For Quick Alerts
ALLOW NOTIFICATIONS  
For Daily Alerts
 

BCCI: ಅಂಡರ್–19 ವಿಶ್ವಕಪ್ 2026 ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

BCCI: ಅಂಡರ್-19 ವಿಶ್ವಕಪ್ 2026 ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಗ್‌ ವಿರುದ್ಧ 100 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ 6ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತು. ಈ ಹಿನ್ನೆಲೆ ಭಾರತ ತಂಡಕ್ಕೆ ಬಿಸಿಸಿಐ 7.50 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲದೇ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಅಂಡರ್-19 ತಂಡದ ಸಾಧನೆ ದೇಶವೇ ಹೆಮ್ಮೆಪಡುವ ವಿಚಾರವಾಗಿದೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ದೇವಜಿತ್ ಸೈಕಿಯಾ ಅವರು, "ಅಂಡರ್-19 ವಿಶ್ವಕಪ್ 2026 ಫೈನಲ್‌ನಲ್ಲಿ ಜಯ ಸಾಧಿಸಿದ ನಮ್ಮ ತಂಡದ ಮೇಲೆ ಸಂಪೂರ್ಣ ದೇಶ ಹಾಗೂ ಬಿಸಿಸಿಐಗೆ ಹೆಮ್ಮೆಯಿದೆ. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ರೀತಿ ಹಾಗೂ ಟೂರ್ನಿ ಪೂರ್ತಿ ಅಜೇಯವಾಗಿಯೇ ಮುಂದುವರೆದ ಸಾಧನೆ ಶ್ಲಾಘನೀಯ. ಈ ಮಹತ್ವದ ಸಾಧನೆಗಾಗಿ ಬಿಸಿಸಿಐ ಭಾರತ ತಂಡಕ್ಕೆ 7.50 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದೆ," ಎಂದು ಹೇಳಿದ್ದಾರೆ.

BCCI Announces 7 5 Crore Reward After India s Historic U19 World Cup 2026 Triumph Over England

ಶುಭಾಶಯ ಕೋರಿದ ಪ್ರಧಾನಿ ಮೋದಿ: ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅಂಡರ್-19 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಅಂಡರ್-19 ತಂಡವನ್ನು ಅಭಿನಂದಿಸಿದ್ದರು. ಪ್ರಧಾನಿ ಮೋದಿ ಅವರು, "ಭಾರತ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ವಿಶ್ವಕಪ್ ಟ್ರೋಫಿಯನ್ನು ದೇಶಕ್ಕೆ ತಂದಿರುವ ನಮ್ಮ ಅಂಡರ್-19 ತಂಡದ ಮೇಲೆ ಹೆಮ್ಮೆಯಿದೆ. ಟೂರ್ನಿ ಪೂರ್ತಿ ತಂಡ ಅತ್ಯುತ್ತಮವಾಗಿ ಆಡಿದ್ದು,ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದೆ. ಈ ಗೆಲುವು ಅನೇಕ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ. ಮುಂದಿನ ಪ್ರಯತ್ನಗಳಿಗೆ ಎಲ್ಲಾ ಆಟಗಾರರಿಗೆ ಶುಭಾಶಯಗಳು," ಎಂದು ಹೇಳಿದ್ದಾರೆ.

ಜಿಂಬಾಬ್ವೆಯ ಹರಾರೆನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ಅನ್ನು 100 ರನ್‌ಗಳ ಅಂತರದಿಂದ ಸೋಲಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತ ಆರನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಈ ಭರ್ಜರಿ ಗೆಲುವು ಭಾರತೀಯ ಯುವ ಕ್ರಿಕೆಟ್ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.

ಬೃಹತ್ ರನ್‌ ಕಲೆಹಾಕಿದ ವೈಭವ್: ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಅಂಡರ್-19 ತಂಡವು ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 411 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಇನ್ನಿಂಗ್ಸ್‌ನಲ್ಲಿ 16 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಕೇವಲ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸ್‌ಗಳ ಸಹಿತ 175 ರನ್‌ಗಳನ್ನು ಸಿಡಿಸಿದರು. ಇದರಿಂದ ತಂಡ ಬೃಹತ್ ರನ್‌ಗಳನ್ನು ಕಲೆಹಾಕಲು ಪ್ರಮುಖ ಕಾರಣವಾಯಿತು.

ಭಾರತಕ್ಕೆ ಶರಣಾದ ಇಂಗ್ಲೆಂಡ್‌: ಇನ್ನೂ ತಂಡದ ನಾಯಕ ಆಯುಷ್ ಮ್ಹಾತ್ರೆ 51 ಎಸೆತಗಳಲ್ಲಿ 53 ರನ್‌ ಬಾರಿಸಿದರೆ, ಅಭಿಗ್ಯಾನ್ ಕುಂಡು 40(31) ರನ್‌ಗಳ ಕೊಡುಗೆ ನೀಡಿದರು. ಇನ್ನು ಭಾರತ ನೀಡಿದ ಬೃಹತ್ 412 ಗುರಿ ತಲುಪಲಾಗದೇ ಇಂಗ್ಲೆಂಡ್ ಸೋಲನುಭವಿಸಿತು. ಇಂಗ್ಲೆಂಡ್‌ ಪರ ಕ್ಯಾಲೆಬ್ ಫಾಲ್ಕನರ್ 115 ರನ್‌ಗಳನ್ನು ಸಿಡಿಸಿದರು. ಆದರೂ ಕೊನೆಗೆ ಎಲ್ಲಾ ವಿಕೆಟ್‌ ಒಪ್ಪಿಸಿ ಇಂಗ್ಲೆಂಡ್‌ ಭಾರತಕ್ಕೆ ಶರಣಾಯಿತು.

6 ಬಾರಿ ಟ್ರೋಫಿ ಗೆದ್ದ ಭಾರತ: ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಆರನೇ ಟ್ರೋಫಿಗೆ ಮುತ್ತಿಟ್ಟಿತು. 2000, 2008, 2012, 2018, 2022ರಲ್ಲಿ ಚಾಂಪಿಯನ್ ಆಗಿದ್ದ ಭಾರತ ಇದೀಗ 2026ರಲ್ಲೂ ಟ್ರೋಫಿ ಎತ್ತಿಹಿಡಿದಿದೆ. ಇನ್ನೂ ಇಂಗ್ಲೆಂಡ್ ತಂಡವು 1998ರಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದಿದೆ ಅಷ್ಟೇ. ಈ ಮೂಲಕ ಅಂಡರ್ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಟ್ರೋಫಿ ಗೆದ್ದಿರುವ ಪಟ್ಟಿಯಲ್ಲಿ ಭಾರತ ನಂಬರ್ 1 ಸ್ಥಾನದಲ್ಲಿದೆ.

Story first published: Saturday, February 7, 2026, 18:23 [IST]
Other articles published on Feb 7, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+