ವಿಶ್ವ ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆ ಮುಗಿದಿದೆ. ಏಕೆಂದರೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಎಂಬ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂದಿನ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ 2025ರ ಆವೃತ್ತಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಮೇ 25 ರಂದು ಫೈನಲ್ ಪಂದ್ಯ ನಡೆಯಲಿದೆ. ಐಪಿಎಲ್ 2025ರ ಉದ್ಘಾಟನಾ ಮತ್ತು ಫೈನಲ್ ಪಂದ್ಯಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ನೀಡಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎದುರಿಸಲಿದೆ.
ಭಾರತದ 13 ಕ್ರೀಡಾಂಗಣಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಪ್ರಕಟಿಸಿದೆ. ಈ ಬಾರಿ, ಟೂರ್ನಿಯ ಎರಡನೇ ದಿನದಂದು, ಐಪಿಎಲ್ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ.

ಮಾರ್ಚ್ 23 ರಂದು ಡಬಲ್ ಹೆಡರ್ ದಿನವಾಗಿದ್ದು, ಸಂಜೆ ಪಂದ್ಯ ಚೆನ್ನೈ ಮತ್ತು ಮುಂಬೈ ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಗುಂಪು ಹಂತದಲ್ಲಿ ಎರಡೂ ತಂಡಗಳು ಎರಡು ಬಾರಿ ಪರಸ್ಪರ ಎದುರಾಗಲಿವೆ. ಸಿಎಸ್‌ಕೆ ಮತ್ತು ಎಂಐ ನಡುವಿನ ಎರಡನೇ ಪಂದ್ಯ ಏಪ್ರಿಲ್ 20 ರಂದು ಮುಂಬೈನಲ್ಲಿ ನಡೆಯಲಿದೆ.
ರಾಜಸ್ಥಾನ ರಾಯಲ್ಸ್ ತಂಡದ ಎರಡನೇ ತವರು ಮೈದಾನ ಗುವಾಹಟಿಯಾಗಿದ್ದರೆ, ಪಂಜಾಬ್ ಕಿಂಗ್ಸ್ ತಂಡದ ಎರಡನೇ ತವರು ಮೈದಾನ ಧರ್ಮಶಾಲಾ ಆಗಿರುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ತವರು ಮೈದಾನ ವಿಶಾಖಪಟ್ಟಣಂ. ಐಪಿಎಲ್ 2025 ರಲ್ಲಿ ಮಧ್ಯಾಹ್ನದ ಪಂದ್ಯಗಳು ಮಧ್ಯಾಹ್ನ 3:30 ಗಂಟೆಗೆ ಮತ್ತು ಸಂಜೆಯ ಪಂದ್ಯಗಳು ಸಂಜೆ 7:30 ಗಂಟೆಗೆ ಆರಂಭವಾಗಲಿವೆ.
ಐಪಿಎಲ್‌ನ ಮೊದಲ ಅರ್ಹತಾ ಪಂದ್ಯ ಮೇ 20 ರಂದು ನಡೆಯಲಿದೆ. ಮೇ 21 ರಂದು ಮೊದಲ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಎರಡೂ ಪಂದ್ಯಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದಾದ ನಂತರ, ಎರಡನೇ ಅರ್ಹತಾ ಪಂದ್ಯವು ಮೇ 23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಪಂದ್ಯ 1: ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶನಿವಾರ, ಮಾರ್ಚ್ 22, ಸಂಜೆ 7:30, ಕೋಲ್ಕತ್ತಾ
ಪಂದ್ಯ 2: ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್, ಭಾನುವಾರ, ಮಾರ್ಚ್ 23, ಮಧ್ಯಾಹ್ನ 3:30, ಹೈದರಾಬಾದ್
ಪಂದ್ಯ 3: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಭಾನುವಾರ, ಮಾರ್ಚ್ 23, ಸಂಜೆ 7:30, ಚೆನ್ನೈ
ಪಂದ್ಯ 4: ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಸೋಮವಾರ, ಮಾರ್ಚ್ 24, ಸಂಜೆ 7:30, ವಿಶಾಖಪಟ್ಟಣಂ
ಪಂದ್ಯ 5: ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಮಂಗಳವಾರ, ಮಾರ್ಚ್ 25, ಸಂಜೆ 7:30, ಅಹಮದಾಬಾದ್
ಪಂದ್ಯ 6: ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬುಧವಾರ, ಮಾರ್ಚ್ 26, ಸಂಜೆ 7:30, ಗುವಾಹಟಿ
ಪಂದ್ಯ 7: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್, ಗುರುವಾರ, ಮಾರ್ಚ್ 27, ಸಂಜೆ 7:30, ಹೈದರಾಬಾದ್
ಪಂದ್ಯ 8: ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶುಕ್ರವಾರ, ಮಾರ್ಚ್ 28, ಸಂಜೆ 7:30, ಚೆನ್ನೈ
ಪಂದ್ಯ 9: ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಶನಿವಾರ, ಮಾರ್ಚ್ 29, ಸಂಜೆ 7:30, ಅಹಮದಾಬಾದ್
ಪಂದ್ಯ 10: ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಭಾನುವಾರ, ಮಾರ್ಚ್ 30, ಮಧ್ಯಾಹ್ನ 3:30, ವಿಶಾಖಪಟ್ಟಣಂ
ಪಂದ್ಯ 11: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಭಾನುವಾರ, ಮಾರ್ಚ್ 30, ಸಂಜೆ 7:30, ಗುವಾಹಟಿ
ಪಂದ್ಯ 12: ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಮಂಗಳವಾರ, ಮಾರ್ಚ್ 31, ಸಂಜೆ 7:30, ಮುಂಬೈ
ಪಂದ್ಯ 13: ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಬುಧವಾರ, ಏಪ್ರಿಲ್ 01, ಸಂಜೆ 7:30, ಲಕ್ನೋ
ಪಂದ್ಯ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ಬುಧವಾರ, ಏಪ್ರಿಲ್ 02, ಸಂಜೆ 7:30, ಬೆಂಗಳೂರು
ಪಂದ್ಯ 15: ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಗುರುವಾರ, ಏಪ್ರಿಲ್ 03, ಸಂಜೆ 7:30, ಕೋಲ್ಕತ್ತಾ
ಪಂದ್ಯ 16: ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ಶುಕ್ರವಾರ, ಏಪ್ರಿಲ್ 04, ಸಂಜೆ 7:30, ಲಕ್ನೋ
ಪಂದ್ಯ 17: ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, ಶನಿವಾರ, ಏಪ್ರಿಲ್ 05, ಮಧ್ಯಾಹ್ನ 3:30, ಚೆನ್ನೈ
ಪಂದ್ಯ 18: ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ಶನಿವಾರ, ಏಪ್ರಿಲ್ 06, ಸಂಜೆ 7:30, ನ್ಯೂ ಚಂಡೀಗಢ
ಪಂದ್ಯ 19: ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಭಾನುವಾರ, ಏಪ್ರಿಲ್ 06, ಮಧ್ಯಾಹ್ನ 3:30, ಕೋಲ್ಕತ್ತಾ
ಪಂದ್ಯ 20: ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್, ಭಾನುವಾರ, ಏಪ್ರಿಲ್ 06, ಸಂಜೆ 7:30, ಹೈದರಾಬಾದ್
ಪಂದ್ಯ 21: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸೋಮವಾರ, ಏಪ್ರಿಲ್ 07, ಸಂಜೆ 7:30, ಮುಂಬೈ
ಪಂದ್ಯ 22: ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಂಗಳವಾರ, ಏಪ್ರಿಲ್ 08, ಸಂಜೆ 7:30, ನ್ಯೂ ಚಂಡೀಗಢ
ಪಂದ್ಯ 23: ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್, ಬುಧವಾರ, ಏಪ್ರಿಲ್ 09, ಸಂಜೆ 7:30, ಅಹಮದಾಬಾದ್
ಪಂದ್ಯ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಗುರುವಾರ, ಏಪ್ರಿಲ್ 10, ಸಂಜೆ 7:30, ಬೆಂಗಳೂರು
ಪಂದ್ಯ 25: ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಶುಕ್ರವಾರ, ಏಪ್ರಿಲ್ 11, ಸಂಜೆ 7:30, ಚೆನ್ನೈ
ಪಂದ್ಯ 26: ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಶನಿವಾರ, ಏಪ್ರಿಲ್ 12, ಮಧ್ಯಾಹ್ನ 3:30, ಲಕ್ನೋ
ಪಂದ್ಯ 27: ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, ಶನಿವಾರ, ಏಪ್ರಿಲ್ 12, ಸಂಜೆ 7:30, ಹೈದರಾಬಾದ್
ಪಂದ್ಯ 28: ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾನುವಾರ, ಏಪ್ರಿಲ್ 13, ಮಧ್ಯಾಹ್ನ 3:30, ಜೈಪುರ
ಪಂದ್ಯ 29: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ಭಾನುವಾರ, ಏಪ್ರಿಲ್ 13, ಸಂಜೆ 7:30, ದೆಹಲಿ
ಪಂದ್ಯ 30: ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಸೋಮವಾರ, ಏಪ್ರಿಲ್ 14, ಸಂಜೆ 7:30, ಲಕ್ನೋ
ಪಂದ್ಯ 31: ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಮಂಗಳವಾರ, ಏಪ್ರಿಲ್ 15, ಸಂಜೆ 7:30, ನ್ಯೂ ಚಂಡೀಗಢ
ಪಂದ್ಯ 32: ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್, ಬುಧವಾರ, ಏಪ್ರಿಲ್ 16, ಸಂಜೆ 7:30, ದೆಹಲಿ
ಪಂದ್ಯ 33: ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಗುರುವಾರ, ಏಪ್ರಿಲ್ 17, ಸಂಜೆ 7:30, ಮುಂಬೈ
ಪಂದ್ಯ 34: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಶುಕ್ರವಾರ, ಏಪ್ರಿಲ್ 18, ಸಂಜೆ 7:30, ಬೆಂಗಳೂರು
ಪಂದ್ಯ 35: ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಶನಿವಾರ, ಏಪ್ರಿಲ್ 19, ಮಧ್ಯಾಹ್ನ 3:30, ಅಹಮದಾಬಾದ್
ಪಂದ್ಯ 36: ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಶನಿವಾರ, ಏಪ್ರಿಲ್ 19, ಸಂಜೆ 7:30, ಜೈಪುರ
ಪಂದ್ಯ 37: ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾನುವಾರ, ಏಪ್ರಿಲ್ 20, ಮಧ್ಯಾಹ್ನ 3:30, ನ್ಯೂ ಚಂಡೀಗಢ
ಪಂದ್ಯ 38: ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಭಾನುವಾರ, ಏಪ್ರಿಲ್ 20, ಸಂಜೆ 7:30, ಮುಂಬೈ
ಪಂದ್ಯ 38: ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಭಾನುವಾರ, ಏಪ್ರಿಲ್ 20, ಸಂಜೆ 7:30, ಮುಂಬೈ
ಪಂದ್ಯ 39: ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್, ಸೋಮವಾರ, ಏಪ್ರಿಲ್ 21, ಸಂಜೆ 7:30, ಕೋಲ್ಕತ್ತಾ
ಪಂದ್ಯ 40: ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಂಗಳವಾರ, ಏಪ್ರಿಲ್ 22, ಸಂಜೆ 7:30, ಲಕ್ನೋ
ಪಂದ್ಯ 41: ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಬುಧವಾರ, ಏಪ್ರಿಲ್ 23, ಸಂಜೆ 7:30, ಹೈದರಾಬಾದ್
ಪಂದ್ಯ 42: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಗುರುವಾರ, ಏಪ್ರಿಲ್ 24, ಸಂಜೆ 7:30, ಬೆಂಗಳೂರು
ಪಂದ್ಯ 43: ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಶುಕ್ರವಾರ, ಏಪ್ರಿಲ್ 25, ಸಂಜೆ 7:30, ಚೆನ್ನೈ
ಪಂದ್ಯ 44: ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ಶನಿವಾರ, ಏಪ್ರಿಲ್ 26, ಸಂಜೆ 7:30, ಕೋಲ್ಕತ್ತಾ
ಪಂದ್ಯ 45: ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಭಾನುವಾರ, ಏಪ್ರಿಲ್ 27, ಮಧ್ಯಾಹ್ನ 3:30, ಮುಂಬೈ
ಪಂದ್ಯ 46: ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾನುವಾರ, ಏಪ್ರಿಲ್ 27, ಸಂಜೆ 7:30, ದೆಹಲಿ
ಪಂದ್ಯ 47: ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್, ಸೋಮವಾರ, ಏಪ್ರಿಲ್ 28, ಸಂಜೆ 7:30, ಜೈಪುರ
ಪಂದ್ಯ 48: ದೆಹಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಮಂಗಳವಾರ, ಏಪ್ರಿಲ್ 29, ಸಂಜೆ 7:30, ದೆಹಲಿ
ಪಂದ್ಯ 49: ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಬುಧವಾರ, ಏಪ್ರಿಲ್ 30, ಸಂಜೆ 7:30, ಚೆನ್ನೈ
ಪಂದ್ಯ 50: ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಗುರುವಾರ, ಮೇ 01, ಸಂಜೆ 7:30, ಜೈಪುರ
ಪಂದ್ಯ 51: ಗುಜರಾತ್ ಟೈಟಾನ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಶುಕ್ರವಾರ, ಮೇ 02, ಸಂಜೆ 7:30, ಅಹಮದಾಬಾದ್
ಪಂದ್ಯ 52: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಶನಿವಾರ, ಮೇ 03, ಸಂಜೆ 7:30, ಬೆಂಗಳೂರು
ಪಂದ್ಯ 53: ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್, ಭಾನುವಾರ, ಮೇ 04, ಮಧ್ಯಾಹ್ನ 3:30, ಕೋಲ್ಕತ್ತಾ
ಪಂದ್ಯ 54: ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಭಾನುವಾರ, ಮೇ 04, ಸಂಜೆ 7:30, ಧರ್ಮಶಾಲಾ
ಪಂದ್ಯ 55: ಸನ್‌ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್, ಸೋಮವಾರ, ಮೇ 05, ಸಂಜೆ 7:30, ಹೈದರಾಬಾದ್
ಪಂದ್ಯ 56: ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್, ಮಂಗಳವಾರ, ಮೇ 06, ಸಂಜೆ 7:30, ಮುಂಬೈ
ಪಂದ್ಯ 57: ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬುಧವಾರ, ಮೇ 07, ಸಂಜೆ 7:30, ಕೋಲ್ಕತ್ತಾ
ಪಂದ್ಯ 58: ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, ಗುರುವಾರ, ಮೇ 08, ಸಂಜೆ 7:30, ಧರ್ಮಶಾಲಾ
ಪಂದ್ಯ 59: ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶುಕ್ರವಾರ, ಮೇ 09, ಸಂಜೆ 7:30, ಲಕ್ನೋ
ಪಂದ್ಯ 60: ಸನ್‌ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ಶನಿವಾರ, ಮೇ 10, ಸಂಜೆ 7:30, ಹೈದರಾಬಾದ್
ಪಂದ್ಯ 61: ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಭಾನುವಾರ, ಮೇ 11, ಮಧ್ಯಾಹ್ನ 3:30, ಧರ್ಮಶಾಲಾ
ಪಂದ್ಯ 62: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್, ಭಾನುವಾರ, ಮೇ 11, ಸಂಜೆ 7:30, ದೆಹಲಿ
ಪಂದ್ಯ 63: ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ಸೋಮವಾರ, ಮೇ 12, ಸಂಜೆ 7:30, ಚೆನ್ನೈ
ಪಂದ್ಯ 64: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್, ಮಂಗಳವಾರ, ಮೇ 13, ಸಂಜೆ 7:30, ಬೆಂಗಳೂರು
ಪಂದ್ಯ 65: ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬುಧವಾರ, ಮೇ 14, ಸಂಜೆ 7:30, ಅಹಮದಾಬಾದ್
ಪಂದ್ಯ 66: ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ಗುರುವಾರ, ಮೇ 15, ಸಂಜೆ 7:30, ಮುಂಬೈ
ಪಂದ್ಯ 67: ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್, ಶುಕ್ರವಾರ, ಮೇ 16, ಸಂಜೆ 7:30, ಜೈಪುರ
ಪಂದ್ಯ 68: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಶನಿವಾರ, ಮೇ 17, ಸಂಜೆ 7:30, ಬೆಂಗಳೂರು
ಪಂದ್ಯ 69: ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಭಾನುವಾರ, ಮೇ 18, ಮಧ್ಯಾಹ್ನ 3:30, ಅಹಮದಾಬಾದ್
ಪಂದ್ಯ 70: ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಭಾನುವಾರ, ಮೇ 18, ಸಂಜೆ 7:30, ಲಕ್ನೋ
ಪಂದ್ಯ 71: ಕ್ವಾಲಿಫೈಯರ್ 1, ಮಂಗಳವಾರ, ಮೇ 20, ಸಂಜೆ 7:30, ಹೈದರಾಬಾದ್
ಪಂದ್ಯ 72: ಎಲಿಮಿನೇಟರ್, ಬುಧವಾರ, ಮೇ 21, ಸಂಜೆ 7:30, ಹೈದರಾಬಾದ್
ಪಂದ್ಯ 73: ಕ್ವಾಲಿಫೈಯರ್ 2, ಶುಕ್ರವಾರ, ಮೇ 23, ಸಂಜೆ 7:30, ಕೋಲ್ಕತ್ತಾ
ಪಂದ್ಯ 74: ಫೈನಲ್, ಭಾನುವಾರ, ಮೇ 25, ಸಂಜೆ 7:30, ಕೋಲ್ಕತ್ತಾ