ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ಎ ಮಹಿಳಾ ತಂಡ ಪ್ರಕಟ; ಕರ್ನಾಟಕದ ನಾಲ್ವರು ಆಟಗಾರ್ತಿಯರಿಗೆ ಸ್ಥಾನ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಯ ಮಹಿಳಾ ಆಯ್ಕೆ ಸಮಿತಿಯು ತವರಿನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ಎ ಮಹಿಳಾ ತಂಡವನ್ನು ಶುಕ್ರವಾರ, ನವೆಂಬರ್ 24ರಂದು ಪ್ರಕಟಿಸಿದೆ.
ಭಾರತ ಎ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರು ಟಿ20 ಪಂದ್ಯಗಳು ನವೆಂಬರ್ 29, ಡಿಸೆಂಬರ್ 1 ಮತ್ತು 3ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿವೆ.

ಈ ಸರಣಿಯು ಅದೇ ಮೈದಾನದಲ್ಲಿ ಹಿರಿಯ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಮುಂಚಿತವಾಗಿ ನಡೆಯಲಿದೆ. ಆ ಪಂದ್ಯಗಳು ಡಿಸೆಂಬರ್ 6, 9 ಮತ್ತು 10ರಂದು ನಡೆಯಲಿವೆ.
ಟಿ20 ಪಂದ್ಯಗಳ ನಂತರ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಇದು ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಡಿಸೆಂಬರ್ 14ರಿಂದ 17ರವರೆಗೆ ನಡೆಯಲಿದೆ.
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಭಾರತ ಎ ತಂಡ:
ಮಿನ್ನು ಮಣಿ - ಕೇರಳ ಕ್ರಿಕೆಟ್ ಸಂಸ್ಥೆ
ಕನಿಕಾ ಅಹುಜಾ - ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್
ಉಮಾ ಚೆಟ್ರಿ - ಅಸ್ಸಾಂ ಕ್ರಿಕೆಟ್ ಸಂಸ್ಥೆ
ಶ್ರೇಯಾಂಕಾ ಪಾಟೀಲ್ - ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಜಿ. ತ್ರಿಶಾ - ಹೈದರಾಬಾದ್ ಕ್ರಿಕೆಟ್ ಸಂಸ್ಥೆ
ವೃಂದಾ ದಿನೇಶ್ - ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಜ್ಞಾನಾನಂದ ದಿವ್ಯಾ - ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಅರುಷಿ ಗೋಯೆಲ್ - ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ
ದಿಶಾ ಕಸತ್ - ವಿದರ್ಭ ಕ್ರಿಕೆಟ್ ಸಂಸ್ಥೆ
ರಾಶಿ ಕನೋಜಿಯಾ - ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ
ಮನ್ನತ್ ಕಶ್ಯಪ್ - ಪಂಜಾಬ್ ಕ್ರಿಕೆಟ್ ಸಂಸ್ಥೆ
ಅನುಷಾ ಬಾರೆಡ್ಡಿ - ಆಂಧ್ರ ಕ್ರಿಕೆಟ್ ಅಸೋಸಿಯೇಷನ್
ಮೋನಿಕಾ ಪಟೇಲ್ - ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್
ಕಶಾವೀ ಗೌತಮ್ - ಯುಟಿ ಕ್ರಿಕೆಟ್ ಅಸೋಸಿಯೇಷನ್ ಚಂಡೀಗಢ
ಜಿಂತಿಮಣಿ ಕಲಿತಾ - ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್
ಪ್ರಕಾಶಿಕಾ ನಾಯಕ್ - ಮುಂಬೈ ಕ್ರಿಕೆಟ್ ಸಂಸ್ಥೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications