Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಎಜಿಎಂನಲ್ಲಿ ಮಹತ್ವದ ನಿರ್ಧಾರ; ಅಂಪೈರ್‌ಗಳ ಸಂಭಾವನೆ ಏರಿಕೆ, ಐಪಿಎಲ್ 2027ರ ಬಗ್ಗೆ ಬಿಗ್ ಅಪ್‌ಡೇಟ್!

ಮುಂಬೈನಲ್ಲಿ ಸೆಪ್ಟೆಂಬರ್ 18ರಂದು ನಡೆದ ಬಿಸಿಸಿಐನ (BCCI) 95ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅಂಪೈರ್‌ಗಳು ಹಾಗೂ ಮ್ಯಾಚ್ ರೆಫರಿಗಳ ಸಂಭಾವನೆ ಹೆಚ್ಚಳ ಮತ್ತು ಗ್ರೇಡ್ ಪುನರ್‌ರಚನೆಗೆ ಅನುಮೋದನೆ ನೀಡಲಾಗಿದ್ದು, ಅರುಣ್ ಸಿಂಗ್ ಧುಮಲ್ ಹಾಗೂ ಎಂ ಖೈರುಲ್ ಜಮಾಲ್ ಮಜುಂದಾರ್ ಅವರನ್ನು ಐಪಿಎಲ್ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಯಿತು. ಇದೇ ವೇಳೆ, 2027ರ ಡಿಸೆಂಬರ್‌ನಿಂದ ವರ್ಷಪೂರ್ತಿ ಶತಮಾನೋತ್ಸವ ಸಂಭ್ರಮಾಚರಣೆ, 2027ರಲ್ಲಿ ಅತ್ಯಂತ ಅದ್ದೂರಿಯಾಗಿ 20ನೇ ಆವೃತ್ತಿಯ ಐಪಿಎಲ್ ಆಯೋಜನೆ, ಹೊಸ ಲೈಂಗಿಕ ಕಿರುಕುಳ ತಡೆ ಆಂತರಿಕ ಸಮಿತಿ ರಚನೆ, ವಯಸ್ಸು ದೃಢೀಕರಣ ನಿಯಮಗಳ ನವೀಕರಣ, 2025-26ನೇ ಹಣಕಾಸು ವರ್ಷದ ಲೆಕ್ಕಪತ್ರ ಸಲ್ಲಿಕೆ ಮತ್ತು 2026-27ರ ಬಜೆಟ್‌ಗೆ ಸಭೆಯು ಅಂತಿಮ ಒಪ್ಪಿಗೆ ನೀಡಿದೆ.

ಈ ಬಾರಿಯ ಸಭೆಯಲ್ಲಿ ಅಂಪೈರಿಂಗ್ ವ್ಯವಸ್ಥೆಯ ಪೂರ್ಣ ಬದಲಾವಣೆಯೇ ಪ್ರಮುಖ ನಿರ್ಧಾರವಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಮಾತನಾಡಿ, "2017-18ರಿಂದ ಸುಮಾರು 10 ವರ್ಷಗಳ ಕಾಲ ಅಂಪೈರ್‌ಗಳ ಸಂಭಾವನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಅವರ ವರ್ಗೀಕರಣವನ್ನು ಪುನರ್‌ರಚಿಸಿದ್ದೇವೆ" ಎಂದು ತಿಳಿಸಿದರು. ಇನ್ಮುಂದೆ ಅಂಪೈರ್‌ಗಳನ್ನು ನಾಲ್ಕು ಗ್ರೇಡ್‌ಗಳಾಗಿ ವಿಂಗಡಿಸಲಾಗಿದ್ದು, ದಿನದ ಸಂಭಾವನೆಯನ್ನು ಹೆಚ್ಚಿಸಲಾಗಿದೆ: 'ಎ' ಗ್ರೇಡ್‌ಗೆ ₹60,000, 'ಬಿ' ಗ್ರೇಡ್‌ಗೆ ₹50,000, 'ಸಿ' ಗ್ರೇಡ್‌ಗೆ ₹40,000 ಮತ್ತು 'ಡಿ' ಗ್ರೇಡ್‌ಗೆ ₹35,000 ನಿಗದಿಪಡಿಸಲಾಗಿದೆ. ಇದರೊಂದಿಗೆ ಮ್ಯಾಚ್ ರೆಫರಿಗಳ ಸಂಭಾವನೆಯನ್ನೂ ಏರಿಕೆ ಮಾಡಲಾಗಿದೆ.

BCCI AGM 2026 Umpire Salary Hike IPL 2027 Plans and Key Decisions Announced

ಅಂಪೈರ್‌ಗಳ ಸಂಭಾವನೆ ಹೆಚ್ಚಳ, ಗ್ರೇಡ್ ಪುನರ್‌ರಚನೆ

ಅಂಪೈರ್ ಗ್ರೇಡ್ ನವೀಕರಿಸಿದ ದಿನದ ಸಂಭಾವನೆ (₹)
A 60,000
B 50,000
C 40,000
D 35,000

ಹೊಸ ವ್ಯವಸ್ಥೆಯು ಅಂಪೈರಿಂಗ್ ವರ್ಗೀಕರಣವನ್ನು ಕಟ್ಟುನಿಟ್ಟುಗೊಳಿಸಲಿದ್ದು, ಪಂದ್ಯಗಳ ಜವಾಬ್ದಾರಿಯನ್ನು ಅರ್ಹತೆಯ ಆಧಾರದ ಮೇಲೆಯೇ ನೀಡಲಾಗುತ್ತದೆ. ವಿಶೇಷ 'ಅಂಪೈರ್‌ಗಳ ಮಂಡಳಿ'ಯು ಅಧಿಕಾರಿಗಳ ಕೆಲಸಗಳನ್ನು ಮೌಲ್ಯಮಾಪನ ಮಾಡಲಿದ್ದು, ಪ್ರತಿ ಸೀಸನ್ ಕೊನೆಯಲ್ಲಿ ಬಡ್ತಿ (ಪ್ರಮೋಷನ್) ಅಥವಾ ಕೆಳಗಿನ ಗ್ರೇಡ್‌ಗೆ (ರೇಲಿಗೇಷನ್) ಇಳಿಸುವ ವ್ಯವಸ್ಥೆ ಇರಲಿದೆ. ಇದರಿಂದ ಹಿರಿಯ ಟೂರ್ನಿಗಳಲ್ಲಿ ಉನ್ನತ ಮಟ್ಟದ ಅಂಪೈರಿಂಗ್‌ಗೆ ಸ್ಪಷ್ಟ ದಾರಿ ಸಿಗಲಿದ್ದು, ಪ್ಯಾನಲ್‌ನಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಪ್ರೋತ್ಸಾಹಕಗಳು ದೊರೆಯಲಿವೆ. ಅಂಪೈರ್‌ಗಳ ಜೊತೆಗೆ ಮ್ಯಾಚ್ ರೆಫರಿಗಳ ಸಂಭಾವನೆಯನ್ನೂ ಹೆಚ್ಚಿಸುವ ಮೂಲಕ ದೇಶಿ ಕ್ರಿಕೆಟ್‌ನ ಗುಣಮಟ್ಟ ಹೆಚ್ಚಿಸಲು ಬಿಸಿಸಿಐ ಹೂಡಿಕೆ ಮಾಡುತ್ತಿದೆ.

ಬಿಸಿಸಿಐ ಎಜಿಎಂ: ಐಪಿಎಲ್ ಆಡಳಿತ ಮಂಡಳಿ, ಶತಮಾನೋತ್ಸವ ಮತ್ತು ಐಪಿಎಲ್-20 ಯೋಜನೆಗಳು

2027ರಲ್ಲಿ ಐಪಿಎಲ್‌ನ 'ಅದ್ದೂರಿ' 20ನೇ ಆವೃತ್ತಿಗೆ ಸಿದ್ಧತೆ ನಡೆಯುತ್ತಿರುವಂತೆಯೇ, ಆಡಳಿತದಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಅರುಣ್ ಸಿಂಗ್ ಧುಮಲ್ ಮತ್ತು ಎಂ ಖೈರುಲ್ ಜಮಾಲ್ ಮಜುಂದಾರ್ ಅವರನ್ನು ಐಪಿಎಲ್ ಆಡಳಿತ ಮಂಡಳಿಗೆ ಸೇರ್ಪಡೆಗೊಳಿಸಲಾಗಿದೆ. ಈ ಸೀಸನ್‌ನಲ್ಲಿ ಅದ್ಧೂರಿ ಸಮಾರಂಭಗಳು, ಹಳೆಯ ಸ್ಮರಣೀಯ ಕ್ಷಣಗಳ ಮರುಸೃಷ್ಟಿ ಮತ್ತು ಅಭಿಮಾನಿಗಳಿಗಾಗಿ ವಿಸ್ತಾರವಾದ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು. ಆದರೆ ಪಂದ್ಯಗಳ ಫಾರ್ಮ್ಯಾಟ್‌ನಲ್ಲಿ ಯಾವುದೇ ಬದಲಾವಣೆಯನ್ನು ಪ್ರಕಟಿಸಿಲ್ಲ. ಇನ್ನು 2027ರ ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯ ವೇಳೆಗೆ ಆರಂಭವಾಗುವ ಸಾಧ್ಯತೆಯಿದೆ ಎಂದು ಸೈಕಿಯಾ ಸುಳಿವು ನೀಡಿದ್ದಾರೆ.

ಮಹಾಸಭೆಯು 2027ರ ಡಿಸೆಂಬರ್‌ನಿಂದ 2028ರವರೆಗೆ ನಡೆಯಲಿರುವ ಬಿಸಿಸಿಐನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈ ಸಂಭ್ರಮಾಚರಣೆಯು ವಿವಿಧ ಮೈದಾನಗಳಲ್ಲಿ ಪಂದ್ಯಗಳ ವೇಳಾಪಟ್ಟಿ ಮತ್ತು ಪರಂಪರೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಿದೆ. ಆಡಳಿತಾತ್ಮಕವಾಗಿ, ಹೊಸ POSH (ಲೈಂಗಿಕ ಕಿರುಕುಳ ತಡೆ) ಆಂತರಿಕ ಸಮಿತಿ ರಚನೆ ಮತ್ತು ವಯಸ್ಸು ದೃಢೀಕರಣ ನೀತಿಯನ್ನು ನವೀಕರಿಸಲಾಗಿದೆ. 2025-26ನೇ ಹಣಕಾಸು ವರ್ಷದ ಲೆಕ್ಕಪತ್ರಗಳನ್ನು ಸ್ವೀಕರಿಸಲಾಗಿದ್ದು, 2026-27ರ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಜೊತೆಗೆ, ಭಿನ್ನಸಾಮರ್ಥ್ಯವುಳ್ಳ ಕ್ರಿಕೆಟಿಗರಿಗೆ ನೀಡುವ ಬೆಂಬಲದ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ.

Story first published: Saturday, September 19, 2026, 18:06 [IST]
Other articles published on Sep 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+