Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಯಾವಾಗ ಆರಂಭ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಬಹುನಿರೀಕ್ಷಿಯತ ಟೆಸ್ಟ್ ಕ್ರಿಕೆಟ್ ಸರಣಿಯೊಂದರ ವೇಳಾಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ 2024ರ ಆರಂಭದಲ್ಲಿ ನಡೆಯಲಿರುವ ಸರಣಿ ಇದಾಗಿದ್ದು ಇಂಗ್ಲೆಂಡ್ ತಂಡವನ್ನು ಭಾರತ ತವರಿನಲ್ಲಿ ಎದುರಿಸಲಿದೆ. ಐದು ಪಂದ್ಯಗಳ ಈ ಟೆಸ್ಟ್ ಸರಣಿ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಆರಂಭವಾಗಲಿದೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಭಿಯಾನವನ್ನು ಭಾರತ ಮುಂದಿನ ಜನವರಿ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಮುಂದುವರಿಸಲಿದೆ. ಐದು ಪಂದ್ಯಗಳ ಈ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

BCCI announces India vs England 5 match test series schedule starts in January

ಜನವರಿ 24 2024ರಿಂದ ಈ ಸರಣಿಯ ಮೊದಲ ಪಂದ್ಯ ಆರಂಬವಾಗಲಿದ್ದು ಹೈದರಾಬಾದ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಸರಣಿಯ ಎರಡನೇ ಪಂದ್ಯ ವೈಜಾಗ್‌ನಲ್ಲಿ ಫೆಬ್ರವರಿ 2ರಿಂದ ಆರಂಭವಾಗಲಿದೆ. ಈ ಸರಣಿಯ ಮೂರನೇ ಪಂದ್ಯವನ್ನು ರಾಜ್‌ಕೋಟ್ ಆತಿಥ್ಯವಹಿಸಲಿದ್ದು ಫೆಬ್ರವರಿ 15ರಿಂದ ಈ ಪಂದ್ಯ ಆರಂಭವಾಗಲಿದೆ. ಇನ್ನು ನಾಲ್ಕನೇ ಪಂದ್ಯ ರಾಂಚಿಯಲ್ಲಿ ಫೆಬ್ರವರಿ 23ರಿಂದ ಆರಂಭಗೊಳ್ಳಲಿದೆ. ಸರಣಿಯ ಐದನೇ ಹಾಘೂ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ಮಾರ್ಚ್ 7ರಿಂದ ಆರಂಭಗೊಳ್ಳಲಿದೆ.

ಕಳೆದ ಬಾರಿ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಉಭಯ ತಂಡಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದವು. ಆ ಸರಣಿಯನ್ನು ಭಾರತ 3-1 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿತ್ತು. ಚೆನ್ನೈ ಮತ್ತು ಅಹ್ಮದಾಬಾದ್ ಈ ಎರಡು ಕ್ರೀಡಾಂಗಣಗಳಲ್ಲಿ ನಾಲ್ಕು ಪಂದ್ಯಗಳು ಆಯೋಜನೆಯಾಗಿತ್ತು.

ಇನ್ನು ಭಾರತ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಭಿಯಾನವನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂಲಕ ಆರಂಭಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ವಶಕ್ಕೆ ಪಡೆದುಕೊಂಡು ಶುಭಾರಂಭ ಮಾಡಿದೆ. ಸರಣಿಯ ಕೊನೆಯ ಪಂದ್ಯ ಮಳೆಯ ಕಾರಣದಿಂದಾಗಿ ಡ್ರಾದಲ್ಲಿ ಅಂತ್ಯಕಂಡಿತ್ತು.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಿತ್ತು. ಸತತ ಎರಡನೇ ಬಾರಿಗೆ ಫೈನಲ್‌ಗೆ ಭಾರತ ಪ್ರವೇಶ ಪಡೆದುಕೊಂಡಿದ್ದರೂ ಈ ಬಾರಿಯೂ ಚಾಂಪಿಯನ್ ಪಟ್ಟಕ್ಕೇರುವಲ್ಲಿ ವಿಫಲವಾಗಿದ್ದು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆದ್ದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

Story first published: Tuesday, July 25, 2023, 20:39 [IST]
Other articles published on Jul 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+