Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ಮಹಿಳಾ ತಂಡದ ವೇಳಾಪಟ್ಟಿ ಪ್ರಕಟ

ಟೀಮ್ ಇಂಡಿಯಾ ಮಹಿಳಾ ವಿಶ್ವಕಪ್‌ಗೆ ಭರದ ಸಿದ್ಧತೆ ನಡೆಸಿದೆ. ಈ ವೇಳೆ ಈ ಟೂರ್ನಿಯಲ್ಲಿ ಎಂಟು ತಂಡಗಳು ಕಾದಾಟ ನಡೆಸಲಿವೆ. ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಭಾರತದಲ್ಲಿ ಸೆಪ್ಟಂಬರ್‌ 2025ರ ಅಂತ್ಯದಲ್ಲಿ ನಡೆಯಲಿದೆ. ಈ ವಿಶ್ವಕಪ್‌ಗೆ ತಯಾರಿ ಆಗಿ ಟೀಮ್ ಇಂಡಿಯಾ ಏಕದಿನ ಸರಣಿಗಳನ್ನು ಆಡಲಿದೆ. ಇದಕ್ಕೆ ಪೂರ್ವಭಾಗಿಯಾಗಿ ಬಿಸಿಸಿಐ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಆಡಬೇಕಿದೆ. ಈ ಪ್ರಮುಖ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಭಾರತ ಮಹಿಳಾ ತಂಡ, ತವರಿನಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಪ್ರಡಸಕ್ತ ವರ್ಷದಲ್ಲಿ ಟೀಮ್ ಇಂಡಿಯಾ ವನಿತೆಯರು ಸ್ಥಿರ ಪ್ರದರ್ಶನ ನೀಡಿದ್ದು, ಭರವಸೆಯ ಮೂಡಿಸಿದೆ. ಮೂರು ಏಕದಿನ ಪಂದ್ಯಗಳ ಸರಣಿ ಸೆಪ್ಟಂಬರ್‌ 14 ರಿಂದ ಆರಂಭವಾಗಲಿದೆ. ಮೂರು ಪಂದ್ಯಗಳಿಗೆ ಚೆನ್ನೈನ ಮೈದಾನ ಸಾಕ್ಷಿಯಾಗಲಿದೆ. ಈ ಸರಣಿ ಸೆಪ್ಟಂಬರ್‌ 20ರ ವರೆಗೆ ನಡೆಯಲಿದೆ. ಮೂರು ಪಂದ್ಯಗಳು ಹಗಲು ರಾತ್ರಿ ನಡೆಯಲಿವೆ.

BCCI Announces Schedule for India vs Australia Women s ODI Series Ahead of 2025 World Cup

ಮೂರು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗುತ್ತವೆ. ಈ ಸರಣಿ ನಡೆದ ಬಳಿಕ ಭಾರತದಲ್ಲಿ ಏಕದಿನ ಸರರಣಿ ನಡೆಯಲಿದ್ದು, ಈ ಸರಣಿ ಪೂರ್ವಭಾವಿಯಾಗಿರಲಿದೆ. ಎಲ್ಲ ಪ್ರಮುಖ ಆಟಗಾರ್ತಿಯರು ಪ್ರದರ್ಶನದ ಮೇಲೆ ಚೊತ್ತ ನೆಟ್ಟಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿ ಭಾರತ ವನಿತೆಯರಿಗೆ ಮಹತ್ವದಾಗಿವೆ.

ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯನ್ನು ಆಡುವ ಮುನ್ನ ಟೀಮ್ ಇಂಡಿಯಾ ವನಿತೆಯರು ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಜೂನ್‌ 28 ರಿಂದ, ಜುಲೈ 22ರ ವರೆಗೆ ಪ್ರವಾಸವನ್ನು ಆರಂಭಿಸಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ವನಿತೆಯರು ಐದು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಟಿ20 ಪಂದ್ಯಗಳು ಸಹ ನಡೆಯಲಿವೆ. ಭಾರತ ಮಹಿಳಾ ತಂಡ ಇತ್ತೀಚಿಗೆ ಶ್ರೀಲಂಕಾ ಪ್ರವಾಸವನ್ನು ಬೆಳೆಸಿತು. ಈ ವೇಳೆ ಭಾರತ ಮಹಿಳಾ ತಂಡ ತ್ರಿಕೋನ ಸರಣಿಯನ್ನು ಆಡಿತು. ಅಲ್ಲದೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು.

BCCI Announces Schedule for India vs Australia Women s ODI Series Ahead of 2025 World Cup

ಭಾರತ, ಆಸ್ಟ್ರೇಲಿಯಾ ನಡುವಣ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ, ಸೆ.14 ಮ.1.30ಕ್ಕೆ, ಎಂಎ ಚಿದಂಬರಂ ಸ್ಟೇಡಿಯಂ ಚೆನ್ನೈ
ಏರಡನೇ ಏಕದಿನ ಪಂದ್ಯ, ಸೆ.14 ಮ.1.30ಕ್ಕೆ, ಎಂಎ ಚಿದಂಬರಂ ಸ್ಟೇಡಿಯಂ ಚೆನ್ನೈ
ಮೂರನೇ ಏಕದಿನ ಪಂದ್ಯ, ಸೆ.14 ಮ.1.30ಕ್ಕೆ, ಎಂಎ ಚಿದಂಬರಂ ಸ್ಟೇಡಿಯಂ ಚೆನ್ನೈ

Story first published: Thursday, May 29, 2025, 15:37 [IST]
Other articles published on May 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+