ಮೂರು ತಿಂಗಳೊಳಗೆ ಬಿಸಿಸಿಐ ಚುನಾವಣೆ: ಸಿಒಎ

ನವದೆಹಲಿ, ಆಗಸ್ಟ್ 28: ಇನ್ನು 90 ದಿನಗಳ ಒಳಗೆ ಬಿಸಿಸಿಐಗೆ ಹೊಸದಾಗಿ ಚುನಾವಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ನೇಮಿತ ಆಡಳಿತ ಸಮಿತಿ (ಸಿಒಎ) ಘೋಷಿಸಿದೆ.
'90 ದಿನಗಳ ಒಳಗೆ ಚುನಾವಣೆ ನಡೆಸಲಿದ್ದೇವೆ. ಸೆಪ್ಟೆಂಬರ್ 20ರಂದು ದಿನಾಂಕ ನೀಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ.
ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದ ಕೂಡಲೇ ಸಿಒಎ ತನ್ನ ಎಲ್ಲ ಅಧಿಕಾರವನ್ನು ಹಸ್ತಾಂತರಿಸಿ ನಿರ್ಗಮಿಸಲಿದೆ. ಸಿಒಎ ನಿರ್ದಿಷ್ಟ ನಿರ್ದೇಶನವನ್ನು ನೀಡಲಾಗಿದೆ. ಉಳಿದಂತೆ ಒಂದು ದಿನವೂ ನಾವು ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಕಾನೂನು ಹೋರಾಟ ನಡೆಸುತ್ತಿರುವ ಬಿಸಿಸಿಐ ಕೊನೆಗೂ ಸ್ವತಂತ್ರವಾಗುವ ನಿರೀಕ್ಷೆ ಮೂಡಿದೆ.
ಸುಪ್ರೀಂಕೋರ್ಟ್ ಸೂಚಿಸಿರುವ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರ ವಿರುದ್ಧ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಹೊಸ ನಿಯಮಾವಳಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವುದರಲ್ಲಿ ರಾಜ್ಯ ಸಂಸ್ಥೆಗಳು ಕೆಲವು ಸಮಸ್ಯೆಗಳಿವೆ ಎಂದು ರಾಯ್ ಹೇಳಿದ್ದಾರೆ.
ಸ್ಥಳೀಯ ಆಟಗಾರರ ಒನ್ ಟೈಮ್ ಬೆನಿಫಿಟ್ಸ್ ಮತ್ತು ಪಿಂಚಣಿ ಏರಿಕೆಯ ಸಮಸ್ಯೆಗಳು ಬಗೆಹರಿದಿವೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications