Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟ

BCCI Announces Squad For T20I Series And First Two ODIs vs Australia

ನವದೆಹಲಿ, ಫೆಬ್ರವರಿ 15: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟೀಮ್ ಇಂಡಿಯಾ ವಿರುದ್ಧ ಎರಡು ಟಿ20 ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಇದಕ್ಕೆ ಸಂಬಂಧಿಸಿ ಬಿಸಿಸಿಐ ಶುಕ್ರವಾರ (ಫೆಬ್ರವರಿ 15) ತಂಡಗಳನ್ನು ಪ್ರಕಟಿಸಿದೆ. ಸರಣಿಯು ಫೆಬ್ರವರಿ 24ರಿಂದ ಆರಂಭಗೊಳ್ಳಲಿದೆ.

ಟೀಮ್ ಇಂಡಿಯಾವು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದಾಗ ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯೆರಡು ಪಂದ್ಯ ಮತ್ತು ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗಿದ್ದು ವಿಶ್ರಾಂತಿಯಲ್ಲಿದ್ದ ಕೊಹ್ಲಿ ತಂಡಕ್ಕೆ ಮತ್ತೆ ಸೇರಿಕೊಂಡಿದ್ದಾರೆ. ಕೊಹ್ಲಿಯೇ ಬ್ಲ್ಯೂಬಾಯ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ಸರಣಿಗೆ ಭಾರತ ತಂಡ
ವಿರಾಟ್ (ಸಿ), ರೋಹಿತ್ (ವಿಸಿ), ಕೆಎಲ್ ರಾಹುಲ್, ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿಕೆ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವಿಜಯ್ ಶಂಕರ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಸಿಧಾರ್ಥ್ ಕೌಲ್, ಮಯಾಂಕ್ ಮಾರ್ಕೆಂಡೆ.

ಮೊದಲೆರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ
ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿ.ಸಿ), ಶಿಖರ್ ಧವನ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ (ವಿ.ಕೆ), ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಶಮಿ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಿಜಯ್ ಶಂಕರ್, ರಿಷಬ್ ಪಂತ್, ಸಿದ್ಧಾರ್ಥ್ ಕೌಲ್, ಕೆಎಲ್ ರಾಹುಲ್.

ಅಂತಿಮ ಮೂರು ಏಕದಿನಕ್ಕೆ ಭಾರತ ತಂಡ
ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿ.ಸಿ), ಶಿಖರ್ ಧವನ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್‌ಡಿ (ವಿ.ಕೆ), ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ ಕುಮಾರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಕೆಎಲ್ ರಾಹುಲ್, ರಿಷಬ್ ಪಂತ್.

Story first published: Friday, February 15, 2019, 18:48 [IST]
Other articles published on Feb 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+