ಜಮ್ಮು-ಕಾಶ್ಮೀರ್ ದಾಳಿ ಹಿನ್ನೆಲೆ, ಬಿಸಿಸಿಐ ಮಹತ್ವದ ನಿರ್ಧಾರ: ಆಟಗಾರರ ಸಂತಾಪ
ಇಷ್ಟು ದಿನಗಳ ತಣ್ಣಗಿದ್ದ ಜಮ್ಮು ಕಾಶ್ಮೀರ್‌ದಲ್ಲಿ ಮತ್ತೆ ನೆತ್ತರು ಹರಿದಿದೆ. ಈ ಬಾರಿಯ ಉಗ್ರ ಅಟ್ಟಹಾಸಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಯಾರೂ ಊಹೀಸದ ಕೆಲಸವನ್ನು ಉಗ್ರರರು ಮಾಡಿ ಮುಗಿಸಿದ್ದಾರೆ. ಜಮ್ಮು ಕಾಶ್ಮೀರ್‌ದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದು, ದೇಶವೇ ಬೆಚ್ಚಿ ಬಿದ್ದಿದೆ. ಈ ದಾಳಿಯಲ್ಲಿ ಜಮ್ಮು ಕಾಶ್ಮೀರ್ ಸುಂದರ ತಾಣವನ್ನು ಪ್ರಯಾಣ ಬೆಳೆಸಿದ್ದ 27ಕ್ಕೂ ಹೆಚ್ಚು ಅಮಾಯಕರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಇನ್ನು 17ಕ್ಕೂ ಹೆಚ್ಚು ಜ ಗಾಯ ಗೊಂಡಿದ್ದಾರೆ. ಈ ದಾಳಿಯ ಬಳಿಕ ದೇಶದಲ್ಲಿ ಶೋಕ ಮಡುಗಟ್ಟಿದೆ.
ಜಮ್ಮುವಿನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ದೇಶವಾಸಿಗಳು ಕೆಂಡ ಕಾರಿದ್ದಾರೆ. ವಿದೇಶಿಗರು ಸಹ ಈ ಘಟನೆಯನ್ನು ಟೀಕಿಸಿವೆ. ಇನ್ನು ಬುಧವಾರ ಘಟನಾ ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರರು ಸಹ ಈ ಘಟನೆಯನ್ನು ಖಂಡೀಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಿಸಿಸಿಐ ಸಹ ಖಂಡಿಸಿದ್ದು ಪ್ರಮುಖ ತೀರ್ಮಾನವನ್ನು ಕೈಗೊಂಡಿದೆ. ಹೈದರಾಬಾದ್‌ನ ರಾಜೀವ್ ಗಾಂಧೀ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ವೇಳೆ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಲಿದ್ದಾರೆ. ಇನ್ನು ಈ ಪಂದ್ಯದಲ್ಲಿ ಚಿಯರ್ ಲೀಡರ್‌ಗಳು ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.
ಈ ಘಟನೆಯ ಬಗ್ಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಸಹ ತಮ್ಮ ಅನಸಿಕೆಯನ್ನು ಹೊರ ಹಾಕಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ದುಃಖಕರ. ಮೃತರ ಕುಟುಂಬಕ್ಕೆ ಸಂತಾಪಗಳು. "ಈ ಘಟನೆಯಲ್ಲಿ ಜೀವ ಕಳೆದುಕೊಂಡು ಕುಟುಂಬಗಳಿಗೆ ಭಗವಂತ ಶಾಂತಿ ಹಾಗೂ ಶಕ್ತಿಯನ್ನು ನೀಡಲಿ ಎಂದು ಪ್ರರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಓಪನರ್ ಶುಭಮನ್ ಗಿಲ್ ಸಹ ತಮ್ಮ ಸಂತಾಪಗಳನ್ನು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿ ನೋವು ತಂದಿದೆ. ಸಾವನ್ನಪ್ಪಿದವರ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ ಎಂದು ಯುವರಾಜ್ ಸಿಂಗ್ ಪ್ರಾರ್ಥಿಸಿದ್ದಾರೆ. ಈ ಕೃತ್ಯದಲ್ಲಿ ಯಾರದ್ದೇ ಕೈವಾಡ ಇದ್ರು ಅವನ್ನು ಗುರುತಿಸಿ ಅವರಿಗೆ ಕಠಿಣ ಶೀಕ್ಷೆ ನೀಡಬೇಕು ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಮತ್ತು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸಾಮಾಜಿಕ ತಾಣದಲ್ಲಿ ಸಂತಾಪಗಳನ್ನು ತಿಳಿಸಿದ್ದಾರೆ. ದೇಶ ಇಷ್ಟೊಂದು ನಷ್ಟ ಅನುಭವಿಸಿರುವು ನೋವಿನ ಸಂಗತಿ. ಯಾವುದೇ ಕಾರಣಕ್ಕೂ ಇಂತಹ ದೌರ್ಜನ್ಯವನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಉಗ್ರರ ಭಯೋತ್ಪಾದಕ ದಾಳಿಗೆ ಹತ್ಯಗೊಳಗಾದ ಕುಟುಂಬಗಳ ಜೊತೆ ನಾವು ಇರುವುದಾಗಿ ಬರೆದುಕೊಂಡಿದ್ದಾರೆ. ಇನ್ನು ನೀರಜ್ ಚೋಪ್ರಾ ಸಹ ಈ ಖಂಡನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಸಾವನ್ನಪ್ಪಿದ ಅಮಾಯಕರ ಸಾವಿಗೆ ನೀರಜ್ ಕಂಬನಿ ಮಿಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications