ಬಿಸಿಸಿಐ ಕೋಚಿಂಗ್ ಹುದ್ದೆಗೆ ಹೆಸರುಗಳ ಶಾರ್ಟ್ ಲಿಸ್ಟ್: ಕರ್ನಾಟಕದ ಮಾಜಿ ಪ್ಲೇಯರ್‌ಗೂ ದೊಡ್ಡ ಸ್ಥಾನ ಸಾಧ್ಯತೆ
ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಸಿದ್ಧಪಡಿಸುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಶೀಘ್ರದಲ್ಲೇ ಬದಲಾವಣೆಗಳನ್ನು ಕಾಣಬಹುದಾಗಿದೆ. ಈಗಾಗಲೇ ಬಿಸಿಸಿಐ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಬಿಸಿಸಿಐ ಹಲವಾರು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ತಿಳಿದು ಬಂದಿದೆ. ಈ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವಿಆರ್‌ವಿ ಸಿಂಗ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಹೆಸರುಗಳು ಸೇರಿವೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಳಿಕ ಖಾಲಿ ಇರುವ ಕೋಚಿಂಗ್ ಹುದ್ದೆಗಳ ಸ್ಥಾನ ತುಂಬವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಾಗಿ ಬಿಸಿಸಿಐ ವಿದೇಶಿ ಬೌಲಿಂಗ್ ತಜ್ಞರನ್ನು ಹುಡುಕುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇನ್ನು ಮಂಡಳಿ ಪ್ರಸಿದ್ಧ ಇಂಗ್ಲಿಷ್ ಬೌಲಿಂಗ್ ಕೋಚ್ ಸ್ಟೀಫನ್ ಜೋನ್ಸ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿತ್ತು. ಆದರೆ ಈ ಒಪ್ಪಂದದ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ. ಕಳೆದ ವರ್ಷ ಟ್ರಾಯ್ ಕೂಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಬಿಟ್ಟ ಬಳಿಕ ಈ ಸ್ಥಾನ ಖಾಲಿ ಇತ್ತು. ಈಗ ಬಿಸಿಸಿಐ ಈ ಸ್ಥಾನ ತುಂಬಲು ಪ್ಲ್ಯಾನ್ ಮಾಡಿಕೊಂಡಿದೆ.

ಟ್ರಾಯ್ ಕೂಲಿ ಅವರ ಸ್ಥಾನವನ್ನು ತುಂಬಲು ಬಿಸಿಸಿಐ ಈಗ ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್‌ಗಳತ್ತ ಮುಖ ಮಾಡಿದೆ. ಈ ಸ್ಥಾನ ತುಂಬಲು ಈಗ ಮಂಡಳಿ ವಿಆರ್‌ವಿ ಸಿಂಗ್ ಮತ್ತು ಲಕ್ಷ್ಮಿಪತಿ ಬಾಲಾಜಿ ಅವರನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕೋಚಿಂಗ್ ಪಾತ್ರಗಳಿಗೆ ಆಯ್ಕೆ ಮಾಡುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ಬಿಸಿಸಿಐ 10 ನೂತನ ಕೋಚಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈಗ ಈ ಪ್ರಕ್ರಿಯೆ ಅಂತಿಮ ಹಂತದತ್ತ ಮುಖ ಮಾಡಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ರಣಜಿ ಚಾಂಪಿಯನ್ ಪಟ್ಟವನ್ನು ತೊಡಿಸಿದ ಬೌಲಿಂಗ್ ಕೋಚ್ ಕೃಷ್ಣಕುಮಾರ್ ಕೂಡ ಬೌಲಿಂಗ್ ಕೋಚ್ ಸಹ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಕೃಷ್ಣಕುಮಾರ್ ಅವರ ಗರಡಿಯಲ್ಲಿ ಉಮ್ರಾನ್ ಮಲಿಕ್, ಯುಧ್ವೀರ್ ಸಿಂಗ್ ಮತ್ತು ಆಕಿಬ್ ನಬಿಯಂತಹ ವೇಗದ ಬೌಲರ್‌ಗಳು ಎಲ್ಲರ ಗಮನ ಸೆಳೆದಿದ್ದಾರೆ.
ಯೆರೆ ಗೌಡ್ ಬ್ಯಾಟಿಂಗ್ ಕೋಚ್?
ಕರ್ನಾಟಕದ ಮಾಜಿ ಆಟಗಾರ ಯೆರೆ ಗೌಡ್ ಬ್ಯಾಟಿಂಗ್ ಕೋಚ್ ಆಗಿ ಬಹುತೇಕ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. 54 ವರ್ಷದ ಗೌಡ್ ತಮ್ಮ ವೃತ್ತಿಜೀವನದಲ್ಲಿ 134 ಪ್ರಥಮ ದರ್ಜೆ ಮತ್ತು 49 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಮಾಜಿ ಆಟಗಾರ್ತಿ ಸುನೇತ್ರಾ ಪರಾಂಜಪೆ ಅವರನ್ನು ಬ್ಯಾಟಿಂಗ್ ಕೋಚಿಂಗ್ ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ದಿಶಾಂತ್ ಯಾಗ್ನಿಕ್ ಅವರ ಫೀಲ್ಡಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಬಹುದಾಗಿದೆ. ಇವರು ಸದ್ಯ ಕೆಕೆಆರ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications