For Quick Alerts
ALLOW NOTIFICATIONS  
For Daily Alerts
 

IPL 2025: ಐಪಿಎಲ್ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿದ ಬಿಸಿಸಿಐ ತೀರ್ಮಾನ

ಐಪಿಎಲ್‌ 2025ಕ್ಕೆ ಇನ್ನು ದಿನಗಳು ಬಾಕಿ ಇವೆ. ಇದಕ್ಕೂ ಮೊದಲು ಈ ಶ್ರೀಮಂತ ಲೀಗ್‌ಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. ಈ ಸುದ್ದಿ ನಿಜಕ್ಕೂ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಲಿದೆ. ಬಿಸಿಸಿಐ ಬಿಡುಗಡೆ ಮಾಡಲಿರುವ ರಿಟೇನ್ಶನ್‌ ಪಾಲೀಸಿಯ ಬಗ್ಗೆ ಮಾಲೀಕರು ತದೆಕ ಚಿತ್ತದಿಂದ ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಯಾವುದೇ ಮಹತ್ವದ ತೀರ್ಮಾನ ಪ್ರಕಟವಾಗಿಲ್ಲ.

ಬಿಸಿಸಿಐ ರಿಟೇನ್ಶನ್‌ ಪಾಲೀಸಿಯ ನಿಯಮಗಳನ್ನು ಬಿಡುಗಡೆ ಮಾಡುವ ಮುನ್ನವೇ ಮತ್ತೊಂದು ಸುದ್ದಿ ಹೊರ ಬಂದಿದೆ. ಈ ಸುದ್ದಿಯಿಂದ ಮಾಲೀಕರಿಗಿಂತ ಹೆಚ್ಚಾಗಿ ಆಟಗಾರರ ಫುಲ್‌ ಖುಷ್ ಆಗಿದ್ದಾರೆ. ಅಂದಹಾಗೆ ಈಗ ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಫ್ರಾಂಚೈಸಿಗಳ ಒಪ್ಪಂದದ ಅಡಿಯಲ್ಲಿ ಹಣ ನೀಡಲಾಗುತ್ತದೆ. ಆದರೆ ಪ್ರತಿ ಪಂದ್ಯಕ್ಕೂ ಪ್ರತ್ಯೇಕ ಶುಲ್ಕ ನೀಡುವುದಿಲ್ಲ. ಇನ್ನು ಐಪಿಎಲ್‌ 2025ರಲ್ಲಿ ಪ್ರತಿ ಪಂದ್ಯವನ್ನು ಆಡುವ ಆಟಗಾರರಿಗೆ ಶುಲ್ಕ ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.

BCCI Announces Match Fees for Players Retention Policy Yet to Be Finalized

ಟ್ವೀಟ್‌ನಲ್ಲಿ ಏನಿದೆ?

ಸಾಮಾಜಿಕ ತಾಣದ ಮೂಲಕ ಜಯ್‌ ಶಾ ಆಟಗಾರರಿಗೆ ಗುಡ್‌ ನ್ಯೂಸ್ ನೀಡಿದ್ದಾರೆ. ಮುಂದಿನ ಸೀಜನ್‌ನಿಂದ ಐಪಿಎಲ್‌ನಲ್ಲಿ ಆಡುವ ಆಟಗಾರ ಪಂದ್ಯದ ಶುಲ್ಕವನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಆಟಗಾರ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿಗಳ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಒಂದು ಋತುವಿನಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಆಡುವ ಕ್ರಿಕೆಟಿಗರು ತಮ್ಮ ಒಪ್ಪಂದದ ಮೊತ್ತಕ್ಕೆ ಹೆಚ್ಚುವರಿಯಾಗಿ 1.05 ಕೋಟಿ ರೂ. ಪಡೆಯಲಿದ್ದಾರೆ ಎಂದು ಜಯ್‌ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪ್ರತಿ ಫ್ರಾಂಚೈಸಿಯು ಇಡೀ ಸೀಸನ್‌ಗೆ ಆಟಗಾರರಿಗೆ ಪಂದ್ಯ ಶುಲ್ಕವನ್ನು ಪಾವತಿಸಲು 12.60 ಕೋಟಿ ರೂಪಾಯಿಗಳನ್ನು ನಿಗದಿಪಡಿಸುತ್ತದೆ ಎಂದು ಜಯ್ ಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅನ್‌ಕ್ಯಾಪ್ಡ್‌ ಪ್ಲೇಯರ್‌ಗೆ ಬಂಪರ್

ಬಿಸಿಸಿಐ ಈ ನಿರ್ಧಾರ ನಿಜಕ್ಕೂ ಅನ್‌ಕ್ಯಾಪ್ಡ್‌ ಆಟಗಾರರಿಗೆ ದೊಡ್ಡ ಗಿಫ್ಟ್ ನೀಡದಂತೆ ಆಗಿದೆ. ಏಕೆಂದರೆ ಅನ್‌ಕ್ಯಾಪ್ಡ್‌ ಪ್ಲೇಯರ್ಸ್‌ ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ತಂಡ ಸೇರಿ, ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಶ್ರಮಿಸುತ್ತಾರೆ. ಅಲ್ಲದೆ ಪ್ರತಿ ಸೀಜನ್‌ ಪೂರ್ತಿ ಆಗಿ ಆಡಿದರು ಅಷ್ಟೇ ಸಂಭವಾನೆ ಸಿಗುತ್ತಿತ್ತು. ಆದರೆ ಇನ್ನು ಆನ್‌ಕ್ಯಾಪ್ಡ್ ಆಟಗಾರರು ಸಹ ಒಂದು ಐಪಿಎಲ್‌ ಸೀಜನ್ ಪುರ್ತಿ ಆಗಿ ಆಡಿದಲ್ಲಿ ಕೋಟ್ಯಾಧಿಶರು ಆಗುತ್ತಾರೆ. ಋತುವಿನ ಎಲ್ಲಾ ಪಂದ್ಯಗಳನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಡಿದರೆ, ಅವರು ಸಹ 1.05 ಕೋಟಿ ರೂ. ಪಡೆಯುತ್ತಾರೆ. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ಅನ್‌ಕ್ಯಾಪ್ಡ್‌ ಪ್ಲೇಯರ್‌ಗೆ ಖುಷಿ ತಂದಿರುವುದಂತೂ ಸುಳ್ಳಲ್ಲ.

Story first published: Saturday, September 28, 2024, 20:56 [IST]
Other articles published on Sep 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+