For Quick Alerts
ALLOW NOTIFICATIONS  
For Daily Alerts
 

WPL 2025: ಡಬ್ಲ್ಯೂಪಿಎಲ್ ಆಟಗಾರರ ಹರಾಜು ಪಟ್ಟಿ ಪ್ರಕಟಿಸಿದ ಬಿಸಿಸಿಐ

ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025 ರ ಆಟಗಾರರ ಹರಾಜು ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಶನಿವಾರ ಹರಾಜು ಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತು ಬಿಸಿಸಿಐ ಅಧ್ಯಕ್ಷ ಮತ್ತು ಡಬ್ಲ್ಯೂಪಿಎಲ್ ಸಮಿತಿ ಅಧ್ಯಕ್ಷ ರೋಜರ್ ಬಿನ್ನಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಐಪಿಎಲ್ ಮೆಗಾ ಹರಾಜಿನ ಬಳಿಕ ಇದೀಗ ಡಬ್ಲ್ಯೂಪಿಎಲ್ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ.

ಡಬ್ಲ್ಯೂಪಿಎಲ್ 2025ರ ಹರಾಜಿಗೆ 120 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 91 ಭಾರತೀಯ ಮತ್ತು 29 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ. ಇವರೊಂದಿಗೆ ಅಸೋಸಿಯೇಟ್ ನೇಷನ್ಸ್‌ನ 3 ಆಟಗಾರರು ಸಹ ಸೇರಿದ್ದಾರೆ. 82 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 8 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ.

BCCI announces WPL player auction list

ಎಲ್ಲಾ ತಂಡಗಳಲ್ಲಿ 19 ಸ್ಲಾಟ್‌ಗಳು ಖಾಲಿ ಇದ್ದು, ಅದರಲ್ಲಿ 5 ಸ್ಲಾಟ್‌ಗಳನ್ನು ವಿದೇಶಿ ಆಟಗಾರರಿಗೆ ಮೀಸಲಿಡಲಾಗಿದೆ. ಭಾರತದ ಪ್ರಮುಖ ಆಟಗಾರರೆಂದರೆ 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಸ್ನೇಹ ರಾಣಾ ಹರಾಜು ಪ್ರಕ್ರಿಯಿಗೆ ಪ್ರವೇಶಿಸಿದ್ದಾರೆ. ಇವರ ಹೊರತಾಗಿ ಪೂನಂ ಯಾದವ್ ಕೂಡ ಮೂಲ ಬೆಲೆ 30 ಲಕ್ಷ ರೂ.ಗಳನ್ನು ಹೊಂದಿದ್ದಾರೆ.

ಸ್ಟಾರ್ ವಿದೇಶಿ ಆಟಗಾರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಪೋಟಕ ಬ್ಯಾಟರ್ ಹೀದರ್ ನೈಟ್ ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡೇಂಡ್ರಾ ಡಾಟಿನ್ ಸೇರಿದ್ದಾರೆ. ನೈಟ್ ಮೂಲ ಬೆಲೆ 50 ಲಕ್ಷ ರೂ.ಗಳಾಗಿದ್ದು, ಡಾಟಿನ್ ಮೂಲ ಬೆಲೆ 30 ಲಕ್ಷ ರೂ. ಮಹಾರಾಷ್ಟ್ರದ ತೇಜಸ್ ಹಸಾಬ್ನಿಸ್ ಕೂಡ 30 ಲಕ್ಷ ರೂ.ಗಳ ಮೂಲ ಬೆಲೆಯೊಂದಿಗೆ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಡಬ್ಲ್ಯೂಪಿಎಲ್ ಚಾಂಪಿಯನ್ ತಂಡಗಳು

ಡಬ್ಲ್ಯೂಪಿಎಲ್ 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಚಾಂಪಿಯನ್ ಆಗಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ವನಿತೆಯರ ತಂಡ ಗೆಲುವಿನ ನಗೆ ಬೀರಿತ್ತು. ಡಬ್ಲ್ಯೂಪಿಎಲ್‌ನ ಮೊದಲ ಆವೃತ್ತಿ 2023 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು.

ಫ್ರಾಂಚೈಸಿಗಳ ಬಳಿ ಇರುವ ಪರ್ಸ್ ಮೊತ್ತ

  • ಡೆಲ್ಲಿ ಕ್ಯಾಪಿಟಲ್ಸ್: 2.5 ಕೋಟಿ ರೂ.
  • ಗುಜರಾತ್ ಜೈಂಟ್ಸ್: 4.4 ಕೋಟಿ ರೂ.
  • ಮುಂಬೈ ಇಂಡಿಯನ್ಸ್: 2.65 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ ರೂ.
  • ಯುಪಿ ವಾರಿಯರ್ಸ್: 3.9 ಕೋಟಿ ರೂ

Story first published: Saturday, December 7, 2024, 23:55 [IST]
Other articles published on Dec 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+