IPL Auction: ಭಾರತೀಯ ಆಟಗಾರರಿಗೆ ಹೆಚ್ಚಿದ ಡಿಮ್ಯಾಂಡ್: ಐಪಿಎಲ್‌ನಲ್ಲಿ ವಿದೇಶಿಗರು ಕಳೆದು ಕೊಂಡ್ರಾ ಕಮಾಂಡ್?
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅಗ್ರ ಪಟ್ಟ. ಈ ಲೀಗ್‌ನಲ್ಲಿ ಆಡಿ ಹೆಸರು ಮಾಡಬೇಕು ಎಂಬುದೇ ವಿದೇಶಿ ಆಟಗಾರರು ಸಹ ಬಯಸುತ್ತಾರೆ. ಈ ಲೀಗ್‌ನಲ್ಲಿ ಭಾಗವಹಿಸಲು ವಿಶ್ವದ ಬೇರೆ ಬೇರೆ ದೇಶಗಳ ಆಟಗಾರರು ಸಹ ಕಾಯುತ್ತಿರುತ್ತಾರೆ. ಅದೆಷ್ಟೋ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸಿದ ಬಳಿಕವೇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಆರಂಭದ ಕೆಲವು ಲೀಗ್‌ಗಳಲ್ಲಿ ವಿದೇಶಿ ಆಟಗಾರರು ಹಾಗೂ ಭಾರತೀಯ ಆಟಗಾರರ ಅನುಪಾತ ಸಮನಾಗಿ ಕಂಡು ಬಂದಿತ್ತು. ಆದರೆ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಈ ಸಂಖ್ಯೆಯಲ್ಲಿ ಏರಿಳಿತವಾಗಿದೆ.
ಈ ಬಾರಿಯ ಹರಾಜು ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯುವುದಾಗಿ ಬಿಸಿಸಿಐ ಘೋಷಿಸಿದೆ. ಆರಂಭದಲ್ಲಿ ಭಾರತದಲ್ಲಿ ಈ ಲೀಗ್ ಹರಾಜು ಭಾರತದಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಈ ಶ್ರೀಮಂತ ಲೀಗ್‌ನ ಬಿಡ್ಡಿಂಗ್ ವಿದೇಶಗಳಲ್ಲಿಯೂ ನಡೆಯಲಿದೆ. ಜೆಡ್ಡಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಐಪಿಎಲ್‌ನ 10 ಮಾಲೀಕರು ತಮ್ಮ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬೆವರು ಹರಿಸಲಿದ್ದಾರೆ. ಜೊತೆಗೆ ಹಣದ ಹೊಳೆಯನ್ನು ಹರಿಸಲಿದ್ದಾರೆ.

574 ಆಟಗಾರರ ಹೆಸರು ಶಾರ್ಟ್ ಲೀಸ್ಟ್
ಈ ಲೀಗ್‌ನಲ್ಲಿ ಭಾಗವಹಿಸಲು ವಿಶ್ವದ ಹಲವು ದೇಶಗಳಿಂದ ಒಟ್ಟು 1574 ಆಟಗಾರರು ಹೆಸರು ನೊಂದಾಯಿಸಿಕೊಂಡರು. ಇದರಲ್ಲಿ ಆಟಗಾರರು ಕೇವಲ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ನೊಂದಾಯಿಸಿಕೊಂಡ ಆಟಗಾರರನ್ನೆಲ್ಲಾ ಬಿಡ್ ಮಾಡಲಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹರಾಜಿನಲ್ಲಿ ಕೇವಲ 574 ಆಟಗಾರರ ಹೆಸರುಗಳು ಕೇಳಿಸಿಕೊಳ್ಳಲಿವೆ. ಒಟ್ಟು 204 ಸ್ಲಾಟ್‌ಗಳು ಈ ಹರಾಜಿನಲ್ಲಿ ಫಿಲ್ ಮಾಡಲಾಗುತ್ತದೆ.
208 ವಿದೇಶಿ ಆಟಗಾರರು
ಶಾರ್ಟ್ ಲೀಸ್ಟ್ ಆಧ ಆಟಗಾರರ ಪೈಕಿ 366 ಭಾರತೀಯ ಆಟಗಾರರು ಹಾಗೂ 208 ವಿದೇಶಿ ಆಟಗಾರರು ಮಾತ್ರ ಉಳಿದಿದ್ದಾರೆ. ಇನ್ನು ಮೂವರು ಅಸೋಸಿಯೇಟ್ ದೇಶಗಳನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು 10 ತಂಡಗಳು 70 ವಿದೇಶಿ ಆಟಗಾರರನ್ನು ಕೊಳ್ಳುವ ಅವಕಾಶ ಇದೆ. ಅಂದರೆ ಉಳಿದ 130 ದೇಶೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಭಾರೀ ಬೇಡಿಕೆ ಸಿಗಲಿದೆ.
ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ 10 ತಂಡಗಳು ಕನಿಷ್ಠ 18 ಆಟಗಾರರನ್ನು ಖರೀದಿಸಬಹುದಾಗಿದೆ. ಇನ್ನು ಗರಿಷ್ಠ 25 ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ. ಎಲ್ಲ ತಂಡಗಳು ಗರಿಷ್ಠ ಪ್ಲೇಯರ್‌ಗಳನ್ನು ಕೊಂಡಲ್ಲಿ ಮಾತ್ರ ಹಾರಜು ಆಗುವ ಆಟಗಾರರ ಸಂಖ್ಯೆ 204 ಆಗುತ್ತದೆ. ಒಂದು ತಂಡವು ಕಡಿಮೆ ಆಟಗಾರರನ್ನು ಆಯ್ಕೆ ಮಾಡಿದರೆ, ಮಾರಾಟವಾದ ಆಟಗಾರರ ಸಂಖ್ಯೆ ಇನ್ನೂ ಕಡಿಮೆ ಆಗುತ್ತದೆ.
ಈ ಬಾರಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಭಾರೀ ಮೊತ್ತದೊಂದಿಗೆ ಬಿಡ್ಡಿಂಗ್ ಅಂಗಳ ಪ್ರವೇಶಿಸಲಿವೆ. ಹೀಗಾಗಿ ಈ ಎರಡೂ ತಂಡಗಳು ಸ್ಟಾರ್ ಆಟಗಾರರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications