Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಆಟಗಾರ್ತಿಯರಿಗೆ BCCI ಗಿಫ್ಟ್‌: ಸಂಬಳ ಡಬಲ್‌

ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿಯಲಿದ್ದು, ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಸಿದ್ಧರಾಗಿದ್ದಾರೆ. ಇದೇ ವೇಳೆ ಬಿಸಿಸಿಐ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಗುಡ್‌ ನ್ಯೂಸ್‌ ನೀಡಿದೆ. ಇತ್ತೀಚಿಗೆ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರ ಪಂದ್ಯ ಶುಲ್ಕವನ್ನು ಹೆಚ್ಚಿಸಲು ತೀರ್ಮಾನವನ್ನು ಕೈಗೊಳ್ಳಲಾಗಿದೆ. ದೇಶೀಯ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಈ ಬಾರಿ ಬಿಸಿಸಿಐ ಆಟಗಾರ್ತಿಯರ ವೇತನವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ಮಹಿಳಾ ಕ್ರಿಕೆಟ್‌ನ ಉತ್ತೇಜಿಸುವ ದೃಷ್ಟಿಯಿಂದ ಇದು ಒಂದು ಒಳ್ಳೆಯ ಬೆಳವಣಿಗೆ ಆಗಿದೆ. ಭಾರತ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಇತಿಹಾಸ ಬರೆದಿತ್ತು.

BCCI Doubles Salaries for Domestic Women Cricketers A Major Boost Ahead of 2025 New Year

ಈ ವರೆಗೆ ದೇಶೀಯ ಮಹಿಳಾ ಆಟಗಾರ್ತಿಯರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿತ್ತು. ಹಿರಿಯ ಮಹಿಳಾ ಟೂರ್ನಿಗಳಲ್ಲಿ ಆಡುವ ಆಟಗಾರ್ತಿಯ ವೇತನ ಎರಡು ಪಟ್ಟು ಹೆಚ್ಚಿಸಲಾಗಿದೆ. ಈ ಮೊದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಆಟಗಾರ್ತಿ ದಿನಕ್ಕೆ 20 ಸಾವಿರ ರೂ. ಪಡೆಯುತ್ತಿದ್ದರು. ಈಗ ಈ ಮೊತ್ತವನ್ನು 50 ಸಾವಿರಕ್ಕೆ ಏರಿಸಲಾಗಿದೆ. ಇನ್ನು ತಂಡದ ಮೀಸಲು ಆಟಗಾರ್ತಿಯರಿಗೆ ದಿನಕ್ಕೆ 10 ಸಾವಿರ ರೂ. ನೀಡಲಾಗುತ್ತಿತ್ತು. ಆದರೆ ಪರಿಷ್ಕೃತ ದರದಲ್ಲಿ ಮೀಸಲು ಆಟಗಾರ್ತಿಯರು ಸಹ 25 ಸಾವಿರ ರೂಪಾಯಿಗಳನ್ನು ಪಡೆಯಲಿದ್ದಾರೆ.

ಜೂನಿಯರ್ ಆಟಗಾರ್ತಿಯರ ಮುಖದಲ್ಲೂ ನಗೆ

ಜೂನಿಯರ್ ತಂಡದಲ್ಲಿ, ಆಡುವ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಆಟಗಾರ್ತಿಯರು ದಿನಕ್ಕೆ ₹10,000 ಮತ್ತು ಮೀಸಲು ಆಟಗಾರ್ತಿಯರು ದಿನಕ್ಕೆ ₹5,000 ಪಡೆಯುತ್ತಿದ್ದರು. ಈ ಆಟಗಾರ್ತಿಯರು ಇನ್ನು ಮುಂದೆ ಆಡುವ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರ್ತಿ ₹25,000 ಮತ್ತು ಮೀಸಲು ಆಟಗಾರ್ತಿಯರಿಗೆ ದಿನಕ್ಕೆ ₹12,500 ಹಣ ಪಡೆಯಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆಡುವ ಆಟಗಾರ್ತಿಯರ ಮುಖದಲ್ಲೂ ಸಹ ನಗೆ ಮೂಡಿದೆ. ಇನ್ನು ಮುಂದೆ ಚುಟುಕು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಆಟಗಾರ್ತಿ ₹25,000 ಪಡೆದರೆ, ಮೀಸಲು ಆಟಗಾರ್ತಿ ₹12,500 ಪಡೆಲಿದ್ದಾರೆ.

ಬರೀ ಆಟಗಾರ್ತಿಯರು ಅಷ್ಟೇ ಅಲ್ಲ ಇದರ ಲಾಭವನ್ನು ಅಂಪೈರ್‌ಗಳು, ಮ್ಯಾಚ್‌ ರೆಫರಿಗಳು, ಅಧಿಕಾರಿಗಳು ಸಹ ಪಡೆಯಲಿದ್ದಾರೆ. ಲೀಗ್‌ ಹಂತದಲ್ಲಿ ಈ ಅಧಿಕಾರಿಗಳು ದಿನಕ್ಕೆ 40 ಸಾವಿರ ಪಡೆಯಲಿದ್ದಾರೆ. ನಾಕೌಟ್‌ ಹಂತದಲ್ಲಿ ಸುಮಾರು 50 ಸಾವಿರದಿಂದ 60 ಸಾವಿರ ರೂ. ಪಡೆಯಹುದಾಗಿದೆ.

Story first published: Tuesday, December 23, 2025, 9:31 [IST]
Other articles published on Dec 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+