ಬಿಸಿಸಿಐ ವಾರ್ಷಿಕ ಸಾಮಾನ್ಯಸಭೆಗೆ ದಿನಾಂಕ ನಿಗದಿ: ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ 89ನೇ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ಡಿಸೆಂಬರ್ 24ರಂದು ಈ ಸಭೆ ನಡೆಯಲಿದ್ದು ಸಭೆ ನಡೆಯಲಿರುವ ಸ್ಥಳವನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದ್ದು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿಕೊಂಡಿದೆ.
ಈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎರಡು ಮುಖ್ಯ ವಿಚಾರಗಳು ಚರ್ಚೆಯಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್‌ಗೆ ಸೇರ್ಪಡೆಗೊಳ್ಳುವ ಎರಡು ಹೊಸ ತಂಡಗಳ ವಿಚಾರ ಹಾಗೂ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳಿಸುವ ವಿಚಾರ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಲಿರುವ ಮಹತ್ವದ ವಿಚಾರಗಳಾಗಿದೆ.
ಈ ಸಭೆಯ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈಮೇಲ್ ಮೂಲಕ ಮಾಹಿತಿಯನ್ನು ರವಾನಿಸಿದ್ದಾರೆ. "89ನೇ ವಾರ್ಷಿಕ ಸಾಮಾನ್ಯ ಸಭೆಗೆ ನೋಟಿಸ್‌ಅನ್ನು ಕಳುಹಿಸಲಾಗಿದೆ. ಬಿಸಿಸಿಐ ಈ ಸಭೆಯನ್ನು ಡಿಸೆಂಬರ್ ತಿಂಗಳ 24ನೇ ತಾರೀಕಿನಂದ ನಡೆಸಲಿದೆ. ಈ ಕೆಳಗಿನ ವಿಚಾರಗಳು ಅಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ".
ಈ ವಾರ್ಷಿಕ ಮಹಾಸಭೆ ಸನಡೆಯುವ ಸ್ಥಳದ ಬಗ್ಗೆ ಶೀಘ್ರದಲ್ಲೇ ಮಾಹಿತಿಯನ್ನು ನೀಡಲಾಗುತ್ತದೆ. ಸಭೆಯ ಮತ್ತಷ್ಟು ಅಜೆಂಡಾಗಳನ್ನು ಹೊಂದಿರುವ ಪ್ರತಿಗಳನ್ನು ಶೀಗ್ರದಲ್ಲೇ ಕಳುಹಿಸಲಾಗುತ್ತದೆ. ಈ ಸಭೆಗೆ ತಾಔಉ ಭಾಗಿಯಾಗಬೇಕೆಂದು ಕೋರಿಕೊಳ್ಳುತ್ತೇವೆ" ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ 23 ಅಜೆಂಡಾಗಳನ್ನು ಇದರಲ್ಲಿ ತಿಳಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications