ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐನಿಂದ "ಟೀಮ್ ಮಾಸ್ಕ್ ಫೋರ್ಸ್‌": ಪ್ರಧಾನಿ ಮೋದಿ ಪ್ರಶಂಸೆ

Bcci Creates Team Mask Force, Pm Modi Prises

ಕೊರೊನಾ ವೈರಸ್ ವಿರುದ್ಧ ನಾನಾ ರೀತಿಯಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತಿದೆ. ಸರ್ಕಾರ ಕೆಲ ಕಟ್ದಟುನಿಟ್ಟಿನ ಆದೇಶವನ್ನು ನಿಡಿದ್ದರೂ ಇದನ್ನು ಜನರು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ. ಹೀಗಾಗಿ ಸಲೆಬ್ರಿಟಿಗಳು ಈ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವುಮೂಡಿಸುವ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಹಾಗೆಯೇ ಬಿಸಿಸಿಐ ಕೂಡ ಟೀಮ್ ಇಂಡಿಯಾದ ಹಾಲಿ ಮಾಜಿ ಆಟಗಾರರನ್ನು ಬಳಸಿಕೊಂಡು ಹೊಸ ರೀತಿಯಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಕೊರೊನಾ ವಿರುದ್ಧ ಹೋರಾಟವನ್ನು ನಡೆಸಲು ಮಾಸ್ಕ್ ಪ್ರಮುಖ ಪಾತ್ರವಹಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕೆಂದು ಟೀಮ್ ಇಂಡಿಯಾದ ಹಾಲಿ ಮತ್ತು ಮಾಜಿ ಆಟಗಾರರ ಮೂಲಕ ವಿಶೇಷ ಮನವಿಯನ್ನು ಮಾಡಿಕೊಳ್ಳಲಾಗಿದೆ. ಅದಕ್ಕಾಗಿಯೇ ರೂಪಿತವಾಗಿದೆ "ಟೀಮ್ ಮಾಸ್ಕ್ ಪೋರ್ಸ್".

ನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗ

ಟೀಮ್ ಇಂಡಿಯಾದ ಸೆಲೆಬ್ರಿಟಿಗಳು ಮನೆಯಲ್ಲೇ ತಾವೇ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಿ ವಿಶೇಷ ವಿಡಿಯೋ ಮಾಡಿ ಈ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೆಲ್ಲಾ ಒಟ್ಟಾಗಿ ಜೋಡಿಸಿ ಈ ಬಗ್ಗೆ ಬಿಸಿಸಿಐ ಒಂದು ಸಂದೇಶವನ್ನು ನೀಡುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಸ್ಮೃತಿ ಮಂಧಾನ, ರೋಹಿತ್ ಶರ್ಮಾ, ಹರ್ಭಜನ್ ಸಿಂಗ್, ಹರ್ಮನ್ ಪ್ರೀತ್ ಕೌರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್ ಸಚಿನ್ ತೆಂಡೂಲ್ಕರ್ ಈ ವಿಡಿಯೋದಲ್ಲಿ ತಾವೇ ತಯಾರಿಸಿದ ಮಾಸ್ಕ್‌ನೊಂದಿಗೆ ಸಾರ್ವಜನಿಕರಿಗೆ ಸಂದೇಶವನ್ನು ನೀಡಿದ್ದಾರೆ.

ಪುತ್ರಿಯೊಂದಿಗೆ 'ಶೀಲಾ ಕಿ ಜವಾನಿ'ಗೆ ಡ್ಯಾನ್ಸ್ ಮಾಡಿದ ವಾರ್ನರ್: ವೀಡಿಯೋಪುತ್ರಿಯೊಂದಿಗೆ 'ಶೀಲಾ ಕಿ ಜವಾನಿ'ಗೆ ಡ್ಯಾನ್ಸ್ ಮಾಡಿದ ವಾರ್ನರ್: ವೀಡಿಯೋ

ಬಿಸಿಸಿಐ ರಚಿಸಿದ ಈ 'ಟೀಮ್ ಮಾಸ್ಕ್ ಫೋರ್ಸ್' ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇವತ್ತಿನ ಅನಿವಾರ್ಯ ಟಾಸ್ ಇದು ಎಂದಿರುವ ಪ್ರಧಾನಿ ಎಲ್ಲರು ಈ ಟೀಮ್ ಟಾಸ್ಕ್ ಫೋರ್ಸ್‌ನಲ್ಲಿ ಭಾಗಿಗಳಾಗಿ ಎಂದಿದ್ದಾರೆ. ಸಣ್ಣದಾದರೂ ಅತ್ಯಗತ್ಯವಿರುವ ಮುನ್ನೆಚ್ಚರಿಕೆ ನಮ್ಮೆಲ್ಲರನ್ನೂ ಸುರಕ್ಷಿತವಾಗಿಡುತ್ತದೆ ಎಂದು ಪ್ರಧಾನಿ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.

Story first published: Sunday, April 19, 2020, 11:26 [IST]
Other articles published on Apr 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X