ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ: ಫ್ರೆಂಡ್ಲಿ ಪಂದ್ಯದಲ್ಲಿ ಗಂಗೂಲಿ ತಂಡವನ್ನು ಸೋಲಿಸಿದ ಜಯ್ ಶಾ ಬಳಗ

ಬಿಸಿಸಿಐ ತನ್ನ ವಾರ್ಷಿಕ ಮಹಾಸಭೆಯನ್ನು ಗುರುವಾರ ಕರೆದಿದ್ದು ಅದಕ್ಕೂ ಮುನ್ನ ಸ್ನೇಹಪೂರ್ವಕ ಪಂದ್ಯವೊಂದನ್ನು ಏರ್ಪಡಿಸಲಾಗಿತ್ತು. ಪ್ರೆಸಿಡೆಂಟ್ XI ಹಾಗೂ ಸೆಕ್ರೇಟರಿ XI ನಡುವೆ ಈ ಪಂದ್ಯ ನಡೆದಿದ್ದು ಪ್ರೆಸಿಡೆಂಟ್ XI ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಿದ್ದು ಸೆಕ್ರೇಟರಿ XI ತಂಡದ ನಾಯಕತ್ವವನ್ನು ಜಯ್ ಶಾ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಜಯ್ ಶಾ ನೇತೃತ್ವದ ಸೆಕ್ರೆಟರಿ 11 ತಂಡ ಗಂಗೂಲಿ ನೇತೃತ್ವದ ತಂಡವನ್ನು ಸೋಲಿಸಿದೆ.
ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಯ್ ಶಾ ನೇತೃತ್ವದ ಸೆಕ್ರೆಟರಿ XI ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿತು. 12 ಓವರ್‌ಗಳ ಈ ಪಂದ್ಯದಲ್ಲಿ 3 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತು. ಈ ತಂಡದ ಪರವಾಗಿ ಜಯ್‌ದೇವ್ ಶಾ ಅಜೇಯ 38 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಮೊಹಮ್ಮದ್ ಅಜರುದ್ಧೀನ್ 22 ಎಸೆತಗಳಲ್ಲಿ 37 ರನ್ ಗಳಿಸಿದರು. ಮಾಜಿ ಬಿಸಿಸಿಐ ಕಾರ್ಯದರ್ಶಿ ಅನಿರುಧ್ ಚೌಧರಿ 10 ರನ್ ಗಳಿಸಿ ಅಜೇಯವಾಗುಳಿದರು.
ಈ ಮೊತ್ತವನ್ನು ಸೌರವ್ ಗಂಗೂಲಿ ನೇತೃತ್ವದ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತಾದರೂ ಎದುರಾಳಿ ತಂಡದ ಗುರಿಯನ್ನು ಮೀರಿನಿಲ್ಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 28 ರನ್‌ಗಳಿಂದ ಸೌರವ್ ಗಂಗೂಲಿ ನೇತೃತ್ವದ ಪ್ರೆಸಿಡೆಂಡ್ XI ತಂಡ ಶರಣಾಯಿತು.
ಕಾರ್ಯದರ್ಶಿ ಜಯ್ ಶಾ ಬೌಲಿಂಗ್‌ನಲ್ಲಿ ಮಿಂಚಿದರು. 39 ರನ್‌ಗಳಿಗೆ 2 ವಿಕೆಟ್ ಪಡೆಯುವಲ್ಲಿ ಶಾ ಯಶಸ್ವಿಯಾಗಿದ್ದರು. ಶಾ ಮೂರು ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಸೌರವ್ ಗಂಗೂಲಿ ನಿಡಿದ ಕ್ಯಾಚ್‌ಅನ್ನು ಕೈಚೆಲ್ಲಿದ ಕಾರಣ ಅದು ತಪ್ಪಿತು.
ಇನ್ನು ಗುರುವಾರ ಮಹತ್ವದ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು ಐಪಿಎಲ್‌ಗೆ 2 ತಂಡಗಳ ಸೇರ್ಪಡೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಂತಾ ಪ್ರಮುಖ ವಿಚಾರಗಳು ಸೇರಿ 23 ಅಂಶಗಳು ಈ ಸಭೆಯ ಅಜೆಂಡಾದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications