Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ 'ಡ್ರೀಮ್ ಪ್ರಾಜೆಕ್ಟ್' ಮುಕ್ತಾಯ‌; ಜಯ್‌ ಶಾ ಘೋಷಣೆ!

ಆಗಸ್ಟ್‌ 3 ಶನಿವಾರ, ಭಾರತೀಯ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ಯಲು ಬಿಸಿಸಿಐ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಉದ್ಘಾಟನೆಗೆ ಸಿದ್ಧವಾಗಿದೆ.

ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹಂಚಿಕೊಂಡಿದ್ದಾರೆ. ಈ ಅಕಾಡೆಮಿಯು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಇದರೊಂದಿಗೆ ಭಾರತದ ಆಟಗಾರರಿಗೆ ವಿಶ್ವದರ್ಜೆಯ ಸೌಲಭ್ಯ ಸಿಗಲಿದೆ. ಜೊತೆಗೆ ಭಾರತ ಕ್ರಿಕೆಟ್‌ನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಿದೆ.

BCCI dream project ends in Bengaluru

ಜಯ್‌ ಶಾ ಮಾಹಿತಿ

ಭಾರತದ ಆಟಗಾರರಿಗಾಗಿ ಹೊಸ ಅತ್ಯಾಧುನಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಹುತೇಕ ಸಿದ್ಧವಾಗಿದೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ. ಈ ಅಕಾಡೆಮಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದ್ದು, ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರಲಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಸುಧಾರಣೆ ತರಲು ಬಿಸಿಸಿಐ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಅಕಾಡೆಮಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಜಯ್ ಶಾ, 'ಬಿಸಿಸಿಐನ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಉದ್ಘಟನೆ ಆಗಲಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ.

ಹೊಸ ಎನ್‌ಸಿಎ ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, 45 ಅಭ್ಯಾಸ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್, ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ವಿಶ್ರಾಂತಿ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಹೊಂದಿರುತ್ತದೆ.

ಈ ಉಪಕ್ರಮವು ನಮ್ಮ ದೇಶದ ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರು ತಮ್ಮ ಸಾಮರ್ಥ್ಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಹೊಸ ಎನ್‌ಸಿಎ ಕುರಿತು ಹೇಳಿದ್ದಾರೆ. ಪ್ರಸ್ತುತ ಎನ್‌ಸಿಎ ಮುಖ್ಯಸ್ಥರಾಗಿ ಭಾರತದ ದಿಗ್ಗಜ ಬ್ಯಾಟರ್‌ ವಿವಿಎಸ್ ಲಕ್ಷ್ಮಣ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೊಸ ಎನ್‌ಸಿಎ ವಿಶೇಷತೆಗಳೇನು?

ಒಳಾಂಗಣ ಪಿಚ್: ಮಳೆಗಾಲ ಅಥವಾ ಇನ್ನಿತರ ಸಂದರ್ಭಗಳಲ್ಲಿ ಆಟಗಾರರು ಅಭ್ಯಾಸ ಮಾಡಲು ಒಳಾಂಗಣ ಪಿಚ್‌ ಉಪಯುಕ್ತವಾಗಿವೆ. ಇದಕ್ಕಾಗಿ ಅಕಾಡೆಮಿಯಲ್ಲಿ ಒಳಾಂಗಣ ಪಿಚ್ ನಿರ್ಮಾಣ ಮಾಡಲಾಗಿದೆ.

ವಿಶ್ವ ದರ್ಜೆಯ ಸೌಲಭ್ಯಗಳು: ಅಕಾಡೆಮಿಯು ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, 45 ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳ, ಚೇತರಿಕೆ ಕೇಂದ್ರ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಒಳಗೊಂಡಿದೆ.

ಆಧುನಿಕ ತರಬೇತಿ ಕೇಂದ್ರ: ಆಟಗಾರರ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸುವ ಸಲುವಾಗಿ ಅಕಾಡೆಮಿಯಲ್ಲಿ ಆಧುನಿಕ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ.

ಇಷ್ಟೆ ಅಲ್ಲದೆ, ಯಾವುದೇ ಆಟಗಾರ ಗಾಯಗೊಂಡರೆ, ಅವರು ಚೇತರಿಸಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

Story first published: Saturday, August 3, 2024, 23:26 [IST]
Other articles published on Aug 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+