ಅತ್ಯಾಚಾರ ಆರೋಪ: ಬಿಸಿಸಿಐ ಸಿಇಒ ಆಗಿ ಮುಂದುವರೆಯಲಿರುವ ಜೋಹ್ರಿ

ನವದೆಹಲಿ, ನವೆಂಬರ್ 21: ರಾಹುಲ್ ಜೋಹ್ರಿ ಅವರು ಬಿಸಿಸಿಐ ಸಿಇಒ ಸ್ಥಾನದಲ್ಲೇ ಮುಂದುವರೆಯುವ ಸಿದ್ಧತೆಯಲ್ಲಿದ್ದಾರೆ. ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಆದರೆ ಜೋಹ್ರಿಯನ್ನು ನಿರಪರಾಧಿ ಎಂದು ಪರಿಗಣಿಸಿ ಬಿಸಿಸಿಐ ಸಿಇಒ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡಲಾಗಿದೆ.
ಜೋಹ್ರಿ ಮೇಲೆ ಮಾಡಲಾಗಿರುವ ಆರೋಪವನ್ನು ನ್ಯಾಯಾಧೀಶ ರಾಕೇಶ್ ಶರ್ಮಾ ಅವರು 'ಬುಡವಿಲ್ಲದ, ಸುಳ್ಳು' ಆರೋಪವೆಂದು ಕರೆದಿದ್ದರೆ, ಬರ್ಖಾ ಸಿಂಗ್ 'ಪ್ರೇರಿತ ಮತ್ತು ಯೋಜಿತ ಆರೋಪ' ಎಂದು ಹೇಳಿದ್ದಾರೆ. ಇಬ್ಬರೂ ಕೂಡ ಜೋಹ್ರಿ ತನ್ನ ಸ್ಥಾನದಲ್ಲಿ ಮುಂದುವರೆಯುವಂತೆ ಶಿಫಾರಸು ಮಾಡಿದ್ದಾರೆ.
'ಡಯಾನಾ ಎಡ್ಲ್ಜಿ ಅವರು ಈ ಆರೋಪವನ್ನು ಒಪ್ಪಿಲ್ಲ. ಹೀಗಾಗಿ ರಾಹುಲ್ ಜೋಹ್ರಿ ಅವರು ತಮ್ಮ ಬಿಸಿಸಿಐ ಸಿಇಒ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ' ಎಂದು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ಟ್ವಿಟರ್ ನಲ್ಲಿ ಅನಾಮಧೇಯ ಮಹಿಳೆಯೊಬ್ಬಳು ಜೋಹ್ರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿನಂತರ ಪ್ರಕರಣ ಸದ್ದು ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications