ದೀರ್ಘ ಸಮಯದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ರಾಜೀನಾಮೆ ಸ್ವೀಕೃತ

ನವದೆಹಲಿ, ಜುಲೈ 9: ಬಹಳ ಸಮಯದಿಂದ ಬಾಕಿ ಉಳಿಸಲಾಗಿದ್ದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಅವರ ರಾಜೀನಾಮೆಯನ್ನು ಬಿಸಿಸಿಐಯು ಗುರುವಾರ (ಜುಲೈ 9) ಸ್ವೀಕರಿಸಿದೆ.
ಆದರೆ ಮುಂದಿನ ಬೆಳವಣಿಗೆಯ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ಸಂಗತಿಗಳ ಬಗ್ಗೆ ಗೊತ್ತಿರುವ ಅಧಿಕಾರಿಯೊಬ್ಬರು ಪಿಟಿಐ ಜೊತೆ ಮಾತನಾಡಿ, ಕಳೆದ ಡಿಸೆಂಬರ್ 27ರಂದು ಕಳುಹಿಸಲಾಗಿದ್ದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಯವರ ರಾಜೀನಾಮೆ ಸ್ವೀಕರಿಸಲು ನಿರ್ಧರಿಸಿಲಾಗಿದೆ ಎಂದಿದ್ದಾರೆ.
'ರಾಹುಲ್ ಜೋಹ್ರಿಯವರ ರಾಜೀನಾಮೆ ಸ್ವೀಕಾರಗೊಂಡಿದೆ. ಈ ಮೊದಲು ಜೋಹ್ರಿವರ ರಾಜೀನಾಮೆ ನಿರ್ಧಾರವನ್ನು ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ರಾಜೀನಾಮೆ ಸ್ವೀಕೃತವಾಗಿದೆ,' ಎಂದು ಹೆಸರು ತಿಳಿಸಲಿಚ್ಛಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿರುವ ಬಿಸಿಸಿಐಯನ್ನು ಮುನ್ನಡೆಸಲು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ ಜೋಹ್ರಿ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. 2016ರಲ್ಲಿ ಜೋಹ್ರಿ ಬಿಸಿಸಿಐ ಸೇರಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications