ಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ನವದೆಹಲಿ, ನವೆಂಬರ್ 1: ಪ್ರವಾಸ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿರುವ ಭಾರತ ಕ್ರಿಕೆಟ್ ತಂಡದ ಫುಡ್ ಮೆನುವಿನಿಂದ ಬೀಫ್ ತೆಗೆಯುವಂತೆ ಬಿಸಿಸಿಐಯು ಕ್ರಿಕೆಟ್ ಆಸ್ಟ್ರೇಲಿಯಾವನ್ನು ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಪ್ರವಾಸದ ವೇಳೆ ಟೀಮ್ ಇಂಡಿಯಾ ಸುಮಾರು ಎರಡು ತಿಂಗಳ ಕಾಲ ಆಸ್ಟ್ರೇಲಿಯಾದಲ್ಲಿ ಇರಲಿದೆ.
ಸುದೀರ್ಘ ಪ್ರವಾಸದಲ್ಲಿ ಭಾರತಕ್ಕೆ ಪ್ರತಿದಿನ ಒದಗಿಸಲಾಗುವ ರೆಸ್ಟೋರೆಂಟ್ ಆಹಾರ ಮೆನುವಿನಲ್ಲಿ ಬೀಫ್ ಕೂಡ ಸೇರ್ಪಡಿಸಲಾಗಿದೆ. ಟೀಮ್ ಇಂಡಿಯಾದಲ್ಲಿರುವ ಸಸ್ಯಹಾರಿ ಆಟಗಾರರು ಮೆನುವಿನಿಂದ ಬೀಫ್ ತೆಗೆಯುವಂತೆ ಸೂಚಿಸಿರುವುದರಿಂದ ಈ ಕುರಿತು ಬಿಸಿಸಿಐ, ಆಸ್ಟ್ರೇಲಿಯಾ ಕ್ರಿಕೆಟ್ ಅನ್ನು ಮನವಿ ಮಾಡಿದೆ ಎನ್ನಲಾಗಿದೆ.
'ತಂಡದಲ್ಲಿ ಕೆಲ ಸಸ್ಯಹಾರಿ ಆಟಗಾರರಿದ್ದಾರೆ. ಮೆನುವಿನಲ್ಲಿ ಬೀಫ್ ಸೇರಿಸುವುದರಿಂದ ಆ ಆಟಗಾರ ಆಟದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಆಸ್ಟ್ರೇಲಿಯಾ ಆಹಾರ ಸೇವೆಯ ಬಗ್ಗೆ ಆ ಆಟಗಾರರು ದೂರು ನೀಡಿದ್ದಾರೆ' ಎಂದು ಹೆಸರು ತಿಳಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವೆಂಬರ್ 21ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಪ್ರವಾಸ ಸರಣಿ ಜನವರಿ 18ರಂದು ಕೊನೆಗೊಳ್ಳಲಿದೆ. ಪ್ರವಾಸವು 3 ಟಿ20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಳ್ಳಲಿದೆ. ಮೊದಲ ಟಿ20 ಬ್ರಿಸ್ಬೇನ್ ನ ಗಬ್ಬಾದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications