BCCI Central Contract 34 ಆಟಗಾರರಿಗೆ ಸ್ಥಾನ, ಇಬ್ಬರು ಕನ್ನಡಿಗರಿಗೆ ಅವಕಾಶ: ಯಾರಿಗೆ ಎಷ್ಟು ಹಣ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಸ್ತ ಸಾಲಿನ ಕೇಂದ್ರ ಗುತ್ತಿಗೆ ಒಪ್ಪಂದವನ್ನು ಬಿಡುಗಡೆ ಮಾಡಿದೆ. ನೂತನವಾಗಿ ಬಿಡುಗಡೆ ಮಾಡಿದ ಒಪ್ಪಂದದಲ್ಲಿ 34 ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಒಪ್ಪಂದದ ಅವಧಿ ಅಕ್ಟೋಬರ್ 1 2024ರಿಂದ ಸೆಪ್ಟಂಬರ್ 30 2025ರ ವರೆಗೆ ಇರಲಿದೆ. ಎಂದಿನಂತೆ ಈ ಗುತ್ತಿಗೆ ಒಪ್ಪಂದವನ್ನು ನಾಲ್ಕು ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ. ಇನ್ನು ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಆಟಗಾರರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಸಿಸಿಐ ಪ್ರಕಟಿತ 34 ಆಟಗಾರರಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕರ್ನಾಟಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಗ್ರೇಡ್ "ಎ"ನಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎದುರಾಳಿಗಳನ್ನು ಕಾಡುತ್ತಿರುವ ಪ್ರಸಿದ್ಧ ಕೃಷ್ಣ ಸಹ "ಸಿ" ಗ್ರೇಡ್ ಪಡೆದುಕೊಂಡಿದ್ದಾರೆ. ಉಳಿದಂತೆ "ಎ ಪ್ಲಸ್" ಗ್ರೇಡ್‌ನಲ್ಲಿ ನಾಲ್ವರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ ಈ ಸಹ ಈ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಗ್ರೇಡ್‌ನಲ್ಲಿ ಆಡುವ ಆಟಗಾರರು ವಾರ್ಷಿಕ್ 7 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

ಎ ಗ್ರೇಡ್ ಆಟಗಾರರಿಗೆ ಸಂಭಾವನೆ ಎಷ್ಟು?
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ಈ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು, ಬಡ್ತಿ ಸಹ ಸಿಕ್ಕಿದೆ. ಗ್ರೇಡ್ ಎ ಕ್ಯಾಟಗಿರಿಯಲ್ಲಿ ಆರು ಜನ ಆಟಗಾರರಿಗೆ ಅವಕಾಸ ನೀಡಲಾಗಿದೆ. ಈ ಆಟಗಾರರು ವಾರ್ಷಿಕ 5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್, ಶುಭ್‌ಮನ್ ಗಿಲ್, ವಿಕೆಟ್ ಕೀಪರ್ ರಿಷಭ ಪಂತ್, ವೇಗಿ ಮೊಹಮ್ಮದ್ ಶಮಿ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿ ಗ್ರೇಡ್ ಕ್ಯಾಟಗಿರಿಯಲ್ಲಿ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆಟಗಾರರು ವಾರ್ಷಿಕ 3 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಸೇರಿಕೊಂಡಿದ್ದಾರೆ.

ಸಿ ಗ್ರೇಡ್ ಕ್ಯಾಟಗಿರಿ
ಬಿಸಿಸಿಐ ಹೊರಡಿಸಿದ ನೂತನ ಕ್ರೇಂದ್ರ ಗುತ್ತಿಗೆ ಒಪ್ಪಂದದ ಸಿ ಗ್ರೇಡ್‌ನಲ್ಲಿ ಹಲವು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆಟಗಾರರು ವಾರ್ಷಿಕ 1 ಕೋಟಿ ರೂ. ಪಡೆಯಲಿದ್ದಾರೆ. ಈ ಕ್ಯಾಟಗಿರಿಯಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯಿ, ವಾಶಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣಾ, ರಜತ್ ಪಟಿದಾರ್, ಧ್ರುವ್ ಜುರೇಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications