Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BCCI ಕೇಂದ್ರ ಒಪ್ಪಂದ ಘೋಷಣೆ: ಪಟ್ಟಿಯಲ್ಲಿ ಕನ್ನಡತಿಗೂ ಸ್ಥಾನ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಸಕ್ತ ಸಾಲಿನ (2024-25) ಋತುವಿಗಾಗಿ ಕೇಂದ್ರ ಒಪ್ಪಂದವನ್ನು ಘೋಷಿಸಿದೆ. ಈ ವೇಳೆ ಬಿಸಿಸಿಐ 16 ಮಹಿಳಾ ಆಟಗಾರ್ತಿಯರನ್ನು ಕೇಂದ್ರ ಒಪ್ಪಂದದಲ್ಲಿ ಸೇರಿಸಿದೆ. 16 ಆಟಗಾರ್ತಿಯರನ್ನು 3 ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಕೇವಲ ಮೂರು ಆಟಗಾರ್ತಿಯರಿಗೆ ಮಾತ್ರ ಗ್ರೇಡ್ ಎ ನಲ್ಲಿ ಸ್ಥಾನ ನೀಡಿದೆ. ಗ್ರೇಡ್‌ ಎ ನಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್‌, ಉಪನಾಯಕಿ ಸ್ಮೃತಿ ಮಂಧನಾ, ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರು ಸೇರಿದ್ದಾರೆ.

ಕಳೆದ ಬಾರಿಯ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಒಟ್ಟು 17 ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿತ್ತು. ಈ ಬಾರಿ ಈ ಸಂಖ್ಯೆಯಲ್ಲಿ ಒಂದು ನಂಬರ್ ಕಡಿಮೆ ಆಗಿದೆ. ಕಳೆದ ಬಾರಿ ಹರ್ಮನ್ ಪ್ರೀತ್ ಕೌರ್‌, ಸ್ಮೃತಿ ಮಂಧನಾ, ದೀಪ್ತಿ ಶರ್ಮಾ ಗ್ರೇಡ್‌ ಎ ನಲ್ಲಿ ಸ್ಥಾನ ಪಡೆದಿದ್ದರು. ಈ ಮೂವರು ಆಟಗಾರರು ಈಗಲೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

BCCI Central Contracts 2024-25 Harmanpreet Smriti Deepti in Grade A Shreyanka Debuts

ಗ್ರೇಡ್‌ "ಬಿ"ಯಲ್ಲಿ ವೇಗದ ಬೌಲರ್‌ಗಳಾದ ರೇಣುಕಾ ಸಿಂಗ್ ಠಾಕೂರ್‌, ಭರವಸೆಯ ಬ್ಯಾಟರ್‌ ಜೇಮಿಮಾ ರೋಡ್ರಿಗ್ಸ್‌, ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌, ಬ್ಯಾಟರ್‌ ಶೆಫಾಲಿ ವರ್ಮಾ ಅವರನ್ನು ಸೇರಿಸಲಾಗಿದೆ. "ಸಿ" ಗ್ರೇಟ್‌ನಲ್ಲಿ ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ಅಮಂಜೋತ್ ಕೌರ್, ಉಮಾ ಛೆಟ್ರಿ, ಸ್ನೇಹ್ ರಾಣಾ, ಪೂಜಾ ವಸ್ತ್ರಕರ್ ಗ್ರೇಡ್-ಸಿ ನಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೇಯಾಂಕ್‌ಗೆ ಸ್ಥಾನ

ಕೇಂದ್ರ ಒಪ್ಪಂದದಲ್ಲಿ ಮೊದಲ ಬಾರಿಗೆ ಶ್ರೇಯಾಂಕಾ ಪಾಟಿಲ್‌ ಸ್ಥಾನ ಪಡೆದಿದ್ದಾರೆ. ಶ್ರೇಯಾಂಕಾ ಪಾಟಿಲ್ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಪ್ಲೇಯರ್‌. ಇವರು ಈಗಾಗಲೇ ಭಾರತದ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದು 5 ವಿಕೆಟ್‌ ಹಾಗೂ 16 ಟಿ20 ಪಂದ್ಯಗಳನ್ನು ಆಡಿದ್ದು ಈ ವೇಳೆ 20 ವಿಕೆಟ್‌ ಕಬಳಿಸಿದ್ದಾರೆ.

ಯಾವ ಗ್ರೇಡ್‌ಗೆ ಎಷ್ಟು ಹಣ?

"ಎ" ಗ್ರೇಡ್‌ನಲ್ಲಿ ಸ್ಥಾನ ಪಡೆದ ಆಟಗಾರ್ತಿಯರಿಗೆ ಪ್ರತಿ ವರ್ಷ 50 ಲಕ್ಷ ರೂ. ಲಭಿಸಲಿದೆ. ಗ್ರೇಡ್ ಬಿ ನಲ್ಲಿ ಸ್ಥಾನ ಪಡೆದ ಪ್ಲೇಯರ್‌ಗಳಿಗೆ 30 ಲಕ್ಷ ಹಾಗೂ ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದ ಆಟಗಾರ್ತಿಯರು 10 ಲಕ್ಷ ಪಡೆಯಲಿದ್ದಾರೆ.

BCCI Central Contracts 2024-25 Harmanpreet Smriti Deepti in Grade A Shreyanka Debuts

ಕಾಣದ ದೊಡ್ಡ ಹೆಸರುಗಳು

ಬಿಸಿಸಿಐ ಬಿಡುಗಡೆ ಮಾಡಿರುವ ಲೀಸ್ಟ್‌ನಲ್ಲಿ ಹಲವು ಅನುಭವಿ ಹಾಗೂ ಸ್ಟಾರ್ ಆಟಗಾರ್ತಿಯರ ಹೆಸರುಗಳು ಕಾಣೆ ಆಗಿವೆ. ಈ ಹಿಂದೆ ಸ್ಥಾನ ಪಡೆದಿದ್ದ ಹರ್ಲೀನ್ ಡಿಯೋಲ್ ಮತ್ತು ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಪಟ್ಟಿಯಲ್ಲಿ ಸ್ಥಾಣ ಪಡೆಯುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಸಬ್ಭಿನೇನಿ ಮೇಘನಾ, ವೇಗಿ ಮೇಘನಾ ಸಿಂಗ್ ಮತ್ತು ಎಡಗೈ ವೇಗಿ ಅಂಜಲಿ ಸರ್ವಾನಿ ಕೂಡ ಕೇಂದ್ರ ಒಪ್ಪಂದಗಳ ಹೊಸ ಪಟ್ಟಿಯಿಂದ ಹೊರ ನಡೆದಿದ್ದಾರೆ.

Story first published: Monday, March 24, 2025, 14:37 [IST]
Other articles published on Mar 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+