ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ತಂಡ ಪ್ರಕಟ: ಯುವಿ 'ಯವ್ವಿಯವ್ವಿ'
ನವದೆಹಲಿ, ಡಿ 19: ಮುಂಬರುವ ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಐದು ಏಕದಿನ ಮತ್ತು ಮೂರು ಟಿ20 ಕ್ರಿಕೆಟ್ ಸರಣಿಗಾಗಿ ಹದಿನೈದು ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಶನಿವಾರ (ಡಿ 19) ಪ್ರಕಟಿಸಿದೆ.
ಏಕದಿನ ಪಂದ್ಯಕ್ಕೆ ಕರ್ನಾಟಕದ ಮನೀಶ್ ಪಾಂಡೆ ಮತ್ತು ಟಿ20 ಸರಣಿಗೆ ಯುವರಾಜ್ ಸಿಂಗ್ ಮೇಲೆ ಭರವಸೆ ಇಟ್ಟು, ಸುರೇಶ್ ರೈನಾ ಅವರನ್ನು ಏಕದಿನ ತಂಡದಿಂದ ಕೈಬಿಟ್ಟಿದ್ದು ಬಿಸಿಸಿಐ ಪ್ರಕಟಿಸಿದ ತಂಡದಲ್ಲಿನ ಹೈಲೆಟ್ಸ್. (ಆಯ್ಕೆದಾರರ ಕೃಪೆಗೆ ಕಾದಿರುವ ಜಡೇಜ, ಶಮಿ, ವಿಜಯ್)
ಸಂದೀಪ್ ಪಾಟೀಲ್ ನೇತೃತ್ವದ ಕಮಿಟಿ ರಾಜಧಾನಿಯಲ್ಲಿ ಶನಿವಾರ ಸಭೆ ಸೇರಿ ತಂಡವನ್ನು ಪ್ರಕಟಿಸಿದೆ. ಜನವರಿ 12ರಿಂದ 31ರವರೆಗೆ ನಡೆಯುವ 5 ಏಕದಿನ ಮತ್ತು 3 ಟಿ20 ಸರಣಿಗೆ ಭಾರತ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ.

ಏಕದಿನ ತಂಡ: ಮಹೇಂದ್ರ ಸಿಂಗ್ ಧೋನಿ (ನಾ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಮನೀಶ್ ಪಾಂಡೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಗುರುಕೀರತ್ ಮಾನ್, ರಿಶಿ ಧವನ್, ಬ್ರಿಂಡರ್ ಶ್ರಾನ್.
ಟಿ20 ಸರಣಿ: ಮಹೇಂದ್ರ ಸಿಂಗ್ ಧೋನಿ (ನಾ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಯುವರಾಜ್ ಸಿಂಗ್, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಹರ್ಭಜನ್ ಸಿಂಗ್, ಉಮೇಶ್ ಯಾದವ್, ಹಾರ್ಥಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆಶಿಸ್ ನೆಹ್ರಾ.
ಏಕದಿನ ವೇಳಾಪಟ್ಟಿ
ಜ 12 - ಪರ್ತ್
ಜ 15 - ಬ್ರಿಸ್ಬೇನ್
ಜ 17 - ಮೆಲ್ಬೋರ್ನ್
ಜ 20 - ಕ್ಯಾನ್ಬೆರಾ
ಜ 23 - ಸಿಡ್ನಿ
ಟಿ20 ಸರಣಿ
ಜ 26 - ಅಡಿಲೇಡ್
ಜ 29 - ಮೆಲ್ಬೋರ್ನ್
ಜ 31 - ಸಿಡ್ನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications