For Quick Alerts
ALLOW NOTIFICATIONS  
For Daily Alerts
 

ಭಾರತ ಹಾಗೂ ನ್ಯೂಜಿಲೆಂಡ್ ಏಕದಿನ, ಟಿ20 ವೇಳಾಪಟ್ಟಿ

By Mahesh

ಬೆಂಗಳೂರು, ಸೆ. 08: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳಾಪಟ್ಟಿ ಜತೆಗೆ ನ್ಯೂಜಿಲೆಂಡ್ ಸರಣಿಯ ವೇಳಾಪಟ್ಟಿಯನ್ನು ಕೂಡಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿವೆ.

BCCI announces New Zealand Tour of India 2017 ODI T20I schedule

ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಕಿವೀಸ್ ತಂಡವು 2 ಅಭ್ಯಾಸ ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 17 ಹಾಗೂ 19ರಂದು ಈ ಪಂದ್ಯಗಳು ನಿಗದಿಯಾಗಿವೆ.

ಅಕ್ಟೋಬರ್ 22ರಿಂದ ನವೆಂಬರ್ 7ರವರೆಗೆ ನಡೆಯಲಿದ್ದು, ಮುಂಬೈ, ಪುಣೆ, ದೆಹಲಿ, ರಾಜ್ ಕೋಟ್, ಕಾನ್ಪುರ, ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ.

ಈ ನಡುವೆ ಪ್ರವಾಸಿ ನ್ಯೂಜಿಲೆಂಡ್ 'ಎ' ವಿರುದ್ಧ ಭಾರತ 'ಎ' ತಂಡವು ನಾಲ್ಕು ದಿನಗಳ ಎರಡು ಪಂದ್ಯಗಳು ಹಾಗೂ ಐದು ಏಕದಿನ ಪಂದ್ಯಗಳನ್ನಾಡಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 13ರ ತನಕ ಪಂದ್ಯಗಳು ನಡೆಯಲಿವೆ.

ಏಕದಿನ ಪಂದ್ಯಗಳ ವೇಳಾಪಟ್ಟಿ:
ಮೊದಲ ಏಕದಿನ ಪಂದ್ಯ : ಅಕ್ಟೋಬರ್ 22 (ಮುಂಬೈ)
ಎರಡನೇ ಏಕದಿನ ಪಂದ್ಯ: ಅಕ್ಟೋಬರ್ 25 (ಪುಣೆ)
ಮೂರನೇ ಏಕದಿನ ಪಂದ್ಯ: ಅಕ್ಟೋಬರ್ 29 ( ಕಾನ್ಪುರ, ಯುಪಿಸಿಎ)

ಟಿ20ಐ ಪಂದ್ಯಗಳ ವೇಳಾಪಟ್ಟಿ
ಮೊದಲ ಟಿ20ಐ: ದೆಹಲಿ
ಎರಡನೇ ಟಿ20ಐ: ರಾಜ್ ಕೋಟ್
ಮೂರನೇ ಟಿ20ಐ: ತಿರುವನಂತಪುರಂ

ಇದಲ್ಲದೆ ಕಿವೀಸ್ ಎ ತಂಡದ ಪ್ರವಾಸದ ವೇಳಾಪಟ್ಟಿ, ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿರುವ ಅಧ್ಯಕ್ಷರ ಎಲೆವನ್ ತಂಡಗಳನ್ನು ಕೂಡಾ ಬಿಸಿಸಿಐ ಪ್ರಕಟಿಸಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+