ಭಾರತ ಹಾಗೂ ಆಸ್ಟ್ರೇಲಿಯಾ ಏಕದಿನ ಹಾಗೂ ಟಿ20 ಸರಣಿ ವೇಳಾಪಟ್ಟಿ
ಬೆಂಗಳೂರು, ಸೆ. 07: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 28ರಂದು ಏಕದಿನ ಪಂದ್ಯ ನಿಗದಿಯಾಗಿದೆ.
ಚೆನ್ನೈನಲ್ಲಿ ಸೆಪ್ಟೆಂಬರ್ 17ರಿಂದ ಪಂದ್ಯಾವಳಿಗಳು ಆರಂಭವಾಗಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 12ರಂದು ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯಾ ಆಡಲಿದೆ.
ಬೆಂಗಳೂರು ಸೇರಿದಂತೆ ಎಲ್ಲೆಲ್ಲಿ 23 ಪಂದ್ಯಗಳು ನಡೆಯಲಿವೆ?
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 01ರ ಅವಧಿಯಲ್ಲಿ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಅಕ್ಟೋಬರ್ 7 ರಿಂದ ಅಕ್ಟೋಬರ್ 13ರ ಅವಧಿಯಲ್ಲಿ ಮೂರು ಟಿ20 ಪಂದ್ಯಗಳನ್ನು ಉಭಯ ತಂಡಗಳು ಆಡಲಿವೆ.
ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡವು ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿತ್ತು. ವಿರಾಟ್ ಕೊಹ್ಲಿ ಪಡೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
ಶ್ರೀಲಂಕಾ ಸರಣಿ ನಂತರ ಟೀಂ ಇಂಡಿಯಾ ತನ್ನ ತವರು ನೆಲದಲ್ಲಿ ಸರಿ ಸುಮಾರು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

* ಮೊದಲ ಏಕದಿನ ಪಂದ್ಯ: ಸೆಪ್ಟೆಂಬರ್ 17 (ಭಾನುವಾರ) ಚೆನ್ನೈ (ಎಂಎ ಚಿದಂಬರಂ ಸ್ಟೇಡಿಯಂ) - 1.30 PM IST
* ಎರಡನೇ ಏಕದಿನ ಪಂದ್ಯ: ಸೆಪ್ಟೆಂಬರ್ 21 (ಗುರುವಾರ)- ಕೋಲ್ಕತಾ (ಈಡೆನ್ ಗಾರ್ಡನ್) - 1.30 PM IST
* ಮೂರನೇ ಏಕದಿನ ಪಂದ್ಯ: ಸೆಪ್ಟೆಂಬರ್ 24 (ಭಾನುವಾರ) - ಇಂದೋರ್ (ಹೋಳ್ಕರ್ ಸ್ಟೇಡಿಯಂ) - 1.30 PM IST
* ನಾಲ್ಕನೇ ಏಕದಿನ ಪಂದ್ಯ: ಸೆಪ್ಟೆಂಬರ್ 28 (ಗುರುವಾರ)- ಬೆಂಗಳೂರು (ಎಂ ಚಿನ್ನಸ್ವಾಮಿ ಸ್ಟೇಡಿಯಂ) - 1.30 PM IST
* ಐದನೇ ಏಕದಿನ ಪಂದ್ಯ: ಅಕ್ಟೋಬರ್ 01 (ಭಾನುವಾರ)- ನಾಗ್ಪುರ (ವಿದರ್ಭ ಸ್ಟೇಡಿಯಂ) - 1.30 PM IST
ಟಿ20 ಐ
* ಮೊದಲ ಪಂದ್ಯ: ಅಕ್ಟೋಬರ್ 07- ರಾಂಚಿ(ಜೆಎಸ್ ಸಿಎ ಸ್ಟೇಡಿಯಂ)- 7 PM IST
* ಎರಡನೇ ಪಂದ್ಯ: ಅಕ್ಟೋಬರ್ 10- ಗುವಾಹಟಿ (ಬರ್ಸಪರ ಸ್ಟೇಡಿಯಂ)- 7 PM IST
* ಮೂರನೇ ಪಂದ್ಯ: ಅಕ್ಟೋಬರ್ 13-ಹೈದರಾಬಾದ್(ರಾಜೀವ್ ಗಾಂಧಿ ಸ್ಟೇಡಿಯಂ)- 7 PM IST
* ಎಲ್ಲಾ ಪಂದ್ಯಗಳು ಸ್ಟಾರ್ ನೆಟ್ವರ್ಕ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications