ಬಿಸಿಸಿಐ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ:ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಆರಂಭ
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) 2026-27ರ ಸಾಲಿನ ದೇಶೀಯ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪುರುಷರ ಹಾಗೂ ಮಹಿಳಾ ತಂಡಗಳು ವಿವಿಧ ವಯೋಮಿತಿಯಲ್ಲಿ ಕಣಕ್ಕೆ ಇಳಿಯಲಿದ್ದು, ಈ ವೇಳೆ ಒಟ್ಟು 1,788 ಪಂದ್ಯಗಳು ನಡೆಯಲಿವೆ.
ಪುರುಷರ ವಿಭಾಗದಲ್ಲಿ ಅಂಡರ್ 23, ಅಂಡರ್ 19, ಅಂಡರ್ 16 ವಿಭಾಗಗಳಲ್ಲಿ ಪಂದ್ಯ ನಡೆಯಲಿವೆ. ಇನ್ನು ಮಹಿಳಾ ವಿಭಾಗದಲ್ಲಿ ಅಂಡರ್ 23, ಅಂಡರ್ 19, ಅಂಡರ್ 15 ವಿಭಾಗಗಳಲ್ಲಿ ತಂಡಗಳು ಕಾದಾಟ ನಡೆಸಲಿವೆ. ಈ ಬಾರಿಯ ದೇಶೀಯ ಋತುವು ಆಗಸ್ಟ್ 23 ರಿಂದ ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗಲಿದೆ. ಈ ಟೂರ್ನಿಯ ಟ್ರೋಫಿಯ ಫೈನಲ್ ಸೆಪ್ಟೆಂಬರ್ 10 ರಂದು ನಡೆಯಲಿದೆ.

ಇರಾನಿ ಕಪ್ ಮುಂದಿನ ಪಂದ್ಯವನ್ನು ಅಕ್ಟೋಬರ್ 1 ರಿಂದ ಪ್ರಾರಂಭಿಸಿ ಅಕ್ಟೋಬರ್ 5 ರಂದು ಫೈನಲ್ ಪಂದ್ಯದೊಂದಿಗೆ ನಡೆಸಲು ನಿರ್ಧರಿಸಲಾಗಿದೆ.
ಇದೇ ದಿನದಂದು ಆರಂಭವಾಗುತ್ತದೆ ರಣಜಿ ಟೂರ್ನಿ
ರಣಜಿ ಟ್ರೋಫಿ ಮತ್ತು ಕರ್ನಲ್ ಸಿ.ಕೆ. ನಾಯುಡು ಟ್ರೋಫಿಯನ್ನು ಸಹ ಎರಡು ಹಂತಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಣಜಿ ಟ್ರೋಫಿಯ ಎಲೈಟ್ ಗುಂಪಿನಲ್ಲಿರುವ 32 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು. ರಣಜಿ ಟ್ರೋಫಿಯ ಮೊದಲ ಹಂತವು ಅಕ್ಟೋಬರ್ 11 ರಿಂದ ನವೆಂಬರ್ 5 ರವರೆಗೆ ನಡೆಯಲಿದೆ. ಎರಡನೇ ಹಂತದ ಪಂದ್ಯ ಜನವರಿ 17 ರಂದು ಆರಂಭವಾಗಲಿದೆ. ಈ ಟೂರ್ನಿಯ ನಾಕೌಟ್ ಪಂದ್ಯಗಳು ಫೆಬ್ರವರಿ 9 ರಿಂದ ಮಾರ್ಚ್ 3ರ ವರೆಗೆ ನಡೆಯಲಿದೆ.
ಸೈಯದ್ ಮುಷ್ತಾಕ್ ಟ್ರೋಫಿ ನಡೆಯುವುದು ಯಾವಾಗ?
ದೇಶೀಯ ಟಿ20 ಕ್ರಿಕೆಟ್ ಪಂದ್ಯಗಳ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿ ನವೆಂಬರ್ 14 ರಂದು ಆರಂಭವಾಗಲಿದೆ. ಇನ್ನು ನಾಕೌಟ್ ಹಂತದ ಪಂದ್ಯಗಳು ನವೆಂಬರ್ 30 ರಿಂದ ಡಿಸೆಂಬರ್ 6 ನಡೆಯಲಿದೆ.

ವಿಜಯ್ ಹಜಾರೆ ಟೂರ್ನಿ ನಡೆಯುವುದು ಎಂದು?
ವಿಜಯ್ ಹಜಾರೆ ಟ್ರೋಫಿಯೂ ಡಿಸೆಂಬರ್ 14 ರಂದು ಪ್ರಾರಂಭವಾಗಲಿದ್ದು, ನಾಕೌಟ್ ಪಂದ್ಯಗಳು ಜನವರಿ 2 ರಿಂದ ಜನವರಿ 8 ರವರೆಗೆ ನಿಗದಿಪಡೆಸಲಾಗಿದೆ.
ಕರ್ನಲ್ ಸಿ.ಕೆ. ನಾಯುಡು ಟ್ರೋಫಿ ಚಾಂಪಿಯನ್ಸ್ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ನಾಯುಡು ಟ್ರೋಫಿ ಸ್ಪರ್ಧೆಯು ಅಕ್ಟೋಬರ್ 1 ರಿಂದ 4, 2026 ರವರೆಗೆ ನಡೆಯಲಿದೆ. ದೇಶೀಯ ಮಟ್ಟದಲ್ಲಿ 23 ವರ್ಷದೊಳಗಿನ ಕ್ರಿಕೆಟಿಗರಿಗೆ ಇದು ಉತ್ತಮ ಅವಕಾಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications