Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಆಟಗಾರರನ್ನು ಬಿಡುಗಡೆ ಮಾಡಲು ಅಂತಿಮ ದಿನಾಂಕ ನಿಗದಿ ಮಾಡಿದ ಬಿಸಿಸಿಐ

ಭಾರತದಲ್ಲಿ ಸದ್ಯ ಏಕದಿನ ವಿಶ್ವಕಪ್ ಜ್ವರ ತೀವ್ರವಾಗಿದ್ದು ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಸಿಗುತ್ತಿದೆ. ಈ ನಡುವೆಯೇ ಐಪಿಎಲ್ ಪಂದ್ಯಾವಳಿಗೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಿಗೆ ನವೆಂಬರ್ 15ರೊಳಗೆ ಐಪಿಎಲ್ 2024 ಹರಾಜಿನ ಮೊದಲು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಸೂಚನೆ ನೀಡಿದೆ.

ಈ ಬಾರಿ ಮಿನಿ ಹರಾಜು ನಡೆಯಲಿದ್ದು ಒಂದೇ ದಿನದಲ್ಲಿ ಹರಾಜು ಪ್ರಕ್ರಿಯೆ ಮುಗಿಯಲಿದೆ. ವರದಿಗಳ ಪ್ರಕಾರ ಈ ಬಾರಿ ಹರಾಜು ಪ್ರಕ್ರಿಯೆ ವಿದೇಶದಲ್ಲಿ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ 19ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ.

 BCCI Announces Deadline for Submission of Released and Retained Players List for IPL 2024

ಈ ಬಾರಿ ಹರಾಜಿನ ಪ್ರಮುಖ ಅಂಶಗಳು

ಐಪಿಎಲ್ ಹರಾಜು ದುಬೈನಲ್ಲಿ ನಡೆಯಲಿದ್ದು ಇದೇ ಮೊದಲ ಬಾರಿಗೆ ಭಾರತದಿಂದ ಹೊರಗೆ ಆಯೋಜನೆ ಮಾಡಲಾಗುತ್ತಿದೆ. ಮಿನಿ ಹರಾಜು ಡಿಸೆಂಬರ್ 18 ಅಥವಾ 19 ರಂದು ಒಂದು ದಿನದ ಕಾರ್ಯಕ್ರಮವಾಗಿರುತ್ತದೆ.

ನವೆಂಬರ್ 15 ರೊಳಗೆ ಬಿಡುಗಡೆಯಾದ ಮತ್ತು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ಎಲ್ಲಾ ಫ್ರಾಂಚೈಸಿಗಳು ಹರಾಜಿನಲ್ಲಿ ರೂ 100 ಕೋಟಿ ಸಂಬಳದ ಪರ್ಸ್ ಅನ್ನು ಹೊಂದಿದ್ದು, ಕಳೆದ ಸೀಸನ್‌ಗೆ ಹೋಲಿಸಿದರೆ 5 ಕೋಟಿ ಹೆಚ್ಚಳವಾಗಿದೆ.

ಪಂಜಾಬ್ ಕಿಂಗ್ಸ್ 12.20 ಕೋಟಿ ರೂಪಾಯಿಯೊಂದಿಗೆ ಅತ್ಯಧಿಕ ಪರ್ಸ್ ಅನ್ನು ಹೊಂದಿದೆ. 50 ಲಕ್ಷ ರೂಪಾಯಿ ಹೊಂದಿರುವ ಮುಂಬೈ ಇಂಡಿಯನ್ಸ್ ಕಡಿಮೆ ಪರ್ಸ್ ಅನ್ನು ಹೊಂದಿದೆ.

ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಶಾರ್ದೂಲ್ ಠಾಕೂರ್ (ಕೆಕೆಆರ್), ಲಾಕಿ ಫರ್ಗುಸನ್ (ಕೆಕೆಆರ್), ಮತ್ತು ಮ್ಯಾಥ್ಯೂ ವೇಡ್ ಅವರಂತಹ ದೊಡ್ಡ ಆಟಗಾರರನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಐಪಿಎಲ್ ತಂಡಗಳಲ್ಲಿ ಉಳಿದಿರುವ ಪರ್ಸ್ ವಿವರ

ಪಂಜಾಬ್ ಕಿಂಗ್ಸ್: ₹12.20 ಕೋಟಿ
ಮುಂಬೈ ಇಂಡಿಯನ್ಸ್: ₹ 50 ಲಕ್ಷ
ಸನ್ ರೈಸರ್ಸ್ ಹೈದರಾಬಾದ್: ₹6.55 ಕೋಟಿ
ಗುಜರಾತ್ ಟೈಟಾನ್ಸ್: ₹4.45 ಕೋಟಿ
ದೆಹಲಿ ಕ್ಯಾಪಿಟಲ್ಸ್: ₹4.45 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: ₹3.55 ಕೋಟಿ
ರಾಜಸ್ಥಾನ್ ರಾಯಲ್ಸ್: ₹ 3.35 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹1.75 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: ₹1.65 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: ₹1.5 ಕೋಟಿ

Story first published: Saturday, October 28, 2023, 11:02 [IST]
Other articles published on Oct 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+