ಬಹು ನಿರೀಕ್ಷಿತ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕೇಂದ್ರ ಗುತ್ತಿಗೆ ಒಪ್ಪಂದ ಘೋಷಣೆಯಾಗಿದೆ. ಒಪ್ಪಂದದ ನವೀಕರಣ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ಪರಿಣಾಮ ಬೀರಿದೆ. ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರಿಗೆ ಹಿಂಬಡ್ತಿ ನೀಡಲಾಗಿದೆ. ಈ ಇಬ್ಬರೂ ಆಟಗಾರರು ಈ ಮೊದಲು ಎ+ ವಿಭಾಗದಲ್ಲಿದ್ದರು. ಆದರೆ ಈ ಸೂಪರ್ ಸ್ಟಾರ್ ಆಟಗಾರರು ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಬಿಸಿಸಿಐ ನೂತನ ಕೇಂದ್ರ ಒಪ್ಪಂದದಲ್ಲಿ ವಿರಾಟ್, ರೋಹಿತ್ ಅವರಿಗೆ ಬಿ ವಿಭಾಗದಲ್ಲಿ ಇರಿಸಲಾಗಿದೆ.
ವಿರಾಟ್ ಹಾಗೂ ರೋಹಿತ್ ಸದ್ಯ ಟೀಮ್ ಇಂಡಿಯಾದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಇದನ್ನು ಮನವರಿಕೆ ಮಾಡಿಕೊಂಡ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಅವರನ್ನು ಎ+ ಕ್ಯಾಟಗಿರಿಯಿಂದ ಕೈ ಬಿಟ್ಟಿದೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ತಂಡದ ಯಾವೊಬ್ಬ ಆಟಗಾರನೂ ಸಹ ಮೂರು ಸ್ವರೂಪಗಳಲ್ಲಿ ಆಡುತ್ತಿಲ್ಲ. ಹಿಗಾಗಿ ಬಿಸಿಸಿಐ ಎ+ ಕ್ಯಾಟಗಿರಿ ತೆಗೆದುಹಾಕಲು ನಿರ್ಧರಿಸಿದೆ.

ಬಿಸಿಸಿಐ ಒಪ್ಪಂದದಲ್ಲಿ ಸದ್ಯ ಅತಿ ದೊಡ್ಡ ಕ್ಯಾಟಗಿರಿ ಎಂದರೆ ಎ. ಈ ವಿಭಾಗದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಹೆಸರು ಸೇರಿದೆ.
ಬಿ ಗುಂಪಿನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಒಟ್ಟು 11 ಆಟಗಾರರು ಸ್ಥಾನ ಪಡೆದಿದ್ದಾರೆ. ಇವರನ್ನು ಬಿಟ್ಟಂತೆ ಕರ್ನಾಟಕದ ಸ್ಟಾರ್ ಆಟಗಾರ ರಾಹುಲ್‌ಗೂ ಸ್ಥಾನ ಲಭಿಸಿದೆ. ಉಳಿದಂತೆ ಬಿ ಕ್ಯಾಟಗಿರಿಯಲ್ಲಿ ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಇದೇ ವಿಭಾಗದಲ್ಲಿದ್ದಾರೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಶ್ರೇಯಾಂಕದ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ, ಅಗ್ರ ಸ್ಥಾನ ಪಡೆದ ಬೌಲರ್ ವರುಣ್ ಚಕ್ರವರ್ತಿ ಸಹ ಇದೇ ಗುಂಪಿನಲ್ಲಿದ್ದಾರೆ. ಉಳಿದಂತೆ ಅಕ್ಷರ್ ಪಟೇಲ್, ಶಿವಂ ದುಬೆ, ರಿಂಕು ಸಿಂಗ್, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಧ್ರುವ ಜುರೆಲ್, ಹರ್ಷಿತ್ ರಾಣಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್ ಮತ್ತು ರುತುರಾಜ್ ಗಾಯಕ್ವಡ್ ಸ್ಥಾನ ಪಡೆದಿದ್ದಾರೆ.
ಬಿಸಿಸಿಐ ನೂತನ ಒಪ್ಪಂದದ ಪ್ರಕಾರ ಆಟಗಾರರು ತಮ್ಮ ಶ್ರೇಣಿಯ ಅನುಸಾರವಾಗಿ ಹಣವನ್ನು ಪಡೆಯಲಿದ್ದಾರೆ. ಗ್ರೇಡ್ A ಆಟಗಾರರಿಗೆ 5 ಕೋಟಿ ರೂ., ಗ್ರೇಡ್ B 3 ಕೋಟಿ ರೂ. ಮತ್ತು ಗ್ರೇಡ್ C 1 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಹಿಂದೆ ಇದ್ದ ಗ್ರೇಡ್ A+ ತೆಗೆಯಲಾಗಿದೆ.

ಪುರಷರಂತೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಒಪ್ಪಂದವನ್ನು ಬಿಸಿಸಿಐ ನವೀಕರಿಸಿದೆ. ನೂತನ ಪಟ್ಟಿಯ ಪ್ರಕಾರ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿ ಶ್ರೇಣಿಯಲ್ಲಿ ರೇಣುಕಾ ಸಿಂಗ್, ಶಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ ಸ್ಥಾನ ಪಡೆದಿದ್ದಾರೆ.
ರಾಧಾ ಯಾದವ್, ಅಮನ್ಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ ಹಸಬ್ನಿಸ್