Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಾಂಧಿ-ಮಂಡೇಲಾ ಸರಣಿ: ರಾಜ್ಯದ ಅರವಿಂದ್‌ಗೆ ಸ್ಥಾನ

ಬೆಂಗಳೂರು, ಸೆಪ್ಟೆಂಬರ್. 20: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ- 20ಗೆ ರಾಜ್ಯದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಆಯ್ಕೆಯಾಗಿದ್ದಾರೆ.

ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಬಿಸಿಸಿಐ ಸಭೆ ನಂತರ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಟೀಂ ಇಂಡಿಯಾವನ್ನು ಪ್ರಕಟಿಸಿದರು. ಮುಂದಿನ ಷರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ.

BCCI announce India squad for T20s, ODIs against South Africa

ರವೀಂದ್ರ ಜಡೇಜಾ ಸ್ಥಾನ ಕಳೆದುಕೊಂಡಿದ್ದಾರೆ. ಅಕ್ಟೋಬರ್ ಎರಡರಿಂದ ಸರಣಿ ಆರಂಭವಾಗಲಿದ್ದು ಪ್ರವಾಸಿ ತಂಡ ಮೊದಲು ಮೂರು ಟಿ-20 ಪಂದ್ಯ ಗಳನ್ನು ಆಡಲಿದೆ. ಏಕದಿನ ತಂಡಕ್ಕೆ ಎಂಎಸ್ ಧೋನಿ ಮರಳಿದ್ದು ನಾಯಕರಾಗಿ ಮುಂದುವರಿಯಲಿದ್ದಾರೆ. ಸ್ಟುವರ್ಟ್ ಬಿನ್ನಿ ಎರಡು ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.

ಟಿ-20 ತಂಡ
ಎಂಎಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ(ಉಪನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ, ಮೋಹಿತ್ ಶರ್ಮಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಸ್ಟುವರ್ಟ್ ಬಿನ್ನಿ, ಶ್ರೀನಾಥ್ ಅರವಿಂದ್.

ಏಕದಿನ ತಂಡ:
ಎಂಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ(ಉಪನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ಸ್ಟುವರ್ಟ್ ಬಿನ್ನಿ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಗುರುಕೀರತ್ ಸಿಂಗ್, ಅಮಿತ್ ಮಿಶ್ರಾ, ಭುನವೇಶ್ವರ್ ಕುಮಾರ್, ಮೋಹಿತ್ ಶರ್ಮಾ, ಉಮೇಶ್ ಯಾದವ್

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+