ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೂ ತಟ್ಟಿದ '#ಮೀಟೂ' ಅಭಿಯಾನದ ಬಿಸಿ

ನವದೆಹಲಿ, ಅಕ್ಟೋಬರ್ 13: ಇತ್ತೀಚೆಗೆ ತೀರಾ ಪ್ರಚಲಿತದಲ್ಲಿರುವ ಹ್ಯಾಷ್ ಟ್ಯಾಗ್ #metoo. ಬಾಲಿವುಡ್ ನಲ್ಲಿ ಶುರುವಾದ ಈ ಲೈಂಗಿಕ ಕಿರುಕುಳ ವಿರೋಧಿ ಅಭಿಯಾನ ಈಗ ಕ್ರಿಕೆಟ್ ವಲಯಕ್ಕೂ ಬಿಸಿ ಮುಟ್ಟಿಸುತ್ತಿದೆ. ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರ ಮೇಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
2016ರ ಏಪ್ರಿಲ್ ನಿಂದ ಬಿಸಿಸಿಐ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಜೋಹ್ರಿ ವಿರುದ್ಧ ಲೇಖಕಿ ಹರ್ನಿಧ್ ಕೌರ್ ಅವರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಮಹಿಳೆಯೊಬ್ಬಳು ಜೋಹ್ರಿ ವಿರುದ್ಧ ಆರೋಪಿಸಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿರುವ ಕೌರ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಈ ಮೊದಲು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಅನಂತರ ಶ್ರೀಲಂಕಾ ಮತ್ತೊಬ್ಬ ಆಟಗಾರ, ವೇಗಿ ಲಸಿತ್ ಮಾಲಿಂಗ್ ಅವರ ಮೇಲೂ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ #ಮೀಟೂ ಹೀಟ್ ಬಿಸಿಸಿಯನ್ನಾವರಿಸಿದೆ.
ಟ್ವೀಟ್ ನಲ್ಲಿ..
ಹರ್ನಿಧ್ ಕೌರ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ನಾಲ್ಕೈದು ಪುಟಗಳ ಬರವಣಿಗೆಯಿರುವ ಮೊಬೈಲ್ ಸ್ಕ್ರೀನ್ ಶಾಟ್ ಗಳಿವೆ. ಇದರಲ್ಲಿ ಸಂತ್ರಸ್ತೆಯೊಬ್ಬಳು ತನ್ನ ಮೇಲಾಗಿರುವ ಲೈಂಗಿಕ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಬರವಣಿಗೆಯೊಳಗೆ
ಟೈಪಿಸಲ್ಪಟ್ಟಿರುವ ಆ ಬರಹದ ಸ್ಕ್ರೀನ್ ಶಾಟ್ ಗಳಲ್ಲಿ ರಾಹುಲ್ ಜೋಹ್ರಿ ತನ್ನ ಕಾಮತೃಷೆ ತೀರಿಸಿಕೊಂಡ ಬಗೆಯನ್ನು ಅನಾಮಧೇಯ ಸಂತ್ರಸ್ತೆ (ಮಹಿಳಾ ಪತ್ರಕರ್ತೆ) ವಿವರಿಸಿದ್ದಾರೆ. ಹೆಂಡತಿ ಮನೆಯಲ್ಲಿಲ್ಲದಾಗ ಸಂದರ್ಶನಕ್ಕೆಂದು ತನ್ನನ್ನು ಆಹ್ವಾನಿಸಿದ ಜೋಹ್ರಿ ತನ್ನ ಮೇಲೆರಗಿದ್ದನ್ನು ಆಕೆ ವಿವರಿಸಿದ್ದಾರೆ.
ಲಸಿತ್ ಮಾಲಿಂಗ
ಈ ಮೊದಲು, ಶ್ರೀಲಂಕಾ ತಂಡದ ಏಕದಿನ ಕ್ರಿಕೆಟ್ ಮತ್ತು ಟಿ20ಯ ಮಾಜಿ ನಾಯಕ, ವೇಗಿ ಲಸಿತ್ ಮಾಲಿಂಗ ಅವರು ಮಹಿಳೆಯೊಬ್ಬರ ಮೇಲೆ ಮುಂಬೈಯ ಹೋಟೆಲ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಆರೋಪಿಸಿದ್ದರು.
ರೊನಾಲ್ಡೋ ಮೇಲೂ ಆರೋಪ
ಪೋರ್ಚುಗಲ್ ಸ್ಟಾರ್ ಕ್ರಿಸ್ಚಿಯಾನೊ ರೋನಾಲ್ಡೋ ಕೂಡ ಇಂಥದ್ದೇ ಆರೋಪದಡಿಯಲ್ಲಿದ್ದಾರೆ. ರೊನಾಲ್ಡೋದ್ದು #metoo ಕೇಸ್ ಅಲ್ಲ, ಆದ್ರೆ ಅವರದ್ದೂ ಒಂಥರಾ ಇಂಧದ್ದೇ ಕತೆ. ಅಮೆರಿಕಾದ ನೆವಡಾದ ಕ್ಯಾಥರಿನ್ ಮಯೋರ್ಗಾ ಎನ್ನುವ 34ರ ಹರೆಯದ ಮಹಿಳೆ, 2009ರಲ್ಲಿ ಅಮೆರಿಕಾದ ಲಾಸ್ ವೇಗಸ್ ನ ಹೊಟೇಲ್ ರೂಮೊಂದರಲ್ಲಿ ರೊನಾಲ್ಡೋ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದರು. ಜರ್ಮನಿಯ ಮ್ಯಾಗಜಿನ್ 'ಡೆರ್ ಸ್ಪೀಗೆಲ್' ಈ ಬಗ್ಗೆ ವರದಿ ಪ್ರಕಟಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications