Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಕದಿನ ಚಾಂಪಿಯನ್ ಭಾರತಕ್ಕೆ 51 ಕೋಟಿ ರೂ. ಬಹುಮಾನ ಘೋಷಣೆ

ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ ಸೋಮವಾರ ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಹರ್ಮನ್ ಪ್ರೀತ್‌ ಕೌರ್ ಪಡೆಗೆ ಭರ್ಜರಿ ಉಡುಗೊರೆ ನೀಡಿದೆ. ಭಾನುವಾರ ತಡ ರಾತ್ರಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತದ ವನಿತೆಯರು ಇತಿಹಾಸ ನಿರ್ಮಿಸಿದರು. 25 ವರ್ಷಗಳ ಬಳಿಕ ಮಹಿಳಾ ಏಕದಿನ ವಿಶ್ವಕಪ್‌ಗೆ ನೂತನ ಚಾಂಪಿಯನ್‌ ಸಿಕ್ಕಿದೆ. ಭಾರತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿತ್ತು. ಮೂರನೇ ಬಾರಿ ಫೈನಲ್‌ಗೆ ಏರಿದ್ದ ಕ್ಷಣವನ್ನು ಭಾರತ ತಂಡ ಸ್ಮರಣೀಯವಾಗಿಸಿಕೊಂಡಿತು.

ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ ಬಹುಮಾನದ ಮಾಹಾಪೋರವೇ ಹರಿದು ಬಂದಿದೆ. ಚಾಂಪಿಯನ್ ತಂಡಕ್ಕೆ 51 ಕೋಟಿ ರೂ.ಗಳನ್ನು ಬಿಸಿಸಿಐ ಘೋಷಿಸಿದೆ. ಬಿಸಿಸಿಐ ತಂಡದ ಪ್ರತಿಯೊಬ್ಬ ಸಿಬ್ಬಂದಿ, ಸಹಾಯಕ ತರಬೇತುದಾರ, ಆಟಗಾರರಿಗೆ ಬಹುಮಾನ ಮೊತ್ತವನ್ನು ಘೋಷಿಸಿದೆ. ಭಾರತ ಫೈನಲ್‌ ಪಂದ್ಯದಲ್ಲಿ 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು.

BCCI Announces 51 Cr Prize Money for World Cup Champions Harmanpreet Kaur s Team India

ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ, ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮಯೋಚಿತ ಆಟವಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಶೆಫಾಲಿ 87 ರನ್‌ ಬಾರಿಸಿದರೆ, ಬೌಲಿಂಗ್‌ನಲ್ಲಿ ಬಿಗುವಿನ ದಾಳಿ ನಡೆಸಿ 2 ವಿಕೆಟ್‌ ಕಬಳಿಸಿದರು. ಶೆಫಾಲಿ ವರ್ಮಾ ಸುನೆ ಲೂಸ್ ಮತ್ತು ಮರಿಜಾನ್ನೆ ಕಪ್ಪ್ ಅವರ ವಿಕೆಟ್‌ ಪಡೆದು ಬೀಗಿದರು.

ಭರ್ಜರಿ ಗಿಫ್ಟ್‌...

ಐಸಿಸಿ ಚೇರಮನ್‌ ಜಯ್‌ ಶಾ ಇತ್ತೀಚಿಗೆ ಮಹಿಳಾ ಏಕದಿನ ವಿಶ್ವಕಪ್‌ ಬಹುಮಾನ ಮೊತ್ತವನ್ನು 300 ಪ್ರತಿಶತ ಹೆಚ್ಚಿಸಿದ್ದರು. ಐಸಿಸಿ ಈ ಮೊದಲು ಮಹಿಳಾ ಏಕದಿನ ವಿಶ್ವಕಪ್‌ ವಿಜೇತರಿಗೆ 3.88 ಮಿಲಿಯನ್ ಡಾಲರ್‌ ನೀಡುತ್ತಿತ್ತು. ಈಗ ಈ ಮೊತ್ತವನ್ನು 14 ಮಿಲಿಯನ್ ಡಾಲರ್‌ಗೆ ಏರಿಸಲಾಗಿದೆ. ಬಿಸಿಸಿಐ ಈಗ ವಿಜೇತ ತಂಡಕ್ಕೆ 51 ಕೋಟಿ ರೂ. ನೀಡಿದೆ. ಐಸಿಸಿ ಭಾರತಕ್ಕೆ 37.3 ಕೋಟಿ ರೂಪಾಯಿಗಳ ಬೃಹತ್ ಬಹುಮಾನವನ್ನು ನೀಡಿತು. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಾರೆ 116 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. 2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿತರಿಸಲಾದ 29 ಕೋಟಿ ರೂ.ಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

Story first published: Monday, November 3, 2025, 14:09 [IST]
Other articles published on Nov 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+