ಪಾಕಿಸ್ತಾನದ ವಿವಾದಾತ್ಮಕ ಅಂಪೈರ್ ಅಸದ್ ಗೆ ನಿಷೇಧ
ಮುಂಬೈ, ಫೆ. 12: ಪಾಕಿಸ್ತಾನದ ವಿವಾದಾತ್ಮಕ ಅಂಪೈರ್ ಅಸದ್ ರೌಫ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡು ಬಂದಿದೆ. ಹೀಗಾಗಿ ಅವರಿಗೆ 5 ವರ್ಷಗಳ ನಿಷೇಧ ಹೇರಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.
ರೌಫ್ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಅಂಪೈರ್ ಕಾರ್ಯನಿರ್ವಹಿಸುತ್ತಿದ್ದರು. ಭ್ರಷ್ಟಾಚಾರದಲ್ಲಿ ತೊಡಗಿರುವುದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪಿಸಿಬಿ ಅಧಿಕಾರಿಗಳು ಈ ಹಿಂದೆ ಪ್ರತಿಕ್ರಿಯಿಸಿದ್ದರು.
ದೆಹಲಿ ಪೊಲೀಸರೂ ಕೂಡ ಐಪಿಎಲ್ 6 ರ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಂಪೈರುಗಳ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ದೂರವಾಣಿ ಸಂಭಾಷಣೆಯೊಂದು ಈ ಅನುಮಾನಕ್ಕೆ ಕಾರಣವಾಗಿದೆ.

ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಲವೆನ್ ನಡುವಿನ ಮೇ 9ರ ಪಂದ್ಯ ಮುಗಿದ ನಂತರ ಶ್ರೀಶಾಂತ್ ಬುಕ್ಕಿಯೊಬ್ಬನೊಂದಿಗೆ ನಡೆಸಿದ ಟೆಲಿಫೋನ್ ಸಂಭಾಷಣೆ ರೌಫ್ ಅವರ ಮೇಲೆ ಅನುಮಾನಪಡುವಂತೆ ಮಾಡಿದೆ. ಆದರೆ, ಸ್ಪಾಟ್ ಫಿಕ್ಸಿಂಗ್ ನಲ್ಲಿ ಅಂಪೈರ್ ಗಳು ಶಾಮೀಲಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ಖಾತ್ರಿಯಾಗಿ ಹೇಳಿಲ್ಲ, ಕೇವಲ ಶಂಕೆ ವ್ಯಕ್ತಪಡಿಸಿದ್ದರು.
ಈಗ ಅಸದ್ ರೌಫ್ ಅವರು ಐದು ವರ್ಷಗಳ ಕಾಲ ಅಂಪೈರಿಂಗ್, ಆಟವಾಡುವುದು, ಕ್ರಿಕೆಟ್ ಪ್ರತಿನಿಧಿಯಾಗಿ ಪಾಲ್ಗೊಳ್ಳುವಂತಿಲ್ಲ. ಯಾವುದೇ ಸಮಿತಿಯ ಸದಸ್ಯರಾಗಿ ಕಾಣಿಸಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: BCCI bans Pakistan umpire Asad Rauf
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications