ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಲೆ ಪಿಚ್ ಫಿಕ್ಸಿಂಗ್ ಆರೋಪ ಸಾಬೀತಾದರೆ ಕ್ರಮ: ಬಿಸಿಸಿಐ

BCCI decides to wait and watch on pitch-fixing sting

ನವದೆಹಲಿ, ಮೇ 27: ಕಳೆದ ವರ್ಷ ನಡೆದಿದ್ದ ಗಾಲೆ ಟೆಸ್ಟ್ ವೇಳೆ ಪಿಚ್ ಫಿಕ್ಸಿಂಗ್ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಆರೋಪ ಸಾಬೀತಾದರೆ ಮಾಜಿ ಕ್ರಿಕೆಟಿಗ ರಾಬಿನ್ ಮೋರಿಸ್ ಅವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿ ಭಾನುವಾರ ಪ್ರತಿಕ್ರಿಯಿಸಿರುವ ಬಿಸಿಸಿಐ, 'ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ರಾಬಿನ್ ಮೋರಿಸ್ ವಿರುದ್ಧ ಕ್ರಮ ಜರುಗಿಸಲಾಗುವುದು. ಅದೂ ಐಸಿಸಿ ಕ್ರಿಕೆಟ್ ಗೆ ಸಂಬಂಧಿಸಿ ಅವರು ತಪ್ಪಿತಸ್ಥರೆಂದು ಸಾಭೀತಾದರೆ ಮಾತ್ರ' ಎಂದಿದೆ.

ಮತ್ತೆ ಬಡಿದ ಸ್ಪಾಟ್ ಫಿಕ್ಸಿಂಗ್ ವಾಸನೆ: ಭಾರತೀಯರ ಜತೆ ಪಾಕ್ ಮಾಜಿ ಕ್ರಿಕೆಟಿಗಮತ್ತೆ ಬಡಿದ ಸ್ಪಾಟ್ ಫಿಕ್ಸಿಂಗ್ ವಾಸನೆ: ಭಾರತೀಯರ ಜತೆ ಪಾಕ್ ಮಾಜಿ ಕ್ರಿಕೆಟಿಗ

ಕಳೆದ ವರ್ಷ ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಪಿಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಕತಾರ್ ಮೂಲದ ಅಲ್ ಜಜೀರ್ ಟಿವಿ ನೆಟ್ ವರ್ಕ್ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಪಿಚ್ ಫಿಕ್ಸರ್ ಒಬ್ಬ ತಾನು ಗಾಲೆ ಗ್ರೌಂಡ್ ಮನ್ ಗೆ ಲಂಚ ನೀಡಿ ಪಿಚ್ ತಿರುಚಿಸಿದ್ದೆ ಎಂದು ಒಪ್ಪಿಕೊಂಡಿದ್ದ. ಇದು ಫಿಕ್ಸಿಂಗ್ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಮುಂಬೈಯ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಾಬಿನ್ ಮೋರಿಸ್ ಅವರು ಗಾಲೆ ಗ್ರೌಂಡ್ ಮನ್ ಒಬ್ಬನಿಗೆ ಹಣ ನೀಡಿ ಪಿಚ್ ತಿರುಚಿರುವುದಾಗಿ ಸ್ಟಿಂಗ್ ಆಪರೇಶನ್ ನಲ್ಲಿ ಒಪ್ಪಿಕೊಂಡಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದೆ.

2017ರ ಜುಲೈ 26ರಿಂದ 29ರವರೆಗೆ ಗಾಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಟೆಸ್ಟ್ ಸರಣಿ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 304 ರನ್ ಗಳಿಂದ ಭರ್ಜರಿ ಜಯಭೇರಿ ಬಾರಿಸಿತ್ತು. ಪಂದ್ಯ ಮುಗಿದು ಇನ್ನೇನು ಬರುವ ಜುಲೈಗೆ ಒಂದು ವರ್ಷವೇ ಕಳೆದು ಕಳೆದು ಹೋಗುವುದರಲ್ಲಿದೆ. ಈ ಮಧ್ಯೆ ಭಾರತ ಫಿಕ್ಸಿಂಗ್ ಕಂಟಕಕ್ಕೆ ಅಂಟಿಕೊಂಡಿದೆ.

Story first published: Monday, May 28, 2018, 20:05 [IST]
Other articles published on May 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X