IPL ಮಧ್ಯದಲ್ಲೇ ಈ ತಂಡದ ಮಾಲೀಕರನ್ನು ಬ್ಯಾನ್ ಮಾಡಿದ BCCI
ಇಂಡಿಯನ್ ಪ್ರೀಮಿಯರ್ ಲೀಗ್ ಈಗ ನಡೆಯುತ್ತಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಸಹ ಭಾಗವಹಿಸಿದ್ದಾರೆ. ಆದರೆ ಈ ಲೀಗ್ ಮೇಲೆ ಫಿಕ್ಸಿಂಗ್ ಕರಿನೆರಳು ಬಿದ್ದಿದೆ. ಈ ಸುದ್ದಿ ಇತ್ತೀಚಿಗಷ್ಠೆ ಬಿಸಿಸಿಐ ತಿಳಿಸಿತ್ತು. ಈಗ ಬಿಸಿಸಿಐ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ನೀಡಿದೆ. ಈ ವೇಳೆ ಬಿಸಿಸಿಐ ತಂಡದ ಮಾಲೀಕರೊಬ್ಬರನ್ನು ಬ್ಯಾನ್ ಮಾಡಿದೆ. ಆ ಬಗ್ಗೆ ವರದಿ ಇಲ್ಲಿದೆ.
ಮುಂಬೈ ಟಿ20 ಲೀಗ್ ಫ್ರಾಂಚೈಸಿಯ ಮಾಜಿ ಸಹ ಮಾಲೀಕ ಗುರ್ಮೀತ್ ಸಿಂಗ್ ಭಮ್ರಾ ಬ್ಯಾನ್ ಮಾಡಲಾಗಿದೆ. ಫಿಕ್ಸಿಂಗ್‌ಗಾಗಿ ಇವರು ಆಟಗಾರರನ್ನು ಸಂಪರ್ಕಿಸಿದ್ದರು ಎಂದು ಬಿಸಿಸಿಐ ತಿಳಿಸಿದ್ದು ಅವರ ವಿರುದ್ಧ ಈಗ ಬ್ಯಾನ್ ಅಸ್ತ್ರವನ್ನು ಪ್ರಯೋಗಿಸಿದೆ. ಇವರು ಮುಂಬೈ ಟಿ20 ಲೀಗ್‌ನಲ್ಲಿ ಸೋಬಿ ಸೂಪರ್‌ಸಾನಿಕ್ಸ್‌ನ ಸಹ ಮಾಲೀಕರು ಆಗಿದ್ದರು. ಈ ಟೂರ್ನಿಯ ವೇಳೆ ಫಿಕ್ಸಿಂಗ್‌ಗಾಗಿ ಭಮ್ರಾ ಧವಲ್ ಕುಲಕರ್ಣಿ ಹಾಗೂ ಭವಿನ್ ಠಕ್ಕರ್ ಅವರನ್ನು ಸಂಪರ್ಕಿಸಿದ್ದರು. ಇದೇ ಕಾರಣಕ್ಕಾಗಿ ಬಿಸಿಸಿಐ ಇವರನ್ನು ಬ್ಯಾನ್ ಮಾಡಿ ಆದೇಶವನ್ನು ಹೊರಡಿಸಿದೆ.

ಗುರ್ಮೀತ್ ಸಿಂಗ್ ಭಮ್ರಾ ಕೆನಡಾ ಲೀಗ್‌ನಲ್ಲೂ ತಮ್ಮ ಸಂಬಂಧವನ್ನು ಹೊಂದಿದ್ದರು. ಆದರೆ ಇವರು ಇನ್ನು ಮುಂದೆ ಮುಂಬೈ ಟಿ20 ಲೀಗ್‌ನ ಭಾಗವಾಗುವುದಿಲ್ಲ. 2019ರಲ್ಲಿ ನಿಂತು ಹೋಗಿದ್ದ ಈ ಟೂರ್ನಿಯನ್ನು ಮತ್ತೆ ಈ ಬಾರಿ ಆರಂಭಿಸಲಾಗಿದೆ. ಬಿಸಿಸಿಐ ಹೊರಡಿಸಿದ ಆದೇಶ ಪ್ರತಿಯಲ್ಲಿ ಇವರ ಮೇಲೆ ಎಷ್ಟು ವರ್ಷ ಬ್ಯಾನ್ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಭ್ರಷ್ಟಾಚಾರ ನಿಗ್ರಹ ಘಟಕದ ಕಲಂ 4 ಹಾಗೂ ಕಲಂ 5ರ ಅಡಿಯಲ್ಲಿ ಗುರ್ಮೀತ್ ಸಿಂಗ್ ಭಮ್ರಾ ಅವರನ್ನು ಸೂಕ್ತ ಕ್ರಮ ಕೂಗೊಳ್ಳುವ ಸಾಧ್ಯತೆ ಇದೆ. ಬಿಸಿಸಿಐನ ಎಸಿಯು ಸಂಹಿತೆಯ ಪ್ರಕಾರ, ಇಂತಹ ಅಪರಾಧಗಳನ್ನು ಮಾಡಿದಲ್ಲಿ ಕನಿಷ್ಠ ಐದು ವರ್ಷಗಳ ನಿಷೇಧ ಮತ್ತು ಗರಿಷ್ಠ ಜೀವಿತಾವಧಿಯ ನಿಷೇಧ ಹೇರಬಹುದಾಗಿದೆ.
ಆಟಗಾರರನ್ನು ಸಂಪರ್ಕಿಸಿದ್ದು ಹೇಗೆ?
ಮಾಲೀಕ್ ಭಮ್ರಾ ಅವರ ಆದೇಶದಂತೆ ಸೋನು ವಾಸನ್ ಭವಿನ್ ಠಕ್ಕರ್ ಅವರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಸಂಪರ್ಕಿಸಿದ್ದರು. ಈ ವೇಳೆ ಸೋನು ಆಟಗಾರರಿಗೆ ಹಣ ಹಾಗೂ ಇತರೆ ಆಮೀಷಗಳನ್ನು ಒಡ್ಡಿದ್ದರು ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಭವಿನ್ ಠಕ್ಕರ್ ಅವರಿಗೆ ತಮ್ಮ ನಿಲುವನ್ನು ತಿಳಿಸಿದರೆ ಮಾಲೀಕರಿಗೆ ಅದನ್ನು ತಲುಪಿಸುವುದಾಗಿ ಸೋನು ತಿಳಿಸಿದ್ದರು. ಇದೇ ವೇಳೆ ಧವಳ್ ಅವರನ್ನು ಸಹ ಸಂಪರ್ಕಿಸಿದ ಬಗ್ಗೆ ತಿಳಿದು ಬಂದಿದೆ.
ಮುಂಬೈ ಟಿ20 ಲೀಗ್ ಆರಂಭ
ಐಪಿಎಲ್ ಮುಗಿಯುತ್ತಿದ್ದಂತೆ ಮುಂಬೈ ಟಿ20 ಲೀಗ್‌ನ ಮೂರನೇ ಆವೃತ್ತಿ ಆರಂಭವಾಗಲಿದೆ. 2018 ಹಾಗೂ 2019ರಲ್ಲಿ ನಡೆದಿದ್ದ ಟೂರ್ನಿ ಕೋವಿಡ್ ಕಾರಣಕ್ಕಾಗಿ ನಿಂತಿತ್ತು. ಈಗ ಈ ಟೂರ್ನಿಯನ್ನು ಮತ್ತೆ ಆಡಿಸಲಾಗುತ್ತಿದೆ. ಈ ಬಾರಿಯ 8 ಟೀಮ್‌ಗಳು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಎಂಸಿಎ ಮುಖ್ಯಸ್ಥ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications