ಮುಖ್ಯಸ್ಥರು ಮಾಹಿತಿ ನೀಡಿದ್ದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿರುವ ತಮೀಮ್ ಅವರ ಸಹೋದರ ನಫೀಸ್ ಇಕ್ಬಾಲ್ ಅವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಶ್ವಕಪ್ ವರ್ಷದಲ್ಲಿ ಈ ರೀತಿಯ ನಿರ್ಧಾರಗಳು ತಂಡದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದು ತಮೀಮ್ ಜೊತೆಗೆ ಯಾವುದೇ ಸಮಸ್ಯೆಗಳಿಗಳಿದ್ದರೂ ಬಗೆಹರಿಸಲು ಮಂಡಳಿಯು ಆಶಿಸುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ.

ತಮೀಮ್ ಇಕ್ಬಾಲ್ ಫೆಬ್ರವರಿ 2007ರಲ್ಲಿ ತಮ್ಮ ಅಂತತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದು 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿ ಲೀಗ್ ಹಂತದಲ್ಲಿ ಹೊರಬೀಳಲು ಕಾರಣವಾದ ಪಂದ್ಯದಲ್ಲಿ ತಮಿಮ್ ಅರ್ಧ ಶತಕ ಬಾರಿಸಿದ್ದರು. ಏಕದಿನ ಮಾದರಿಯಲ್ಲಿ ಬಾಂಗ್ಲಾದೇಶದ ಪರವಾಗಿ ಅತಿ ಹೆಚ್ಚು ರನ್ ಮತ್ತು ಶತಕಗಳಿಸಿದ ಆಟಗಾರ ಎನಿಸಿಕೊಂಡಿರುವ ಇಕ್ಬಾಲ್ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು.

ಏಕದಿನ ಮಾದರಿಯಲ್ಲಿ ತಮೀಮ್ ಇಕ್ಬಾಲ್ 8313 ರನ್ ಹಾಗೂ 14 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಇನ್ನು ಟೆಸ್ಟ್‌ನಲ್ಲಿ ಈ ಸ್ಟೈಲಿಶ್ ಎಡಗೈ ಬ್ಯಾಟರ್ 70 ಪಂದ್ಯಗಳನ್ನು ಆಡಿದ್ದು 10 ಶತಕಗಳೊಂದಿಗೆ 38.89ರ ಸರಾಸರಿಯಲ್ಲಿ 5134 ರನ್ ಗಳಿಸಿದ್ದಾರೆ. ಇದೀಗ ಮಂಡಳಿಯ ಈ ಮನವಿಗೆ ತಮಿಮ್ ಇಕ್ಬಾಲ್ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Story first published: Friday, July 7, 2023, 12:18 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+