Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

 BCCI announces MPL Sports as Official Kit Sponsor for Team India

ಬಿಸಿಸಿಐ ತನ್ನ ಹೊಸ ಕಿಟ್ ಪ್ರಾಯೊಜಕರನ್ನು ಅಧಿಕೃತವಾಗಿ ಘೋಷಿಸಿದೆ. ನೈಕ್ ಬಳಿಕ ಕಿಟ್ ಪ್ರಾಯೋಜಕತ್ವ ಈಗ ಎಂಪಿಎಲ್ ಸ್ಪೋರ್ಟ್ಸ್‌ ಪಾಲಾಗಿದೆ. ಮೂರು ವರ್ಷಗಳ ಈ ಒಡಂಬಡಿಕೆಯನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ.

ನವೆಂಬರ್ 2020ರಿಂದ 2023ರ ಡಿಸೆಂಬರ್ ವರೆಗಿನ ಒಪ್ಪಂದವನ್ನು ಬಿಸಿಸಿಐ ಮಾಡಿಕೊಂಡಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಪ್ರತಿ ಪಂದ್ಯಕ್ಕೂ ಬಿಸಿಸಿಐ 65 ಲಕ್ಷ ರೂಪಾಯಿ ಈ ಪ್ರಾಯೋಜಕತ್ವದ ಒಪ್ಪಂದದಿಂದ ಪಡೆದುಕೊಳ್ಳಲಿದೆ. ಜೊತೆಗೆ 3 ವರ್ಷಗಳಲ್ಲಿ ಪ್ರತಿ ವರ್ಷ 3ಕೋಟಿ ವ್ಯಾಪಾರೀಕರಣ ಮೊತ್ತ ಬಿಸಿಸಿಐ ಪಾಲಾಗಲಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಹೀಗಾಗಿ MPL ಸ್ಪೋರ್ಟ್ಸ್ ವಿನ್ಯಾಸಗೊಳಿಸುವ ಈ ಜರ್ಸಿ ಮುಂದಿನ ಮೂರು ವರ್ಷಗಳ ಕಾಲ ಟೀಮ್ ಇಂಡಿಯಾದ ಪುರುಷರ ತಂಡದ ಜೊತೆಗೆ ಮಹಿಳಾ ತಂಡ ಹಾಗೂ ಅಂಡರ್‌-19 ತಂಡಗಳು ಕೂಡ ಧರಿಸಲಿದೆ.

ಈ ಮುನ್ನ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವ ನೈಕ್ ಕಂಪನಿಯ ಬಳಿಯಿತ್ತು. ಇದರ ಒಪ್ಪಂದದ ಅವಧಿ ಮುಕ್ತಾಯವಾದ ಕಾರಣ ಒಪ್ಪಂದವನ್ನು ಮುಂದುವರಿಸಲು ನೈಕ್ ಬಯಸಿರಲಿಲ್ಲ. ಕೊರೊನಾ ವೈರಸ್ ಕಾರಣದಿಂದಾಗಿ ನಷ್ಟವನ್ನು ತುಂಬಲು ನೈಕ್ ಈ ನಿರ್ಧಾರವನ್ನು ಕೈಗೊಂಡಿತ್ತು. ಹೀಗಾಗಿ ಹೊಸದಾಗಿ ಒಪ್ಪಂದಕ್ಕೆ ಬಿಸಿಸಿಐ ಅಹ್ವಾನ ನೀಡಿತ್ತು.

ಟೀಮ್ ಇಂಡಿಯಾ ಈ ಹೊಸ ಜರ್ಸಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದೆ. 3 ಏಕದಿನ 3 ಟಿ20 ಹಾಗೂ 4 ಟೆಸ್ಟ್ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಇದೇ ತಿಂಗಳ 27ರಿಂದ 2 ತಿಂಗಳ ಕಾಲ ನಡೆಯುವ ಈ ಸುದೀರ್ಘ ಸರಣಿಗೆ ಚಾಲನೆ ದೊರೆಯಲಿದೆ.

Story first published: Tuesday, November 17, 2020, 15:00 [IST]
Other articles published on Nov 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+