ಐಪಿಎಲ್ ನೂತನ ಫ್ರಾಂಚೈಸಿ ಮಾಲೀಕತ್ವಕ್ಕೆ ಟೆಂಡರ್ ವಿಸ್ತರಿಸಿದ ಬಿಸಿಸಿಐ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲಿ ಎಂಟು ಫ್ರಾಂಚೈಸಿಗಳು ಸ್ಪರ್ಧಿಸುತ್ತಿವೆ. ಆದರೆ ಮುಂದಿನ ವರ್ಷ ಐಪಿಎಲ್‌ನಲ್ಲಿ ಇನ್ನೆರಡು ಹೆಚ್ಚುವರಿ ತಂಡಗಳು ಸೇರ್ಪಡೆಗೊಳ್ಳಲಿವೆ. ನೂತನ ಫ್ರಾಂಚೈಸಿಗಳ ಮಾಲೀಕತ್ವ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಟೆಂಡರ್ ಘೋಷಿಸಿದೆ.
ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಈ ಮೊದಲೇ ಇನ್ವಿಟೇಶನ್ ಟು ಟೆಂಡರ್ (ಐಟಿಟಿ) ನೀಡಿತ್ತು. ಟೆಂಡರ್ ಆಹ್ವಾನ ಪತ್ರದ ಶುಲ್ಕಕ್ಕೆ 2021ರ ಆಗಸ್ಟ್ 31 ಕೊನೇ ದಿನಾಂಕವೆಂದು ಹೇಳಿತ್ತು. ಆದರೆ ಆ ಬಳಿಕ ಐಟಿಟಿ ದಾಖಲಾತಿ ಖರೀದಿಗೆ ಶುಲ್ಕ ಭರಿಸಲು ಅಕ್ಟೋಬರ್ 10ರ ವರೆಗೆ ಗಡುವು ವಿಸ್ತರಿಸಿತ್ತು.
ಬೇರೆ ಬೇರೆ ಪಾರ್ಟಿಗಳಿಂದ ಆಸಕ್ತಿಯ ಕೋರಿಕೆ ಬಂದಿದ್ದರಿಂದ ಇನ್ವಿಟೇಶನ್ ಟು ಟೆಂಡರ್ ಸಲ್ಲಿಸಲು ದಿನಾಂಕವನ್ನು ಬಿಸಿಸಿಐ ಮತ್ತೆ ವಿಸ್ತರಿಸಿದೆ. ಐಟಿಟಿಗೆ ಸಂಬಂಧಿಸಿ ದಾಖಲಾತಿ ಸಲ್ಲಿಸಲು ಅಕ್ಟೋಬರ್ 20ರ ವರೆಗೆ ಬಿಸಿಸಿಐ ಗಡುವು ನೀಡಿದೆ. ಇಲ್ಲಿವರೆಗೆ ಆಸಕ್ತ ಪಾರ್ಟಿಗಳು ನೂತನ ಫ್ರಾಂಚೈಸಿಯ ಮಾಲೀಕತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಪಾರ್ಟಿಗಳಿಗೆ ಇನ್ವಿಟೇಶನ್ ಟು ಟೆಂಡರ್ ಲಭ್ಯವಿರಲಿದೆ. ಆದರೆ ಐಟಿಟಿ ಪಡೆದುಕೊಳ್ಳಬಯಸುವವರು 10,00,000 ರೂ. ಮರುಪಾವತಿಸಲಾಗದ ಟೆಂಡರ್ ಶುಲ್ಕ ಕಟ್ಟಬೇಕು. ಇದಲ್ಲದೆ ಯಾವುದಾದರೂ ಸರಕು ಮತ್ತು ಸೇವಾ ತೆರಿಗೆಗಳು ಕಟ್ಟಬೇಕಾಗಿ ಬಂದರೆ ಕಟ್ಟಬೇಕಾಗುತ್ತದೆ. ಮುಂದಿನ ವರ್ಷ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಯಾಗುವುದರಿಂದ ಮೆಗಾ ಆಕ್ಷನ್ ಕೂಡ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications