For Quick Alerts
ALLOW NOTIFICATIONS  
For Daily Alerts
 

Ind Vs Eng: ಸೆಮಿಫೈನಲ್‌ನಲ್ಲಿ ಸೋಲು: ಮುಖ್ಯ ಆಯ್ಕೆದಾರರಿಗೆ ಗೇಟ್‌ಪಾಸ್ ಕೊಡಲು ನಿರ್ಧಾರ

BCCI Chief Selector Chetan Sharma May Lose His Job After India Lost Against England In T20 World Cup Semi Final

ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸುವ ಮೂಲಕ ಟಿ20 ವಿಶ್ವಕಪ್‌ನಿಂದಲೇ ಹೊರಬಿದ್ದಿದೆ. ಈ ಸೋಲಿನಿಂದ ಟೀಂ ಇಂಡಿಯಾದಲ್ಲಿ ಮಾತ್ರವಲ್ಲ ಆಯ್ಕೆ ಸಮಿತಿಯಲ್ಲಿ ಕೂಡ ಹಲವು ಬದಲಾವಣೆಯಾಗಲಿದೆ.

ಬಿಸಿಸಿಐನ ಮುಖ್ಯ ಆಯ್ಕೆದಾರ ಚೇತನ್ ಶರ್ಮಾ ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಬಿಸಿಸಿಐ ಹೊಸ ಕ್ರಿಕೆಟ್ ಸಲಹಾ ಸಮಿತಿಯನ್ನು ನೇಮಿಸಲಿದ್ದು, ಚೇತನ್ ಶರ್ಮಾ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲಿದೆ. ಟಿ20 ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ಹೊಸ ಆಯ್ಕೆದಾರರನ್ನು ನೇಮಕ ಮಾಡಲಿದೆ.

"ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಲವು ಆಟಗಾರರು ಗಾಯಗಳಿಗೆ ತುತ್ತಾದ ಕಾರಣ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ದೂಷಿಸುವಂತಿಲ್ಲ. ಆದರೆ, ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು, ಅವರು ಈಗ ಉತ್ತರ ನೀಡಬೇಕಾಗುತ್ತದೆ. ಹೊಸ ಸಿಎಸಿ ಬಂದರೆ ಬದಲಾವಣೆಗಳಾಗಲಿವೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅಂತಹ ಆಟಗಾರರನ್ನು ಆಯ್ಕೆಗೆ ಪರಿಗಣಿಸದಿರುವುದು. ಹರ್ಷಲ್ ಪಟೇಲ್ ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರೂ, ಅವರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಟಿ20 ತಂಡಕ್ಕೆ ಪ್ರಾಥಮಿಕ ಆಯ್ಕೆ ಆಗಿರಲಿಲ್ಲ, ಆದರೆ ಅವರನ್ನು ಕೊನೆ ಕ್ಷಣದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಯಿತು.

BCCI Chief Selector Chetan Sharma May Lose His Job After India Lost Against England In T20 World Cup Semi Final

ಟಿ20 ಕ್ರಿಕೆಟ್‌ನಲ್ಲಿ ಆಡಿದ ಅನುಭವಿಯೇ ಆಯ್ಕೆ ಸಮಿತಿಯಲ್ಲಿ ಇಲ್ಲ

ತಂಡದ ಪ್ರಮುಖ ಆಟಗಾರರು ಗಾಯಗೊಂಡಾಗ ಅವರಿಗೆ ಬ್ಯಾಕಪ್ ಆಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಬೇಕು. ಆದರೆ, ಶಮಿ ಮತ್ತು ಉಮೇಶ್ ಯಾದವ್‌ರಂತಹ ಆಯ್ಕೆ ಹತಾಶ ಕ್ರಮಗಳು ಎಂದು ಹೇಳಲಾಗಿದೆ. ಪದೇ ಪದೇ ವೈಫಲ್ಯ ಕಂಡರೂ ಕೆಎಲ್ ರಾಹುಲ್ ಅವಕಾಶ ಪಡೆದರು, ಮಾತ್ರವಲ್ಲದೆ ಅವರಿಗೆ ಉಪನಾಯಕನ ಸ್ಥಾನ ನೀಡಲಾಯಿತು. ಅವರು ಆಕ್ರಮಣಕಾರಿ ಆಟ ಆಡಲು ಸಂಪೂರ್ಣ ವಿಫಲರಾದರು.

ಆವೇಶ್ ಖಾನ್, ಉಮ್ರಾನ್ ಖಾನ್‌ರಂತಹ ವೇಗದ ಬೌಲರ್ ಗಳನ್ನು ಆಯ್ಕೆಗೆ ಪರಿಗಣಿಸಲಿಲ್ಲ. ಒಂದೆರಡು ಪಂದ್ಯಗಳ ಬಳಿಕ ಅವರಿಗೆ ಅವಕಾಶ ನೀಡಲಿಲ್ಲ, ಯುವ ಬೌಲರ್ ಗಳಿಗೆ ಅವಕಾಶ ಕೊಡುವಲ್ಲಿ ಆಯ್ಕೆ ಸಮಿತಿ ಅಸಡ್ಡೆ ಮಾಡಲಾಯಿತು. ಭಾರತ ತಂಡದ ವೈಫಲ್ಯಕ್ಕೆ ಈಗ ಬಿಸಿಸಿಐ ಹೊಣೆ ಹೊರಬೇಕಿದೆ.

ಏಷ್ಯಾ ಕಪ್ ಮತ್ತು ವಿಶ್ವಕಪ್‌ ಎರಡೂ ಪಂದ್ಯಾವಳಿಗೆ ಆಯ್ಕೆ ಸಮಿತಿಯು ನಾಲ್ಕು ಸದಸ್ಯರೊಂದಿಗೆ ಕಾರ್ಯನಿರ್ವಹಿಸಿತು. ಒಂದು ವರ್ಷದಿಂದ ಹುದ್ದೆ ಖಾಲಿ ಇದೆ, ಅಬೆಯ್ ಕುರುವಿಲ್ಲ ಆಯ್ಕೆ ಸಮಿತಿಯಿಂದ ಹೊರ ನಡೆದ ನಂತರ 5 ನೇ ಆಯ್ಕೆಗಾರರು ಇನ್ನೂ ನೇಮಕವಾಗಿಲ್ಲ. ಮತ್ತೊಬ್ಬ ಆಯ್ಕೆದಾರರ ಸಮಿತಿ ಸದಸ್ಯ, ದೇಬಶಿಶ್ ಮೊಹಂತಿ ಅಧಿಕಾರ ಅವಧಿ ಶೀಘ್ರದಲ್ಲೇ ಪೂರ್ಣಗೊಳ್ಳಿದೆ, ಆಯ್ಕೆ ಸಮಿತಿ ಸದಸ್ಯರ ಸಂಖ್ಯೆ 3 ಕ್ಕೆ ಇಳಿಯಲಿದೆ. ಸಿಎಸಿ ಹೊಸ ಆಯ್ಕೆ ಸಮಿತಿಯನ್ನು ನೇಮಿಸಿದಾಗ, ಟಿ 20 ಕ್ರಿಕೆಟ್ ಅಥವಾ ಐಪಿಎಲ್‌ನಲ್ಲಿ ತರಬೇತಿ ನೀಡಿದ ಅನುಭವ ಹೊಂದಿರುವ ಕನಿಷ್ಠ ಒಬ್ಬ ಆಯ್ಕೆದಾರರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

Story first published: Thursday, November 10, 2022, 23:11 [IST]
Other articles published on Nov 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+