ಟೀಮ್ ಇಂಡಿಯಾ ಆಟಗಾರರ ವಾರ್ಷಿಕ ವೇತನ ಶ್ರೇಣಿ ಪ್ರಕಟಿಸಿದ ಬಿಸಿಸಿಐ

ನವದೆಹಲಿ: ಭಾರತೀಯ ಆಟಗಾರರ ವಾರ್ಷಿಕ ವೇತನದ ವಿವಿಧ ಗ್ರೇಡ್‌ಗಳನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪ್ರಕಟಿಸಿದೆ. ಈ ವೇತನ ಶ್ರೇಣಿ ಟೀಮ್ ಇಂಡಿಯಾದ ಹಿರಿಯ ಆಟಗಾರರ ಶ್ರೇಣಿ ಆಗಿರಲಿದೆ. ಅಕ್ಟೋಬರ್ 2020ರಿಂದ ಸೆಪ್ಟೆಂಬರ್ 2021ರವರೆಗಿನ ವೇತನ ಶ್ರೇಣಿ ಇದಾಗಿದೆ. ಬಿಸಿಸಿಐ ನೂತನ ವೇತನ ಶ್ರೇಣಿಗಳಲ್ಲಿರುವ ಬಹುತೇಕ ಎಲ್ಲಾ ಆಟಗಾರರು ಸದ್ಯ 14ನೇ ಆವೃತ್ತಿಯ ಇಂಡಿಯನ್ಸ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಒಟ್ಟು 4 ವಿಧದ ವೇತನ ಶ್ರೇಣಿಗಳನ್ನು ಬಿಸಿಸಿಐ ಪ್ರಕಟಿಸಿದೆ. ಈ ವೇತನ ಶ್ರೇಣಿಯ ಪ್ರಕಾರ A+ ಗ್ರೇಡ್‌ನ ಆಟಗಾರರು 7 ಕೋಟಿ ರೂ., A ಗ್ರೇಡ್‌ನ ಆಟಗಾರರು 5 ಕೋಟಿ ರೂ., B ಗ್ರೇಡ್ ಆಟಗಾರರು 3 ಕೋಟಿ ರೂ. ಮತ್ತು C ಗ್ರೇಡ್ ಆಟಗಾರರು 1 ಕೋಟಿ ರೂ. ವಾರ್ಷಿಕ ವೇತನ ಪಡೆಯಲಿದ್ದಾರೆ.

A+ ಗ್ರೇಡ್‌ನ ಆಟಗಾರರು
ಬಿಸಿಸಿಐಯ ಅತ್ಯುನ್ನತ ವೇತನ ಗ್ರೇಡ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಸ್ಥಾನ ಪಡೆದಿದ್ದಾರೆ.
* ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ

A ಗ್ರೇಡ್‌ನ ಆಟಗಾರರು
ಬಿಸಿಸಿಐ ಎರಡನೇ ಗ್ರೇಡ್ Aಯಲ್ಲಿ ಸ್ಪಿನ್ನರ್ ಆರ್ ಅಶ್ವಿನ್, ಟೆಸ್ಟ್ ಸ್ಪೆಷಾಲಿಸ್ಟ್‌ಗಳಾದ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೇಗಿ ಮೊಹಮ್ಮದ್ ಶಮಿ, ರಿಷಭ್ ಪಂತ್ ಮೊದಲಾದವರಿದ್ದಾರೆ.
* ಆರ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ.

B ಗ್ರೇಡ್ ಆಟಗಾರರು
ಬಿಸಿಸಿಐಯ B ಗ್ರೇಡ್‌ನಲ್ಲಿ 5 ಆಟಗಾರರು ಕಾಣಿಸಿಕೊಂಡಿದ್ದಾರೆ. ವೃದ್ಧಿಮಾನ್ ಸಾಹ, ಮಯಾಂಕ್ ಅಗರ್ವಾಲ್ ಮೊದಲಾದವರಿದ್ದಾರೆ.
* ವೃದ್ಧಿಮಾನ್ ಸಾಹ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್ವಾಲ್.

C ಗ್ರೇಡ್ ಆಟಗಾರರು
ಭಾರತದ ಹಿರಿಯರ ತಂಡದಲ್ಲಿರುವ ಚೈನಾಮನ್ ಕುಲದೀಪ್ ಯಾದವ್, ಸ್ಪಿನ್ನರ್ ಯುಜುವೇಂದ್ರ ಚಾಹಲ್, ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಮೊದಲಾದವರಿದ್ದಾರೆ.
* ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಾಹರ್, ಶುಬ್ಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಐಯ್ಯರ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications