Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಅವಾರ್ಡ್ 2024: ಯಶಸ್ವಿ ಜೈಸ್ವಾಲ್‌ನಿಂದ ರವಿಶಾಸ್ತ್ರಿವರೆಗೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಮಂಗಳವಾರ, ಜನವರಿ 23ರಂದು ಹೈದರಾಬಾದ್‌ನಲ್ಲಿ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶುಭ್ಮನ್ ಗಿಲ್, ರವಿಶಾಸ್ತ್ರಿ, ಸ್ಮೃತಿ ಮಂಧಾನ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಗಮನ ಸೆಳೆದರು.

ಎಲ್ಲಾ ವಯೋಮಾನದ ಹಲವು ಭಾರತೀಯ ಹಾಲಿ ಹಾಗೂ ಮಾಜಿ ಆಟಗಾರರು ತಮ್ಮ ಅದ್ಭುತ ಕೊಡುಗೆಗಾಗಿ ಬಿಸಿಸಿಐ ಪ್ರಶಸ್ತಿಯನ್ನು ಪಡೆದರು.

BCCI Awards 2024: From Yashasvi Jaiswal to Ravi Shastri; Complete List of Award Winners

ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ ಮತ್ತು ಶುಭ್ಮನ್ ಗಿಲ್ ಅವರಂತಹ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮತ್ತೊಂದೆಡೆ, ಕನ್ನಡಿಗ ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಅತ್ಯುತ್ತಮ ಅಂತಾರಾಷ್ಟ್ರೀಯ ಪುರುಷರ ಪದಾರ್ಪಣೆ ಪ್ರಶಸ್ತಿಯನ್ನು ಪಡೆದರು. ಬಿಸಿಸಿಐ ಪ್ರಶಸ್ತಿಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿದೆ.

ಭಾರತೀಯ ಪುರುಷರ ಅಂತಾರಾಷ್ಟ್ರೀಯ ಪ್ರಶಸ್ತಿಗಳು

ದಿಲೀಪ್ ಸರ್ದೇಸಾಯಿ ಪ್ರಶಸ್ತಿ 2022-23

ರವಿಚಂದ್ರನ್ ಅಶ್ವಿನ್ - ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್

BCCI Awards 2024: From Yashasvi Jaiswal to Ravi Shastri; Complete List of Award Winners

ದಿಲೀಪ್ ಸರ್ದೇಸಾಯಿ ಪ್ರಶಸ್ತಿ 2022-23

ಯಶಸ್ವಿ ಜೈಸ್ವಾಲ್ - ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌

ಅತ್ಯುತ್ತಮ ಅಂತಾರಾಷ್ಟ್ರೀಯ ಚೊಚ್ಚಲ ಪುರುಷ ಆಟಗಾರರು

ಮಯಾಂಕ್ ಅಗರ್ವಾಲ್ (2019-20)
ಅಕ್ಷರ್ ಪಟೇಲ್ (2020-21)
ಶ್ರೇಯಸ್ ಅಯ್ಯರ್ (2021-22)
ಯಶಸ್ವಿ ಜೈಸ್ವಾಲ್ (2022-23)

ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ - ಪಾಲಿ ಉಮ್ರಿಗರ್ ಪ್ರಶಸ್ತಿ

ಮೊಹಮ್ಮದ್ ಶಮಿ (2019-20)
ರವಿಚಂದ್ರನ್ ಅಶ್ವಿನ್ (2020-21)
ಜಸ್ಪ್ರೀತ್ ಬುಮ್ರಾ (2021-22)
ಶುಭ್ಮನ್ ಗಿಲ್ (2022-23)

ಭಾರತೀಯ ಮಹಿಳಾ ಅಂತಾರಾಷ್ಟ್ರೀಯ ಪ್ರಶಸ್ತಿಗಳು

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯರು

ಪೂನಂ ಯಾದವ್ (2019-20)
ಜೂಲನ್ ಗೋಸ್ವಾಮಿ (2020-21)
ರಾಜೇಶ್ವರಿ ಗಾಯಕ್ವಾಡ್ (2021-22)
ದೇವಿಕಾ ವೈದ್ಯ (2022-23)

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರು

ಪುನಮ್ ರಾವುತ್ (2019-20)
ಮಿಥಾಲಿ ರಾಜ್ (2020-21)
ಹರ್ಮನ್‌ಪ್ರೀತ್ ಕೌರ್ (2021-22)
ಜೆಮಿಮಾ ರೋಡ್ರಿಗಸ್ (2022-23)

ಅತ್ಯುತ್ತಮ ಅಂತಾರಾಷ್ಟ್ರೀಯ ಚೊಚ್ಚಲ ಆಟಗಾರ್ತಿಯರು

ಪ್ರಿಯಾ ಪುನಿಯಾ (2019-20)
ಶಫಾಲಿ ವರ್ಮಾ (2020-21)
ಸಬ್ಬಿನೇನಿ ಮೇಘನಾ (2021-22)
ಅಮನ್ಜೋತ್ ಕೌರ್ (2022-23)

ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳೆ ಕ್ರಿಕೆಟರ್

ದೀಪ್ತಿ ಶರ್ಮಾ (2019-20, 2022-23)
ಸ್ಮೃತಿ ಮಂಧಾನ (2020-21, 2021-22)

ಜೀವಮಾನ ಸಾಧನೆ ಪ್ರಶಸ್ತಿಗಳು

ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ - (25 ಲಕ್ಷ ರೂಪಾಯಿ) - ಫಾರೋಖ್ ಇಂಜಿನಿಯರ್, ರವಿಶಾಸ್ತ್ರಿ

Story first published: Tuesday, January 23, 2024, 21:12 [IST]
Other articles published on Jan 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+