ಬಾಂಗ್ಲಾ ವಿರುದ್ಧದ ಸರಣಿಗೆ ದಿನಾಂಕ ಪ್ರಕಟಿಸಿದ ಬಿಸಿಸಿಐ: ಇಲ್ಲಿದೆ ವೇಳಾಪಟ್ಟಿ
ಭಾರತದ ಆಟಗಾರರು ಸದ್ಯ ತವರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಇದಾದ ಬಳಿಕ ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳಲ್ಲಿ ಭಾಗವಹಿಸುತ್ತಿದೆ. ಜೂನ್ ನಲ್ಲಿ ಟೀಮ್ ಇಂಡಿಯಾ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಈ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶದ ಪ್ರವಾಸವನ್ನು ಕೈಗೊಳ್ಳಲಿದೆ. ಇದಕ್ಕೆ ಸಂಬಂಧ ಪಟ್ಟ ಹಾಗೆ ಬಿಸಿಸಿಐ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಈ ಸೀಮಿತ ಓವರ್‌ಗಳ ಸರಣಿ ಆಗಸ್ಟ್ 17 ರಿಂದ ಆರಂಭವಾಗಿ, ಆಗಸ್ಟ್ 31ರ ವರೆಗೆ ನಡೆಯಲಿದೆ. ಈ ಸರಣಿಯ ಏಕದಿನ ಸರಣಿಯಿಂದ ಆರಂಭವಾಗಿ, ಟಿ20 ಸರಣಿಯೊಂದಿಗೆ ಮುಕ್ತಾಯವಾಗಲಿದೆ. ಏಕದಿನ ಸರಣಿಯ ಮೂರು ಪಂದ್ಯಗಳು ಆಗಸ್ಟ್ 17, 20 ಮತ್ತು 23 ರಂದು ನಡೆಯಲಿದೆ. ಟಿ20 ಪಂದ್ಯಗಳು ಆಗಸ್ಟ್ 26, 29 ಮತ್ತು 31 ರಂದು ನಡೆಯಲಿವೆ. ಈ ಪಂದ್ಯಗಳು ಮಿರ್ಪುರ್ ಮತ್ತು ಚಿತ್ತಗಾಂಗ್‌ನಲ್ಲಿ ನಡೆಯಲಿವೆ.

ಐಪಿಎಲ್ ಮುಗಿದ ಬಳಿಕ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಸುಮಾರು ಆಗಸ್ಟ್ ವರೆಗೂ ಇಂಗ್ಲೆಂಡ್‌ನಲ್ಲಿ ಇರಲಿದೆ. ಈ ಸರಣಿಯ ಕೊನೆಯ ಪಂದ್ಯ ಆಗಸ್ಟ್ 4 ರಂದು ಕೊನೆಗಳ್ಳಲಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಬಾಂಗ್ಲಾ ಪ್ರವಾಸ ಬೆಳೆಸಬಹುದಾಗಿದೆ. ಇನ್ನು ಭಾರತದಲ್ಲಿ ದೇಶೀಯ ಋತುವು ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇನ್ನು ಅಕ್ಟೋಬರ್‌ನಲ್ಲಿ ಭಾರತ ಪ್ರವಾಸವನ್ನು ವೆಸ್ಟ್ ಇಂಡೀಸ್ ಕೈಗೊಳ್ಳಲಿದೆ.
ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ ವೇಳಾಪಟ್ಟಿ
- ಮೊದಲ ಪಂದ್ಯ, ಆಗಸ್ಟ್ 17, ಮೀರ್‌ಪುರ್
- ಎರಡನೇ ಪಂದ್ಯ, ಆಗಸ್ಟ್ 20, ಮೀರ್‌ಪುರ್
- ಮೂರನೇ ಪಂದ್ಯ, ಆಗಸ್ಟ್ 23, ಚಿತ್ತಗಾಂಗ್
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯ ವೇಳಾಪಟ್ಟಿ
- ಮೊದಲ ಪಂದ್ಯ, ಆಗಸ್ಟ್ 26 - ಚಿತ್ತಗಾಂಗ್
- 2ನೇ ಪಂದ್ಯ: ಆಗಸ್ಟ್ 29 - ಮೀರ್ಪುರ್
- 3ನೇ ಟಿ20: ಆಗಸ್ಟ್ 31 - ಮೀರ್ಪುರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications