BCCI Central Contracts 2025: ಐಪಿಎಲ್ ನಡುವೆ ಶ್ರೇಯಸ್, ಇಶಾನ್‌ಗೆ ಖುಷಿ ಸುದ್ದಿ
ಬಹು ನಿರೀಕ್ಷಿತ ಬಿಸಿಸಿಐ (BCCI) ಕೇಂದ್ರ ಗುತ್ತಿಗೆ ಒಪ್ಪಂದ ಕೊನೆಗೂ ಬಿಡುಗಡೆ ಆಗಿದೆ. ಸೋಮವಾರ (ಏ.21)ದಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಈ ಸಾಲಿನ ಕೇಂದ್ರ ಗುತ್ತಿಗೆ ಒಪ್ಪಂದವನ್ನು ಘೋಷಿಸಿದೆ. ಈ ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 34 ಆಟಗಾರರಿಗೆ ಅವಕಾಶ ಪಡೆದಿದ್ದಾರೆ. ಆದರೆ ಈ ಬಾರಿ ಎಲ್ಲರ ಚಿತ್ತ ಕದ್ದ ಆ ಎರಡು ಹೆಸರುಗಳು ಕೇಂದ್ರ ಗುತ್ತಿಗೆ ಒಪ್ಪಂದದ ಅಡಿಯಲ್ಲಿ ಇವೆಯೋ ಇಲ್ಲವೋ ಎಂಬ ಚರ್ಚೆಗಳೇ ಬಹುವಾಗಿ ನಡೆದಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಬಿಸಿಸಿಐ ಹೊರಡಿಸಿರುವ ಕೇಂದ್ರ ಒಪ್ಪಂದ ಗುತ್ತಿಗೆ ನವೀಕರಣ ಸಮಾಧಾನ ತರಿಸಿದೆ. ಕಳೆದ ವರ್ಷದ ಒಪ್ಪಂದದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಇಶಾನ್ ಕಿಶನ್ (Ishan Kishan) ಮತ್ತೆ ಬಿಸಿಸಿಐ ಒಪ್ಪಂದದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಈ ಬಾರಿ ಬಿ ಗ್ರೇಡ್‌ನಲ್ಲಿ ಕಾಣಿಸಿಕೊಂಡೆ, ಸಿ ಗ್ರೇಸ್‌ನಲ್ಲಿ ಇಶಾನ್ ಕಿಶನ್ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ದೇಶೀಯ ಕ್ರಿಕೆಟ್‌ಗೆ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಹೆಚ್ಚಿನ ಪ್ರಾಮುಖ್ಯತೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಗುತ್ತಿಗೆ ಒಪ್ಪಂದದಿಂದ ಕೈ ಬಿಟ್ಟಿತ್ತು. ಈ ಇಬ್ಬರೂ ಆಟಗಾರರು ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಿಂದ ಹೊರ ನಡೆದ ನಂತರ ದೇಶೀಯ ಕ್ರಿಕೆಟ್‌ನತ್ತ ತಮ್ಮ ಚಿತ್ತವನ್ನು ಹರಿಸಿದರು. ಅಲ್ಲದೆ ದೇಶೀಯ ಟೂರ್ನಿಗಳಲ್ಲಿ ತಮ್ಮ ತಮ್ಮ ತಂಡದ ಪರ ಸ್ಥಿರ ಪ್ರದರ್ಶನ ನೀಡಿ ಮಿಂಚಿದರು. ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್, ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ಪಡೆದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ಶ್ರೇಯಸ್ ತಮ್ಮದೇ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಮಿಂಚು
ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಉತ್ತಮ ಪ್ರದರ್ಶನ ನೀಡಿದರು. ಅದರಲ್ಲೂ ತಂಡ ಒತ್ತಡದ ಸನ್ನಿವೇಶದಲ್ಲಿ ಇದ್ದಾಗ ಒತ್ತಡವನ್ನು ಮೆಟ್ಟಿನಿಂತ ಇವರು ಸ್ಥಿರ ಪ್ರದರ್ಶನ ನೀಡಿದರು. ಇವರು ಈ ಟೂರ್ನಿಯಲ್ಲಿ 243 ರನ್ ಸಿಡಿಸಿ ಅಬ್ಬರಿಸಿದರು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ 48 ಎಸೆತಗಳಲ್ಲಿ 62 ರನ್ ಬಾರಿಸಿ ಮಿಂಚಿದರು. ಸದ್ಯ ಶ್ರೇಯಸ್ ಐಪಿಎಲ್ (IPL 2025)ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಇವರ ಕೊಡುಗೆ ಅಪಾರ.
ಇಶಾನ್ ಅಬ್ಬರ
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಐಪಿಎಲ್‌ನಲ್ಲಿ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. ಇವರು ತಾವಾಡಿದ ಮೊದಲ ಪಂದ್ತದಲ್ಲಿ ಶತಕ ಬಾರಿಸಿದರು. ಇವರ ಈ ಅಮೋಘ ಇನಿಂಗ್ಸ್ ಸನ್‌ರೈಸರ್ಸ್ ಗೆಲುವಿಗೆ ಕಾರಣವಾಯಿತು. ಇಶಾನ್ 47 ಎಸೆತಗಳಲ್ಲಿ ಅಜೇಯ 106 ರನ್ ಬಾರಿಸಿ ಅಬ್ಬರಿಸಿದ್ದರು. ಈಗ ಇವರ ಮುಖದಲ್ಲೂ ಮಂದಹಾಸ ಮೂಡಿಸುವ ಸುದ್ದಿ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications