For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್: ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

BCCI announced Rahul Dravid appointed as Team Indias Head Coach
Rahul Dravid ಬಂದ ಮೇಲೆ ತಂಡ ಬದಲಾಗಲಿದೆಯೇ | Oneindia Kannada

ಟೀಮ್ ಇಂಡಿಯಾದ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಬಿಸಿಸಿಐ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಕೋಚ್ ಹುದ್ದೆ ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಅಧಿಕೃತವಾಗಿ ತೆರೆಬಿದ್ದಿದೆ. ಈ ಘೋಷಣೆಗೂ ಮುನ್ನವೇ ರಾಹುಲ್ ದ್ರಾವಿಡ್ ಈ ಹುದ್ದೆಗೆ ನೇಮಕವಾಗುವುದು ಖಚಿತವಾಗಿತ್ತು.

ಎನ್‌ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಬೇಕೆಂಬ ಒತ್ತಾಯ ಸಾಕಷ್ಟು ಬಾರಿ ಕೇಳಿ ಬಂದಿತ್ತು. ಅದರಲ್ಲೂ ಕಳೆದ ಜುಲೈ ತಿಂಗಳಿನಲ್ಲಿ ಶ್ರೀಲಂಕಾಗೆ ತೆರಳಿದ್ದ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗುವ ಮೂಲಕ ಈ ಚರ್ಚೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ ರಾಹುಲ್ ದ್ರಾವಿಡ್ ಇದನ್ನು ನೇರವಾಗಿ ನಿರಾಕರಿಸಿದ್ದರು.

ಆದರೆ ಕಳೆದ ಐಪಿಎಲ್ ಸಂದರ್ಭದಲ್ಲಿ ಈ ಬಗ್ಗೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ಜೊತೆಗೆ ಮಾತಿಕತೆ ನಡೆಸಿ ರಾಹುಲ್ ದ್ರಾವಿಡ್ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ಭಾಗವಾಗಿ ರಾಹುಲ್ ದ್ರಾವಿಡ್ ಈಗ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್ ಅಂತ್ಯವಾಗುತ್ತಿರುವಂತೆಯೇ ಹಾಲಿ ಕೋಚ್ ರವಿ ಶಾಸತ್ರಿ ಅವರ ಕಾರ್ಯಾವಧಿ ಮುಕ್ತಾಯವಾಗಲಿದೆ. ಅದಾದ ನಂತರ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ಭಾರತ ತಂಡಕ್ಕೆ ನಾಯಕರಾಗಿದ್ದ 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್‌ಗೆ ಕೋಚ್ ಆಗಿ ಟೀಮ್ ಇಂಡಿಯಾ ಮುನ್ನಡೆಸಿದ ಅನುಭವವಿದೆ. ಕಳೆದ ಜುಲೈನಲ್ಲಿ ಭಾರತೀಯ ಒಂದು ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದ ದ್ರಾವಿಡ್ ಕೋಚ್ ಆಗಿ ತಂಡದ ಜೊತೆ ತೆರಳಿದ್ದರು. ಆ ವೇಳೆ ಭಾರತದ ಎಂದಿನ ಕೋಚ್ ರವಿ ಶಾಸ್ತ್ರಿ ಭಾರತ ಇನ್ನೊಂದು ತಂಡದ ಜೊತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಿತ್ತು. ಇದರಲ್ಲಿ ಏಕದಿನ ಸರಣಿ 2-1ರಿಂದ ಭಾರತದ ವಶವಾಗಿದ್ದರೆ, ಟಿ20 ಸರಣಿ 2-1ರಿಂದ ಲಂಕಾ ವಶವಾಗಿತ್ತು. 48ರ ಹರೆಯದ ದ್ರಾವಿಡ್, 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್, 344 ಏಕದಿನ ಪಂದ್ಯಗಳಲ್ಲಿ 10889 ರನ್, 1 ಟಿ20ಐ ಪಂದ್ಯದಲ್ಲಿ 31 ರನ್ ಮತ್ತು 89 ಐಪಿಎಲ್ ಪಂದ್ಯಗಳಲ್ಲಿ 2174 ರನ್ ಬಾರಿಸಿದ್ದಾರೆ.

Story first published: Thursday, November 4, 2021, 11:40 [IST]
Other articles published on Nov 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+