IPL 2025: ಭಾರತ-ಪಾಕ್ ವಾರ್: ಐಪಿಎಲ್ ರದ್ದು; ಬಿಸಿಸಿಐ ಮಹತ್ವದ ಘೋಷಣೆ
ಇಂಡಿಯನ್ ಪ್ರೀಮಿಯರ್ ಲೀಗ್ ರದ್ದುಗೊಳಿಸಲು ಬಿಸಿಸಿಐ ನಿರ್ಧಾರ ಮಾಡಿದೆ. ಶುಕ್ರವಾರ ನಡೆದ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವೀಗ್ನತೆ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಿದೆ. ಕಾಶ್ಮೀರದ ಪಲಗ್ಹಾಮ್‌ನಲ್ಲಿ ನಡೆದ 26 ಜನರ ನರಮೇಧಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿತ್ತು.
ಭಾರತದ ಜಮ್ಮು ಭಾಗದಲ್ಲಿ ಪಾಕ್ ಅಪ್ರಚದೋಕ ದಾಳಿಯನ್ನು ಮೇ 8 ರಂದು ನಡೆಸಿದ ಪರಿಣಾಮ ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಿತ್ತು. ಈ ಪಂದ್ಯ ರದ್ದಾದ ಬಳಿಕ ಉಳಿದ ಪಂದ್ಯಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ದೇಶದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ, ಈ ವೇಳೆ ಐಪಿಎಲ್ ನಡೆಸುವುದು ಸೂಕ್ತವಲ್ಲ ಎಂದು ಅಧಿಕಾರಿಗಳು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಹಾಗೂ ಐಪಿಎಲ್ ಮಂಡಳಿಯ ಸಭೆಯ ವೇಳೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಮೈಖೇಲ್‌ಗೆ ಮೂಲಗಳು ತಿಳಿಸಿವೆ. ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ನಡೆಸುವುದು ಹಾಗೂ ವಿದೇಶಿ ಆಟಗಾರರನ್ನು ತವರಿಗೆ ಕಳುಹಿಸುವುದು ಬಿಸಿಸಿಐ ಮುಂದಿನ ದೊಡ್ಡ ಸವಾಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ್ ಸೇರಿದಂತೆ ಹಲವು ದೇಶಗಳ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಎರಡನೇ ಬಾರಿ ರದ್ದು
ಭಾರದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ರದ್ದಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಾಗಿತ್ತು. ಈ ಹಿಂದೆ ವಿಶ್ವವನ್ನು ಕೋವಿಡ್-19 ಬಾಧಿಸಿದ್ದಾಗಲೂ ಐಪಿಎಲ್ ಪಂದ್ಯಗಳನ್ನು ರದ್ದು ಗೊಳಿಸಲಾಗಿತ್ತು. ಅಲ್ಲದೆ ಉಳಿದ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗಿತ್ತು. ಅಲ್ಲದೆ ಭಾರತದಲ್ಲಿ ಸಾರ್ವತಿಕ ಚುನಾವಣೆಗಳು ನಡೆದಾಗಲೂ ಭದ್ರತೆ ಒದಗಿಸಲು ಆಗದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದರಿಂದ ಪಂದ್ಯದಗಳನ್ನು ದಕ್ಷಿಣ ಆಫ್ರಿಕಾ ಹಾಗೂ ದುಬೈನಲ್ಲಿ ಆಡಿಸಲಾಗಿತ್ತು. ಆದರೆ ಈ ಬಾರಿ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗನ್ನತೆ ಹೆಚ್ಚಾಗಿದ್ದರಿಂದ ಬಿಸಿಸಿಐ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಇನ್ನೆಷ್ಟು ಪಂದ್ಯಗಳು ಬಾಕಿ ಇತ್ತು?
ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 58ನೇ ಪಂದ್ಯ ಧರ್ಮಶಾಲಾದಲ್ಲಿ ನಡೆದಿತ್ತು. ಈ ಪಂದ್ಯದ ಬಳಿಕ ಇನ್ನು 16 ಪಂದ್ಯಗಳು ನಡೆಯಬೇಕಿದ್ದವು. ಲೀಗ್, ಪ್ಲೇ ಆಫ್, ಕ್ವಾಲಿಫೈಯರ್, ಫೈನಲ್ ಪಂದ್ಯಗಳು ಇನ್ನೇನು ನಡೆಯಬೇಕಿದ್ದವು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧದ ಸ್ಥಿತಿ ನಿರ್ಮಾಣವಾಗಿದ್ದರಿಂದ ಪಂದ್ಯವನ್ನು ಗುರುವಾರ ರದ್ದು ಗೊಳಿಸಲಾಯಿತು. ಇನ್ನು ಉಳಿದ ಪಂದ್ಯಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಬಿಸಿಸಿಐ ಹಾಗೂ ಐಪಿಎಲ್ ಮಂಡಳಿಯ ಸಭೆಯ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಐಪಿಎಲ್‌ನ ಉಳಿದ ಪಂದ್ಯಗಳನ್ನು ಯಾವಾಗ ಆಡಿಸಲಾಗುತ್ತದೆ ಎಂಬ ಬಗ್ಗೆ ಬಿಸಿಸಿಐ ಇನ್ನೇನು ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications